ವಿವಿಧ ಟಿಬೆಟಿಯನ್ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು

ವಿವಿಧ ಟಿಬೆಟಿಯನ್ ಸಂಘಟನೆಗಳಿಂದ ಪ್ರತಿಭಟನೆ

May 18, 2019

ಮೈಸೂರು: ಟಿಬೆಟಿಯನ್ನರ 11ನೇ ಪಂಚೆನ್ ಲಾಮಾ ಕಾಣೆಯಾಗಿ 24 ವರ್ಷಗಳಾಗಿದ್ದು, ಅವರ ಹಾಗೂ ಇನ್ನಿತರ ಎಲ್ಲಾ ಕೈದಿಗಳ ಇರುವಿಕೆಯ ಬಗ್ಗೆ ಚೀನಾ ಬಹಿರಂಗಪಡಿಸಬೇಕು. ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬೈಲಕುಪ್ಪೆ, ಹುಣಸೂರು ಮತ್ತು ಕೊಳ್ಳೇಗಾಲದ ಪ್ರಾಂತೀಯ ಟಿಬೆಟಿಯನ್ ಯುವ ಕಾಂಗ್ರೆಸ್ ಮತ್ತು ಪ್ರಾಂತೀಯ ಟಿಬೆಟಿಯನ್ ಮಹಿಳಾ ಸಂಘಟನೆಯ ಸದಸ್ಯರು ಶುಕ್ರವಾರ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಮಾವಣೆಗೊಂಡು ಪಂಚೆನ್ ಲಾಮಾರ ಬಿಡುಗಡೆಗಾಗಿ ಪ್ರಾರ್ಥಿಸಿದರು. ಬಳಿಕ ಸಂಘ ಟನೆಗಳ ಮುಖಂಡರು ಮಾತನಾಡಿದರು. ನಂತರ ಆಂಜ ನೇಯಸ್ವಾಮಿ ದೇವಸ್ಥಾನದ ಅವರಣದಿಂದ ದೊಡ್ಡ ಗಡಿಯಾರ ವೃತ್ತ, ಗಾಂಧಿ ವೃತ್ತ, ವಿನೋಬ ರಸ್ತೆ, ದೇವ ರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಹುಣಸೂರು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿ ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿದರು.

`11ನೇ ಪಂಚೆನ್‍ಲಾಮಾರ ಬಿಡುಗಡೆಯಾಗಲಿ, ಟಿಬೆಟ್ ನಮ್ಮ ದೇಶ, ಟಿಬೆಟಿಯನ್ ನಮ್ಮ ಭಾಷೆ, ಸ್ವಾತಂತ್ರ್ಯ ನಮ್ಮ ಹಕ್ಕು, ಟಿಬೆಟ್‍ನಲ್ಲಿ ಚೀನಾ ನಡೆಸುತ್ತಿರುವ ಸಾಂಸ್ಕøತಿಕ ನರಮೇಧ ನಿಲ್ಲಲಿ. ಚೀನಾದಿಂದ ಟಿಬೆಟ್ ನಾಶ ನಿಲ್ಲಲಿ, ಟಿಬೆಟ್ ಚೈನಾದ ಭಾಗವಲ್ಲ ಎಂಬ ಘೋಷ ವಾಕ್ಯಗಳ ಭಿತ್ತ್ತಿಪತ್ರಗಳನ್ನು ಪ್ರದರ್ಶಿಸಿದರು.

ಪಂಚೆನ್‍ಲಾಮಾ ಪ್ರಕರಣ ರಾಜಕೀಯ ಪ್ರೇರಿತ ಹಾಗೂ ಧಾರ್ಮಿಕ ದುರುದ್ದೇಶದಿಂದ ಕೂಡಿದೆ. ಚೀನಿ ಯರ ದುರಾಡಳಿತ ವ್ಯವಸ್ಥೆಯಿಂದ ಟಿಬೆಟಿಯನ್ನರು ಕಷ್ಟ ಅನುಭವಿಸುವಂತಾಗಿದೆ. ಚೀನಿಯರಿಂದಾಗಿ 160 ಟಿಬೆಟಿ ಯನ್ನರ ಆತ್ಮಾಹುತಿಯಂತಹ ಘಟನೆಗಳೂ ವಿಶ್ವ ಸಂಸ್ಥೆಯ ಮಾನವ ಹಕ್ಕು ನಿಯಮದ ಉಲ್ಲಂಘನೆ ಯಾಗಿದೆ ಎಂದು ದೂರಿದರು. ಟಿಬೆಟಿಯನ್ನರ ಹಕ್ಕು ಗಳನ್ನು ಗೌರವಿಸಬೇಕು. ನಮ್ಮ ಸಮಸ್ಯೆಯನ್ನು ಪರಿಹ ರಿಸಲು ದಲೈಲಾಮಾರ ಮಧ್ಯಂತರ ಕೋರಿಕೆಯನ್ನು ಗೌರವಿಸಿ ಎಲ್ಲಾ ಟಿಬೆಟಿಯನ್ ಕೈದಿಗಳನ್ನು ಬಿಡುಗಡೆ ಮಾಡÀಬೇಕು ಎಂದು ಆಗ್ರಹಿಸಿದರು.

Translate »