ಜೆ.ಕೆ. ಟೈರ್ಸ್‍ಗೆ 270 ಕೋಟಿ ರೂ. ಲಾಭ
ಮೈಸೂರು

ಜೆ.ಕೆ. ಟೈರ್ಸ್‍ಗೆ 270 ಕೋಟಿ ರೂ. ಲಾಭ

May 18, 2019

ಮೈಸೂರು: ಭಾರತದ ಪ್ರಮುಖ ಟೈರ್ ತಯಾರಕ ಸಂಸ್ಥೆ ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ 31 ಮಾರ್ಚ್ 2019ಕ್ಕೆ ಅಂತ್ಯಗೊಂಡಂತೆ ಈ ಆರ್ಥಿಕ ವರ್ಷದ ಫಲಿತಾಂಶ ಗಳನ್ನು ಪ್ರಕಟಿಸಿದೆ.

ಈ ವರ್ಷ ಮಾರಾಟವು ರೂ. 10,370 ಕೋಟಿಗಳಿದ್ದು, 24% ಹೆಚ್ಚಳ ಕಂಡಿದೆ. ಈ ವರ್ಷದ ಕಾರ್ಯಾಚರಣೆ ಲಾಭ ರೂ. 1,196 ಕೋಟಿ ಗಳಲ್ಲಿ 35% ಹೆಚ್ಚಳ ಕಂಡಿದೆ. ಸಂಚಿತ ಆಧಾರದ ಮೇಲೆ ವರ್ಷದ ತೆರಿಗೆಗೆ ಮುನ್ನ ಲಾಭ ರೂ. 270 ಕೋಟಿಗಳಿದ್ದು ಕಳೆದ ವರ್ಷದ ತತ್ಸಮಾನ ಅವಧಿಗೆ ಹೋಲಿಸಿದರೆ, ರೂ. 2706ಗಳಲ್ಲಿ 4ನೇ ತ್ರೈಮಾಸಿಕಕ್ಕೆ ಮಾರಾಟ 18% ಏರಿಕೆ ಕಂಡಿದೆ ಎಂದು ಸಂಸ್ಥೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ರಘುಪತಿ ಸಿಂಘಾನಿಯಾ ತಿಳಿಸಿದ್ದಾರೆ.

ಜೆಕೆ ಟೈರ್ ಮಾರಾಟವು ರೂ.10,000 ಕೋಟಿ ದಾಟಿ, ಮುಂಚಿನ ವರ್ಷಕ್ಕೆ ಹೋಲಿಸಿದರೆ 24% ನಷ್ಟು ಬಲಿಷ್ಟ ಬೆಳವಣಿಗೆ ಕಂಡಿದೆ. ಕಚ್ಚಾ ಸಾಮಗ್ರಿಗಳ ಬೆಲೆ ಅಧಿಕವಾಗಿದ್ದ ಕಾರಣ ಲಾಭದಾಯಕತೆಯ ಮೇಲೆ ಪರಿಣಾಮ ಉಂಟಾಗಿಯೂ ಈ ವರ್ಷಕ್ಕೆ ಕಾರ್ಯಾ ಚರಣೆ ಲಾಭಾಂಶವು ಒಟ್ಟಾರೆಯಾಗಿ 35% ಹೆಚ್ಚಳ ಕಂಡಿದೆ ಎಂದರು.

Translate »