ಏ.20ಕ್ಕೆ ಬಿಬಿಎಂಪಿ ಬಜೆಟ್
ಮೈಸೂರು

ಏ.20ಕ್ಕೆ ಬಿಬಿಎಂಪಿ ಬಜೆಟ್

April 18, 2020
  • ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಕ್ರಿಯೆ
  • ವೀಡಿಯೋ ಕಾನ್ಫರೆನ್ಸ್ ಮೂಲಕ ಸದಸ್ಯರಿಗೆ ಮಾಹಿತಿ ವ್ಯವಸ್ಥೆ

ಬೆಂಗಳೂರು, ಏ.17(ಕೆಎಂಶಿ)- ಈ ಬಾರಿಯ ಬಿಬಿಎಂಪಿ ಬಜೆಟ್ ಏ.20 ರಂದು ಮಧ್ಯಾಹ್ನ 12 ಗಂಟೆಗೆ ಮಂಡನೆ ಯಾಗಲಿದ್ದು, ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತದೆ. ಸದಸ್ಯರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡುವ ಕೆಲಸ ಮಾಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಬಿಎಂಪಿ ಬಜೆಟ್ ಅನುಮೋದನೆ ಬಹಳ ಮುಖ್ಯವಾದ ವಿಷಯ, ಕೊರೊನಾ ಕಾರಣದಿಂದ ಮುಂದೂಡಿಕೆ ಮಾಡಿದ್ದೆವು, ಲಾಕ್‍ಡೌನ್ ಮತ್ತೆ ಮುಂದು ವರೆದ ಕಾರಣ ಈಗ ಅನಿವಾರ್ಯವಾಗಿ ಮಂಡನೆ ಮಾಡಲೇಬೇಕು, ಹಣಕಾಸು ವ್ಯಯಕ್ಕೆ ಅನಿವಾರ್ಯ. ಹಾಗಾಗಿ ಮುಖ್ಯಮಂತ್ರಿಗಳು, ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದು, ಬಜೆಟ್ ಅನ್ನು ಏ.20 ರಂದು 12 ಗಂಟೆಗೆ ಕೌನ್ಸಿಲ್ ಸಭೆಯಲ್ಲಿ ಮಂಡನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.

Translate »