ಅರಕಲಗೂಡು: ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿದ್ದ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಅರವಳಿಕೆ ನೀಡಿ ರಕ್ಷಿಸಿದ್ದಾರೆ.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಚಿರತೆ ಯೊಂದು ಸಿಲುಕಿ ಸುಮಾರು ನಾಲ್ಕು ಗಂಟೆಗಳ ಕಾಲ ನರಳಿದೆ. ಸುದ್ದಿ ತಿಳಿದ ಅರಣ್ಯಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆಗೆ ಅರವಳಿಕೆ ನೀಡಿ ಸೆರೆ ಹಿಡಿಯು ವಲ್ಲಿ ಸಫಲರಾದರು.
ಆಕ್ರೋಶ: ಈ ಘಟನೆ ನಂತರ ಗ್ರಾಮಸ್ಥರು ಮಾತ್ರ ಅರಣ್ಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳಿಂದ ಚಿರತೆಗಳ ಓಡಾಟದ ಬಗ್ಗೆ ನಾವು ಹೇಳುತ್ತಿದ್ದರೂ ನೀವು ಗಂಭೀರವಾಗಿ ಪರಿಗಣಸದ್ದಲ್ಲದೆ, ನಿರ್ಲಕ್ಷ್ಯ ತೋರಿ ಈಗ ಬಂದಿದ್ದೀರಾ ಎಂದು ತರಾಟೆಗೆ ತೆಗೆದು ಕೊಂಡರು. ಜಿಲ್ಲೆಯಲ್ಲಿ ಕಾಡಾನೆ ಕಾಟಕ್ಕೆ ಬೇಸತ್ತ ರೈತರಿಗೆ ಈಗ ಚಿರತೆಗಳ ಭಯವೂ ಶುರುವಾಗಿದೆ.