ಕೊಡಗು ಮೂಲಕ ಹಾದುಹೋಗುವ ರೈಲು  ಮಾರ್ಗ, ಹೆದ್ದಾರಿ ಯೋಜನೆಗೆ ಹೈಕೋರ್ಟ್ ತಡೆ
ಕೊಡಗು

ಕೊಡಗು ಮೂಲಕ ಹಾದುಹೋಗುವ ರೈಲು ಮಾರ್ಗ, ಹೆದ್ದಾರಿ ಯೋಜನೆಗೆ ಹೈಕೋರ್ಟ್ ತಡೆ

February 12, 2019

ಮಡಿಕೇರಿ: ಕೊಡಗಿನ ಮೂಲಕ ಹಾದು ಹೋಗುವ ರೈಲು ಮಾರ್ಗ ಮತ್ತು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೈ ಕೋರ್ಟ್‍ನಲ್ಲಿ ದಾಖಲಾಗಿರುವ ಸಾರ್ವಜನಿಕ ಹಿತಾಸ ಕ್ತಿಯ ಅರ್ಜಿಯ ವಿಚಾರಣೆ ಮುಕ್ತಾಯ ವಾಗುವವರೆಗೂ ಯೋಜನೆಗೆ ಸಂಬಂಧಿ ಸಿದಂತೆ ಯಾವುದೇ ಕಾಮಗಾರಿ ನಡೆಸ ದಂತೆಯೂ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯಲ್ಲಿ ಸೂಚಿಸಲಾಗಿದೆ ಎಂದು ದೂರುದಾರ ನಿವೃತ್ತ ಕರ್ನಲ್ ಮುತ್ತಣ್ಣ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ರೈಲು ಮಾರ್ಗದ ಯೋಜನೆ ಮತ್ತು ಚತುಷ್ಪಥ ಹೆದ್ದಾರಿಯಿಂದ ಕೊಡಗು ಜಿಲ್ಲೆಯ ಪರಿಸರ, ಹವಾಮಾನ ಮತ್ತು ಪ್ರಾಕೃತಿಕವಾಗಿ ರಚಿತವಾಗಿರುವ ಭೌಗೋ ಳಿಕ ಲಕ್ಷಣಗಳಿಗೆ ಭಾರೀ ಧಕ್ಕೆಯಾಗು ತ್ತದೆ. ಈಗಾಗಲೇ ವಿವಿಧ ಯೋಜನೆಗಳ ಜಾರಿಯಿಂದ ಜಿಲ್ಲೆಯ ಹಸಿರು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮಾನವ-ಕಾಡು ಪ್ರಾಣಿಗಳ ನಡುವೆ ಸಂಘರ್ಷ ಸ್ಥಿತಿ ತಲೆದೋರಿದೆ ಎಂದು ಆತಂಕ ವ್ಯಕ್ತಪಡಿಸಿ, ಕೂರ್ಗ್ ವೈಲ್ಡ್ ಸೊಸೈಟಿಯ ಮುಖಂಡ ಮತ್ತು ಪರಿಸರವಾದಿ ಕರ್ನಲ್ ಮುತ್ತಣ್ಣ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ 2018ರ ಏಪ್ರಿಲ್ ತಿಂಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮಾತ್ರವಲ್ಲದೇ, ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ಕೂಡ ಉದ್ದೇಶಿತ ಯೋಜನೆಯ ಸಾಧಕ ಬಾಧಕಗಳ ಕುರಿತು ಸಂಶೋಧನೆ ನಡೆಸಿ ಪರಿಸರಕ್ಕೆ ಭಾರೀ ಹಾನಿಯಾಗುವ ಮತ್ತು ಯೋಜನೆ ಜಾರಿ ಯಿಂದ ಆಗುವ ನಷ್ಟದ ಕುರಿತು ವರದಿ ತಯಾರಿಸಿತ್ತು. ಈ ವರದಿಯ ಅಂಶಗಳನ್ನು ಕೂಡ ದೂರುದಾರ ಕರ್ನಲ್ ಮುತ್ತಣ್ಣ ಘನ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಇಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್, ಸರಕಾರಿ ವಕೀಲರು ಮತ್ತು ದೂರುದಾರರ ಪರವಿದ್ದ ವಕೀಲರ ವಾದ ಪ್ರತಿವಾದವನ್ನು ಆಲಿಸಿ, ಯೋಜನೆಗೆ ವಿರೋ ಧವಾಗಿರುವ ಅಂಶಗಳನ್ನು ಪರಿಗಣಿಸಿ ಕಾಮಗಾರಿಗೆ ಆತುರ ತೋರದಂತೆ ಮತ್ತು ನ್ಯಾಯಾಲಯಕ್ಕೆ ಸಲ್ಲಿಕೆ ಯಾಗಿರುವ ಸಾರ್ವಜನಿಕ ಹಿತಾಸಕ್ತಿಯ ವಿಚಾರಣೆ ಮುಗಿಯುವವರೆಗೆ ಯಾವುದೇ ಕಾಮಗಾರಿ ನಡೆಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ ಎಂದು ಕರ್ನಲ್ ಮುತ್ತಣ್ಣ ತಿಳಿಸಿದರು.

ಇನ್ನು ರೈಲು ಮಾರ್ಗದ ಯೋಜ ನೆಯ ಬಗ್ಗೆ ಪ್ರಸ್ತಾಪಿಸಿದ ನ್ಯಾಯಾ ಲಯ, ಈ ಯೋಜನೆಗೆ ಭರಿಸುವ ವೆಚ್ಚದಲ್ಲಿ ಲಾಭದಾಯಕ ಅಂಶಗಳೇ ಕಂಡು ಬರುತ್ತಿಲ್ಲ ಎಂದೂ ಅಭಿಪ್ರಾಯ ಪಟ್ಟಿದೆ. ದೂರಿನ ಕುರಿತು ಮುಂದಿನ ವಾರ ಮತ್ತೆ ವಿಚಾರಣೆ ನಡೆಯಲಿದ್ದು, ನ್ಯಾಯಾಲಯದ ಮುಂದಿನ ಆದೇ ಶಕ್ಕಾಗಿ ಕಾಯುತ್ತಿರುವುದಾಗಿ ಕರ್ನಲ್ ಮುತ್ತಣ್ಣ ತಿಳಿಸಿದರು.

Translate »