ಮುಂದುವರೆದ ಗ್ರಾಮೀಣ ಅಂಚೆ ನೌಕರರ ಮುಷ್ಕರ: ಅಂಚೆ ನೌಕರರ ಬೇಡಿಕೆ ಬಗ್ಗೆ ಪ್ರಧಾನಿಗೆ ಪತ್ರ
ಚಾಮರಾಜನಗರ

ಮುಂದುವರೆದ ಗ್ರಾಮೀಣ ಅಂಚೆ ನೌಕರರ ಮುಷ್ಕರ: ಅಂಚೆ ನೌಕರರ ಬೇಡಿಕೆ ಬಗ್ಗೆ ಪ್ರಧಾನಿಗೆ ಪತ್ರ

May 30, 2018

ಚಾಮರಾಜನಗರ: ಗ್ರಾಮೀಣ ಅಂಚೆ ನೌಕರರ ಬೇಡಿಕೆ ಗಳನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಅಧಿಕಾರಿ ಗಳಿಗೆ ಪತ್ರ ಬರೆಯುವುದಾಗಿ ಕೊಳ್ಳೇ ಗಾಲದ ಶಾಸಕ ಎನ್.ಮಹೇಶ್ ಹೇಳಿದರು.

ನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ರುವ ಕೇಂದ್ರ ಅಂಚೆ ಕಚೇರಿಯ ಆವರಣ ದಲ್ಲಿ ಶ್ರೀಕಮಲೇಶಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿ ರುವ ಅನಿರ್ಧಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದರು.

ಗ್ರಾಮೀಣ ಅಂಚೆ ನೌಕರರ ನ್ಯಾಯ ಯುತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ. ಗಾರ್ಮೆಂಟ್‍ನಲ್ಲಿ ದುಡಿ ಯುವ ಕಾರ್ಮಿಕರಿಗೂ ಪಿಎಫ್, ಮೆಡಿಕಲ್ ಸೌಲಭ್ಯವಿದೆ. ಆದರೆ ಗ್ರಾಮೀಣ ಅಂಚೆ ನೌಕರಿಗೆ ಪಿಎಫ್, ಮೆಡಿಕಲ್ ಸೌಲಭ್ಯ ವಿಲ್ಲದಿರುವುದು ಕೇಂದ್ರ ಸರ್ಕಾರಕ್ಕೆ ನಾಚಿ ಕೆಯಾಗಬೇಕು. ಅಲ್ಲದೆ ರೈಲ್ವೆ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯಲ್ಲಿ ಇಂತಹ ಕೆಲಸ ನಡೆಯುತ್ತದೆ. ಅಲ್ಲದೆ ರಾಜ್ಯ ಸರ್ಕಾರದÀ ಶಿಕ್ಷಣ, ಆರೋಗ್ಯ ಇಲಾಖೆ ಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಯಾವುದೇ ಸೇವಾ ಭದ್ರತೆ ಯಿಲ್ಲದೆ ಕನಿಷ್ಠ ಕೂಲಿ ದುಡಿಸಿಕೊಳ್ಳುವ ಮೂಲಕ ಸರ್ಕಾರ ಪ್ರಾಯೋಜಿತ ಆಧುನಿಕ ಜೀತಪದ್ಧತಿ ಅನುಸರಣೆ ಮಾಡುತ್ತಿದೆ. ಇದರ ವಿರುದ್ಧ 20 ವರ್ಷ ಗಳಿಂದ ಹೋರಾಟ ಮಾಡಲಾಗಿದೆ. ಇದರ ಬಗ್ಗೆ ಮುಂದಿನ ಶಾಸನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಮುಂದುವರಿದ ಅನಿರ್ದಿಷ್ಠಾವಧಿ ಮುಷ್ಕರ: ಗ್ರಾಮೀಣ ಅಂಚೆ ನೌಕರರ ಅನಿರ್ಧಿಷ್ಠಾವಧಿ ಮುಷ್ಕರ ಮುಂದುವರಿದಿದ್ದು, 8ನೇ ದಿನಕ್ಕೆ ಕಾಲಿಟ್ಟಿದೆ. ಶಾಸಕರ ಜತೆಯಲ್ಲಿ ಬಿಎಸ್‍ಪಿ ಜಿಲ್ಲಾಧ್ಯಕ್ಷ ಬಾಗಳಿರೇವಣ್ಣ, ಎಸ್.ಪಿ.ಮಹೇಶ್, ಕೃಷ್ಣಯ್ಯ, ಸುಶೀಲ, ಪರ್ವತ್‍ರಾಜ್ ಇತರರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ವಿಭಾಗೀಯ ಕಾರ್ಯ ದರ್ಶಿ ಎಂ.ಡಿ.ಶಿವಣ್ಣ, ಮಹೇಶ್‍ಪಾಳ್ಯ, ಎನ್‍ಯುಜಿಡಿಎಸ್ ಕಾರ್ಯದರ್ಶಿ ಮಾದೇಶ್ ಮಂಚಾಪುರ, ಬಿ.ಶೇಖಣ್ಣ, ಶಾಂತೇಶ್, ಮಾಳಿಗಯ್ಯ, ರಾಘವೇಂದ್ರ, ರಾಜರಾಂ, ಮಹದೇವಯ್ಯ, ವಿಭಾ ಗೀಯ ಸಂಘಟನೆಯ ಸಂಯೋಜಕ ರೇವಣ್ಣ ಸಿದ್ದಪ್ಪ, ಮಾದೇಶ್, ಪ್ರಕಾಶ್, ಚಂದ್ರು, ಅಂತೋಣ ಕುಮಾರ್, ಮುರಳಿ, ಶರವಣನ್, ರಂಗಸ್ವಾಮಿ, ಮಹದೇವ ಸ್ವಾಮಿ, ರಾಜೇಂದ್ರ, ನಿಜಲಿಂಗಮೂರ್ತಿ, ಮಲ್ಲಿ ಕಾರ್ಜನ ಇತರರು ಭಾಗ ವಹಿಸಿದ್ದರು.

Translate »