ಬೆಹರಾನ್‍ನಿಂದ ಚಿನ್ನ ತಂದ ಕೊಡಗಿನ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
ಕೊಡಗು

ಬೆಹರಾನ್‍ನಿಂದ ಚಿನ್ನ ತಂದ ಕೊಡಗಿನ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

September 8, 2018

11.57 ಲಕ್ಷದ ಚಿನ್ನ ವಶ
ಬೆಂಗಳೂರು: ಬೆಹರಾನ್‍ನಿಂದ 11.57 ಲಕ್ಷ ಮೌಲ್ಯದ ಚಿನ್ನವನ್ನು ಕಳ್ಳ ಸಾಗಾಣಿಕೆ ಮೂಲಕ ತಂದಿದ್ದ ಕೊಡಗಿನ ವ್ಯಕ್ತಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಬಂಧಿಸಿ, ಚಿನ್ನ ವಶಪಡಿಸಿಕೊಂಡಿದ್ದಾರೆ.

ಕೊಡಗಿನ ಹೊದವಾಡ ಗ್ರಾಮದ ಕೊಟ್ಟಂ ಬಾಡಿ ಅಹಮದ್ ಲತೀಫ್, ಚಿನ್ನ ಕಳ್ಳ ಸಾಗಾಣಿಕೆ ಮಾಡಿ ಸಿಕ್ಕಿಬಿದ್ದವ ನ್ನಾಗಿದ್ದು, ಈತ ಚಿನ್ನವನ್ನು ತುಂಡು ತುಂಡಾಗಿ ಕತ್ತರಿಸಿ ಅದಕ್ಕೆ ಸಿಲ್ವರ್ ಪಾಲಿಶ್ ಮಾಡಿ ತನ್ನ ಪ್ಯಾಂಟ್‍ನ ಎಡ ಭಾಗದ ಜೇಬಿನಲ್ಲಿ ಇಟ್ಟಿದ್ದನೆಂದು ಹೇಳಲಾಗಿದೆ. ಗಲ್ಫ್ ಏರ್‍ಲೈನ್ಸ್‍ಗೆ ಸೇರಿದ ವಿಮಾನದಲ್ಲಿ ಗುರುವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದ ಈತನನ್ನು ತಪಾ ಸಣೆಗೊಳಪಡಿಸಿದಾಗ ಚಿನ್ನ ಸಾಗಾಣಿಕೆ ಪ್ರಕರಣ ಪತ್ತೆಯಾಯಿತು ಎಂದುಅಧಿಕಾರಿಗಳು ತಿಳಿಸಿದ್ದಾರೆ.

Translate »