ತೈಲ ಬೆಲೆ ಇಳಿಕೆಗೆ ಒತ್ತಾಯಿಸಿ ಜೆಡಿಎಸ್-ಬಿಎಸ್‍ಪಿ ಪ್ರತಿಭಟನೆ
ಚಾಮರಾಜನಗರ

ತೈಲ ಬೆಲೆ ಇಳಿಕೆಗೆ ಒತ್ತಾಯಿಸಿ ಜೆಡಿಎಸ್-ಬಿಎಸ್‍ಪಿ ಪ್ರತಿಭಟನೆ

May 30, 2018

ಚಾಮರಾಜನಗರ:  ಪೆಟ್ರೋಲ್, ಡಿಸೇಲ್ ಬೆಲೆ ಇಳಿಸುವಂತೆ ಒತ್ತಾಯಿಸಿ ಜೆಡಿಎಸ್, ಬಿಎಸ್‍ಪಿ ಕಾರ್ಯ ಕರ್ತರು ಕೇಂದ್ರ ಸರ್ಕಾರ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನ ವನದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಒಂಟಿ ಎತ್ತಿನಗಾಡಿ ಮೇಲೆ ಸ್ಕೂಟಿ ನಿಲ್ಲಿಸಿ, ಗಾಡಿ ಮುಂಭಾಗ ದಲ್ಲಿ ಪ್ರಧಾನಿ ನರೇಂದ್ರಮೋದಿ ಭಾವಚಿತ್ರ ಹಾಕಿ ಭುವನೇಶ್ವರಿ ವೃತ್ತಕ್ಕೆ ಎಳೆದು ತಂದರು ಅಲ್ಲಿ ಕೆಲಕಾಲ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರಮೋದಿ ವಿರುದ್ಧ ಧಿಕ್ಕಾ ರದ ಘೋಷಣೆ ಕೂಗಿ ಮೋದಿ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಜಾ.ದಳ ರಾಜ್ಯ ಕಾರ್ಯಕಾರಿಣ ಸದಸ್ಯ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಕಳೆದ 4 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರಮೋದಿ ನೇತೃತ್ವ ಬಿಜೆಪಿ ಸರ್ಕಾರ ಬರೀ ಸುಳ್ಳು ಆಶ್ವಾಸನೆಗಳನ್ನು ಹೇಳಿ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.

ಚುನಾವಣಾ ಸಂದರ್ಭದಲ್ಲಿ ಹೊರ ದೇಶದಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದರು. ಆದರೆ ಅವರು ಪ್ರಧಾನಿಯಾಗಿ 4 ವರ್ಷ ಗಳು ಕಳೆದಿದೆ. ಆದರೂ ಕೂಡ ಯಾರ ಖಾತೆಗೂ 15 ಪೈಸೆಯನ್ನು ಹಾಕಿಲ್ಲ. ನರೇಂದ್ರಮೋದಿ ಮಹಾನ್ ಸುಳ್ಳುಗಾರ ರಾಗಿದ್ದಾರೆ ಎಂದು ದೂರಿದರು. ಪ್ರಧಾನಿ ನರೇಂದ್ರಮೋದಿ ಅವರು ಪದೇಪದೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡುತ್ತಿದ್ದು, ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆಗೆ ಪ್ರಾಮಾಣ ಕ ಪ್ರಯತ್ನ ಮಾಡು ತ್ತಿಲ್ಲ. ಇದರಿಂದ ದಿನವಸ್ತುಗಳ ಬೆಲೆ ಏರಿಕೆಯಾಗಿದ್ದು, 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದರು ಅದೂ ಆಗಲಿಲ್ಲ. ನರೇಂದ್ರಮೋದಿ ಅವರು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆಲೂರು ಮಲ್ಲು, ಜಿಲ್ಲಾ ಅಧ್ಯಕ್ಷರ ಆಪ್ತ ಕಾರ್ಯ ದರ್ಶಿ ಸಿ.ಕೆ.ರಂಗರಾಮ್, ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕಣ್ಣೇಗಾಲಮಹದೇವ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಸಿದ್ದರಾಜು, ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತ್‍ರಾಜ್, ನಿಜಧ್ವನಿಗೋವಿಂದರಾಜು, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕೆ.ಎಂ.ನಾಗರಾಜು, ಮಂಜು ನಾಥ್, ರಾಮಸಮುದ್ರಸುರೇಶ್, ಕಂದಹಳ್ಳಿ ನಾರಾಯಣ್, ಡಿಎಸ್‍ಎಸ್ ಶಿವಣ್ಣ ಇತರರು ಭಾಗವಹಿಸಿದ್ದರು.

Translate »