ಪ್ರೊ. ಕೆ.ಎಸ್.ಭಗವಾನ್ ಹತ್ಯೆ ಸಂಚು ಖಂಡಿಸಿ ದಸಂಸ ಪ್ರತಿಭಟನೆ
ಮೈಸೂರು

ಪ್ರೊ. ಕೆ.ಎಸ್.ಭಗವಾನ್ ಹತ್ಯೆ ಸಂಚು ಖಂಡಿಸಿ ದಸಂಸ ಪ್ರತಿಭಟನೆ

July 1, 2018

ಮೈಸೂರು: ವಿಚಾರವಾದಿ ಪ್ರೊ. ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದನ್ನು ಖಂಡಿಸಿ ದಸಂಸ ಪದಾಧಿಕಾರಿಗಳು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾ ಧರಣಿ ನಡೆಸಿದರು.

ಈ ಹಿಂದೆ ಖ್ಯಾತ ಸಾಹಿತಿ ಎಂ.ಎಂ.ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವ ರನ್ನು ವ್ಯವಸ್ಥಿತವಾಗಿ ಸಂಚು ಮಾಡಿ ಹತ್ಯೆಗೈದ ಬೆನ್ನಲ್ಲೇ ಇದೀಗ ಪ್ರೊ. ಭಗವಾನ್ ಹತ್ಯೆಗೆ ಸಂಚು ರೂಪಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಲೆಗಡುಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇ ಕೆಂದು ಅವರು ಒತ್ತಾಯಿಸಿದರು. ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುವುದನ್ನು ಕೋಮುವಾದಿಗಳು ನಿಲ್ಲಿಸಬೇಕು ಎಂದು ಆಗ್ರಹಿಸಿದ ಧರಣಿ ನಿರತರು, ಅಂತಹ ಘೋರ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕೆಂದೂ ಘೋಷಣೆಗಳನ್ನು ಕೂಗಿದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ನಿಂಗರಾಜ ಮಲ್ಲಾಡಿ ಅವರು ನೇತೃತ್ವ ವಹಿಸಿದ್ದ ಧರಣಿ ಯಲ್ಲಿ ಹೆಚ್.ಬಿ.ದಿವಾಕರ್, ಬಸವಣ್ಣ, ದೊಡ್ಡ ಸಿದ್ದು, ಸೋಮಣ್ಣ, ಪುಟ್ಟಲಕ್ಷ್ಮಮ್ಮ, ಚಾಮರಾಜು, ಕೆ.ನಂಜಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

 

Translate »