ಗುಂಡ್ಲುಪೇಟೆ ಶ್ರೀವಿಜಯ ನಾರಾಯಣಸ್ವಾಮಿ ರಥೋತ್ಸವ
ಚಾಮರಾಜನಗರ

ಗುಂಡ್ಲುಪೇಟೆ ಶ್ರೀವಿಜಯ ನಾರಾಯಣಸ್ವಾಮಿ ರಥೋತ್ಸವ

February 13, 2019

ಗುಂಡ್ಲುಪೇಟೆ: ರಥಸಪ್ತಮಿಯ ಅಂಗವಾಗಿ ಪಟ್ಟಣದ ಪುರಾತನ ಪ್ರಸಿದ್ಧ ಶ್ರೀ ವಿಜಯನಾರಾಯಣಸ್ವಾಮಿಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಪ್ರತಿ ವರ್ಷದಂತೆ ಈ ಬಾರಿಯೂ ಸಹ ರಥಸಪ್ತಮಿಯ ಅಂಗವಾಗಿ ಮುಜ ರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನವನ್ನು ಸುಣ್ಣಬಣ್ಣಗಳಿಂದ ಶುಚಿಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ರಥೋತ್ಸವದ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ವಿಶೇಷ ಪೂಜಾ ಕೈಂಕರ್ಯ ಉತ್ಸವಾದಿಗಳನ್ನು ಜರುಗಿದವು.
ರಥ ಸಪ್ತಮಿಯ ಮಂಗಳವಾರ ಮಧ್ಯಾಹ್ನ 12.30ಕ್ಕೆ ಮುಜರಾಯಿ ಅಧಿ ಕಾರಿಯೂ ಆದ ತಹಶೀಲ್ದಾರ್ ನಂಜುಂಡಯ್ಯ ರಥಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆಯುವ ಮೂಲಕ ವಿಜಯನಾರಾಯಣಸ್ವಾಮಿ ಉತ್ಸವಮೂರ್ತಿಯನ್ನು ಹೊತ್ತ ರಥಕ್ಕೆ ಚಾಲನೆ ನೀಡಿದರು.

ಈ ವೇಳೆ ದೇವಾಲಯದ ಪ್ರಾಂಗಣದಲ್ಲಿ ನೆರೆದಿದ್ದ ಸಹ ಸ್ರಾರು ಭಕ್ತರ ಹರಿ ನಾಮಸ್ಮರಣೆಯೊಂದಿಗೆ ರಥವನ್ನು ದೇವಸ್ಥಾನದ ಸುತ್ತಲೂ ಎಳೆದು ಸ್ವಸ್ಥಾನಕ್ಕೆ ಸಾಂಗವಾಗಿ ಮರಳಿಸಿದರು. ನಂತರ ರಥದಲ್ಲಿ ಕುಳ್ಳಿರಿಸಿದ್ದ ಶ್ರೀ ವಿಜಯ ನಾರಾಯಣಸ್ವಾಮಿಗೆ ಪಟ್ಟಣದ ಮತ್ತು ಹೊರಭಾಗಗಳಿಂದ ಬಂದಿದ್ದ ಭಕ್ತರು ವಿಶೇಷ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಮೆರೆದರು. ರಥೋತ್ಸವದ ಹಿನ್ನೆಲೆಯಲ್ಲಿ ಸುತ್ತಮುತ್ತಲ ನಿವಾಸಿಗಳು ಭಕ್ತರಿಗಾಗಿ ಪಾನಕ, ಮಜ್ಜಿಗೆ ಮತ್ತು ಸಿಹಿ ವಿತರಿಸಿದರು.

Translate »