ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹ: ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಬೃಹತ್ ಪ್ರತಿಭಟನೆ
ಚಾಮರಾಜನಗರ

ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹ: ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಬೃಹತ್ ಪ್ರತಿಭಟನೆ

October 26, 2018

ಚಾಮರಾಜನಗರ:  ತಮಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ನಗರದಲ್ಲಿ ಗುರುವಾರ ಬೃಹತ್ ಪ್ರತಿ ಭಟನೆ ನಡೆಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಗುತ್ತಿಗೆ ನೌಕರರ ಸಂಘದ ಆಶ್ರಯದಲ್ಲಿ ಇಲ್ಲಿನ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಿಲ್ಲೆಯಲ್ಲಿ ಒಳ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರು ಜಮಾಯಿಸಿದರು. ಅಲ್ಲಿಂದ ಭಿತ್ತಿಪತ್ರ ಗಳನ್ನು ಪ್ರದರ್ಶಿಸುತ್ತಾ, ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದರು. ಭವನದ ಆವರಣದಲ್ಲಿ ಕುಳಿತು ಧರಣಿ ನಡೆಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯಿತ್ರಿ ಅವರ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಗುತ್ತಿಗೆ ಪದ್ಧತಿ ರದ್ದು ಪಡಿಸಿ, ನೌಕರರ ಜೀವ ಉಳಿಸಿ, ಗುತ್ತಿಗೆ ಪದ್ಧತಿಯೇ ಬಂದು ಅಸಂವಿಧಾನಿಕ ವ್ಯವಸ್ಥೆ, ಶೋಷಣೆ ಸಾಕು, ಸೇವಾ ಭದ್ರತೆ ಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಎಲ್ಲರಿಗೂ ಆರೋಗ್ಯ, ನೌಕರರಿಗೆ ಭದ್ರತೆ, ಆರೋಗ್ಯವೇ ಭಾಗ್ಯ, ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ಸಮಾನ ವೇತನ ನೀಡುವುದೇ ಯೋಗ್ಯ, ಸಂಘ ಟನೆ ಹೋರಾಟದ ಶಕ್ತಿ, ಎಲ್ಲರಿಗೂ ಆರೋಗ್ಯ ನೀಡಲು ನಾವು ಸಿದ್ಧ, ಸೇವಾ ಭದ್ರತೆ ನೀಡಲು ನೀವು ಸಿದ್ಧರೆ? ಜೀತ ಪದ್ಧತಿ ಸಾಕು, ಗುತ್ತಿಗೆ ನೌಕರರ ಸಂಘಕ್ಕೆ ಜಯವಾಗಲಿ ಎಂಬಿತ್ಯಾದಿ ಬರಹಗಳ ಭಿತ್ತಿ ಪತ್ರಗಳನ್ನು ಪ್ರತಿಭಟನಾನಿರತ ನೌಕರರು ಪ್ರದರ್ಶಿಸಿದ್ದು ಗಮನ ಸೆಳೆಯಿತು.

ಆರೋಗ್ಯ ಇಲಾಖೆಯ ಎಲ್ಲಾ ಗುತ್ತಿಗೆ ನೌಕರರಿಗೆ ನಿವೃತ್ತಿಯ ವಯಸ್ಸಿನವರೆಗೆ ಸೇವಾ ಭದ್ರತೆಯನ್ನು ಒದಗಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡ ಬೇಕು. ವೇತನ ಮತ್ತು ಭತ್ಯೆಗಳು ಮತ್ತು ವೇತನ ಶ್ರೇಣಿಯನ್ನು ನೀಡಲು ಹರಿಯಾಣ ಮಾದರಿಯಲ್ಲಿ Comprehen sive HR Policy ರಚಿಸಬೇಕು. ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆಯ ಮಾದರಿಯಲ್ಲಿ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆಯನ್ನು ತಂದು ಸೇವಾ ಭದ್ರತೆ ಒದಗಿಸಬೇಕು. ಕಾನೂನು ತೊಡಕುಗಳನ್ನು ಇಲ್ಲವಾಗಿ ಸಲು ಸಂಸತ್ತಿನಲ್ಲಿ ನಿರ್ಣಯ ಕೈಗೊಂಡು ಖಾಯಂ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯ ಇರುವ ಎಲ್ಲಾ ಕ್ರಮ ಗಳನ್ನು ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಆರೋಗ್ಯ ಕ್ಷೇತ್ರದ ಬಜೆಟನ್ನು ಶೇ.15ರಷ್ಟಕ್ಕೆ ಏರಿಸಬೇಕು. ಅದಕ್ಕೆ ಅಗತ್ಯ ಇರುವ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಹೊರಗುತ್ತಿಗೆಯಲ್ಲಿ ಇರುವ ಎಲ್ಲರಿಗೆ ಗುತ್ತಿಗೆದಾರರ ಮಧ್ಯವರ್ತಿತನವಿಲ್ಲದೇ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿ ಮಾಡಬೇಕು. ಒಳಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಗುವ ಸೌಲ ಭ್ಯಗಳು ಅವರಿಗೂ ಸಿಗಬೇಕು. ಹಾಲಿ ಒಳ ಗುತ್ತಿಗೆಯಲ್ಲಿ ಇರುವವರನ್ನು ಹೊರಗುತ್ತಿ ಗೆಗೆ ದೂಡಬಾರದು. ಹಾಲಿ ಗುತ್ತಿಗೆ ವ್ಯವಸ್ಥೆ ಯಲ್ಲಿ ಇರುವ ಎಲ್ಲಾ ಹುದ್ದೆಗಳನ್ನು ಖಾಯಂ ಹುದ್ದೆಗಳಾಗಿ ಸೃಷ್ಟಿಸಬೇಕು ಎಂದರು.

ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಪಿ.ಶೇಖರ್, ಸದಸ್ಯ ಹೇಮಂತ್‍ಕುಮಾರ್, ಗೌರವ ಅಧ್ಯಕ್ಷೆ ಡಾ.ಉಷಾ, ಉಪಾಧ್ಯಕ್ಷ ರಾದ ಬಾಲಚಂದ್ರಮೂರ್ತಿ, ಮಂಜು, ವಿಜಯಾ, ರಮ್ಯ, ಖಜಾಂಚಿ ಗೋಪಾಲ ಕೃಷ್ಣ, ಸಹ ಕಾರ್ಯದರ್ಶಿ ಮಹೇಶ್, ಸಂಘ ಟನಾ ಕಾರ್ಯದರ್ಶಿಗಳಾದ ಚಂದನ್, ಮಮತ ರಾಣಿ, ಪುಟ್ಟಸ್ವಾಮಿ, ನಂದಿನಿ, ನಾಗವೇಣಿ, ಮಂಜು, ಜಯಭಾರತಿ, ಡಾ.ಸತ್ಯ ನಾರಾಯಣ, ದೃಶ್ಯಾಂತ್, ಅನುಪಮ, ಗಣೇಶ್ ಪ್ರಸಾದ್, ಡಾ.ನಾಗೇಂದ್ರ, ಡಾ.ಹೇಮ ಕುಮಾರ್, ವಸಂತ, ಮಂಜುಳ, ಗುರು ಪಾದಸ್ವಾಮಿ, ಪುಟ್ಟಸ್ವಾಮಿ, ಶಶಿಕಲಾ, ದೇವ ಮಣಿ, ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ರಂಗಸ್ವಾಮಿ, ಆರೋಗ್ಯ ಇಲಾ ಖೆಯ ಪ್ರಕಾಶ್, ಶಶಿಕುಮಾರ್, ಬಿಎಸ್‍ಪಿ ಮುಖಂಡ ಬ್ಯಾಡಮೂಡ್ಲು ಬಸವಣ್ಣ ಇತರ ನೂರಾರು ನೌಕರರು ಪ್ರತಿಭಟ ನೆಯಲ್ಲಿ ಭಾಗವಹಿಸಿದ್ದರು.

Translate »