ಭಗವಾನ್‍ಗೆ ಚಾಟಿ ಬೀಸಿದ ನಟ ಜಗ್ಗೇಶ್
ಮೈಸೂರು

ಭಗವಾನ್‍ಗೆ ಚಾಟಿ ಬೀಸಿದ ನಟ ಜಗ್ಗೇಶ್

December 29, 2018

ಮೈಸೂರು: ತಮ್ಮ ಪುಸ್ತಕದಲ್ಲಿ ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ದಾಖಲಿಸಿರುವ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಹಿರಿಯ ನಟ ಜಗ್ಗೇಶ್ ಹರಿಹಾಯ್ದಿದ್ದಾರೆ. ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುತ್ತಿರುವ ಭಗವಾನ್‍ಗೆ ಸಿಎಂ ಕುಮಾರ್ ಸ್ವಾಮಿ ಬುದ್ಧಿ ಹೇಳಬೇಕೆಂದು ವಿನಂತಿಸಿದ್ದಾರೆ.

ಇಂದು ಸೆಲ್ಫಿ ವಿಡಿಯೋದಲ್ಲಿ ಮಾತನಾಡಿರುವ ಜಗ್ಗೇಶ್, ಭಗವಾನ್ ವಿಕೃತ ಮನಸ್ಸಿನಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಕೋಟ್ಯಾಂತರ ಹಿಂದೂಗಳ ಭಾವನೆ ಗಳಿಗೆ ಧಕ್ಕೆ ತರುತ್ತಿದ್ದಾರೆ. ನಿಮ್ಮ ಈ ನೀಚ ಹೇಳಿಕೆಗಳನ್ನು ನಿಲ್ಲಿಸಿ ಎಂದಿರುವ ಜಗ್ಗೇಶ್, ನಿಮ್ಮ ಅಪ್ಪ ಅಮ್ಮ ಯಾರು? ಅವರು ಹೇಳಿದಾಗ ಅಲ್ಲವೇ ನೀವು ಅವರ ಮಗ ಅಂತಾ ಗೊತ್ತಾಗಿದ್ದು. ಅದೇ ರೀತಿ ಶ್ರೀರಾಮಚಂದ್ರನ ಬಗ್ಗೆ ಸಾವಿ ರಾರು ವರ್ಷಗಳಿಂದ, ತಲಮಾರುಗಳಿಂದ ಜನರ ಬಾಯಿಂದ ಬಾಯಿಗೆ ಹರಡಿ ಶ್ರೀರಾಮನ ಬಗ್ಗೆ ಇಂದು ಗ್ರಂಥ ರೂಪಗಳಲ್ಲಿ ಉಲ್ಲೇಖವಾಗಿದೆ. ಅಂತಹ ಮಹಾನ್ ಪುರುಷನ ಬಗ್ಗೆ ನೀವು ಎಲ್ಲೆ ಇಲ್ಲದೇ ಮಾತ ನಾಡುತ್ತಿರುವುದು ಖಂಡನೀಯ ಎಂದಿದ್ದಾರೆ.

ನಿಮ್ಮಂತವರು ಇರಬೇಕು…: ಇನ್ನು ಭಗವಾನ್ ಅವರಿಗೆ ಮಾತಿನಲ್ಲಿಯೇ ಚಾಟಿ ಬೀಸಿರುವ ಜಗ್ಗೇಶ್, ದೇವನಿದ್ದ ಜಾಗದಲ್ಲಿ ದೈತ್ಯನಿರಬೇಕು ಎನ್ನುವ ಮಾತು ಅನಾದಿ ಕಾಲದಿಂದಲೂ ಕೇಳಿ ಬಂದಿದೆ. ನಿಮ್ಮಂಥ ದೈತ್ಯರು ಇದ್ದಾಗಲೇ ದೇವರ ಮರ್ಯಾದೆ ಹಾಗೂ ದೇವರ ಬಗ್ಗೆ ಭಕ್ತಿ ಜಾಸ್ತಿಯಾಗುತ್ತೆ. ನಿಮ್ಮಂಥ ಎಷ್ಟು ಜನರ ಹುಟ್ಟುತ್ತಿರೋ ಅಷ್ಟು ದೈವ ಭಕ್ತಿ ಜಾಸ್ತಿ ಯಾಗುತ್ತೆ ಎಂದಿದ್ದಾರೆ.

ಇನ್ನು ಹೀಗೆ ಸಮಾಜದ ಸಾಮ ರಸ್ಯ ಹಾಳು ಮಾಡುತ್ತಿರುವ ಭಗವಾನ್ ಅಂತಹವರಿಗೆ ಬುದ್ಧಿ ಹೇಳುವಂತೆ ಜಗ್ಗೇಶ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

Translate »