ಹೈಕೋರ್ಟ್ ತೀರ್ಪಿಗೆ ಜೆ.ಕೆ.ಟೈರ್ಸ್ ಕಾರ್ಮಿಕರ ಸ್ವಾಗತ
ಮೈಸೂರು

ಹೈಕೋರ್ಟ್ ತೀರ್ಪಿಗೆ ಜೆ.ಕೆ.ಟೈರ್ಸ್ ಕಾರ್ಮಿಕರ ಸ್ವಾಗತ

July 1, 2018

ಮೈಸೂರು: ಕಾರ್ಮಿಕರ ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಕ್ಕೆ ಹೆಚ್ಚಿಸಿ ನೀಡಿರುವ ಹೈಕೋರ್ಟ್ ತೀರ್ಪನ್ನು ಮೈಸೂರಿನ ಜೆ.ಕೆ. ಟೈರ್ಸ್ ಕಾರ್ಮಿಕರು ಸ್ವಾಗತಿಸಿದ್ದಾರೆ.

ಕೆಆರ್‍ಎಸ್ ರಸ್ತೆಯಲ್ಲಿರುವ ಜೆ.ಕೆ.ಟೈರ್ಸ್ ಕಾರ್ಖಾನೆ ಎದುರು ಇಂದು ಮಧ್ಯಾಹ್ನ ಸಂಭ್ರಮಾಚರಣೆ ನಡೆಸಿರುವ ಅವರು ನ್ಯಾಯಾಲಯದ ತೀರ್ಪಿನಿಂದ ರಾಜ್ಯದಾದ್ಯಂತ ಲಕ್ಷಾಂತರ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಅವಲಂಭಿತ ಸದಸ್ಯರಿಗೆ ಅನುಕೂಲವಾಗಿದೆ ಎಂದು ವಿಟಿಇಯು ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ತಿಳಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ವಿಜಿ ಕೆ.ನಾಯಕ್, ಕಾರ್ಮಿಕ ಸಂಘದ ಅಧ್ಯಕ್ಷ ಭರತ್ ರಾಜ್, ಪದಾಧಿಕಾರಿಗಳಾದ ಕಾಂತರಾಜ್, ಮುರಳೀಧರ್, ಅಂತೋಣಿ ರಾಜ್, ಟಿ.ಎಲ್. ನಾಗರಾಜ್ ಮಲ್ಲೇಶ್ ಸೇರಿದಂತೆ ಹಲವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »