ಚಾಮರಾಜನಗರ: ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೆ ಇಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ತಿಳಿಸಿದ್ದಾರೆ. ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಯ ಬಗ್ಗೆ ಮಾತನಾಡಿದ ಅವರು ನಾನು ಬಿಜೆಪಿಗೆ ಹೋಗುವ ಮಾತೇ ಇಲ್ಲ. ನಾನು ಬಿಎಸ್‍ಪಿ ಪಕ್ಷದ ಶಿಸ್ತಿನ ಸಿಪಾಯಿ ಯಾಗಿದ್ದೇನೆ. ಪಕ್ಷದ ಹೈಕಮಾಂಡ್ ಮಾಯಾವತಿ ಅವರು ಹೇಳಿದರೆ ನಾನು ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದರು. ಇದಕ್ಕೂ ಮೊದಲು ನನ್ನ ವಿರುದ್ಧದ ಹೇಳಿಕೆಗಳು ಕೇವಲ ಉಹಾಪೆÇೀಹಗಳು ಅಷ್ಟೇ. ನಾನು ಈಗ ಸಮ್ಮಿಶ್ರ ಸರ್ಕಾರದಿಂದ ತಾಂತ್ರಿಕವಾಗಿ ಹೊರಗುಳಿದಿದ್ದೇನೆ ಎಂದು…
ಸಿ.ಪುಟ್ಟರಂಗಶೆಟ್ಟಿ v/s ಎನ್.ಮಹೇಶ್: ಜಿಲ್ಲೆಯ ಉಸ್ತುವಾರಿ ನೊಗ ಯಾರ ಹೆಗಲಿಗೆ
June 8, 2018ಚಾಮರಾಜನಗರ: ಜಿಲ್ಲೆಯ ಇಬ್ಬರು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ದೊರಕಿದೆ. ಈ ಇಬ್ಬರ ಪೈಕಿ ಯಾರಿಗೆ ಜಿಲ್ಲಾ ಉಸ್ತುವಾರಿ ಹೊಣೆ ದೊರೆಯಲಿದೆ ಎಂಬ ಚರ್ಚೆ ಜಿಲ್ಲೆ ಯಾದ್ಯಂತ ನಡೆಯುತ್ತಿದೆ. ಜಿಲ್ಲೆಯ ಉಸ್ತುವಾರಿ ಹೊಣೆ ವಹಿಸಿ ಕೊಳ್ಳಲು ಈ ಇಬ್ಬರು ಸಚಿವರು ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಯಾರ ಹೆಗಲಿಗೆ ಜಿಲ್ಲೆಯ ಉಸ್ತು ವಾರಿ ನೊಗ ಬೀಳಲಿದೆ ಎಂಬುದು ರಾಜ ಕೀಯ ಹಾಗೂ ಸಾರ್ವಜನಿಕ ವಲಯ ದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಾಮರಾಜನಗರ…
ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಡಬಲ್ ಧಮಾಕ: ಚಾ.ನಗರ ಕ್ಷೇತ್ರಕ್ಕೆ ಮೊದಲ ಸಚಿವ ಪಟ್ಟ, ಕೊಳ್ಳೇಗಾಲಕ್ಕೆ ಎರಡನೇ ಸಚಿವ ಸ್ಥಾನ
June 7, 2018ಚಾಮರಾಜನಗರ: ಚಾಮರಾಜ ನಗರ ಜಿಲ್ಲೆಯ ಇಬ್ಬರು ಶಾಸಕರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ದೊರೆತಿದೆ. ಚಾಮರಾಜನಗರ ಕ್ಷೇತ್ರದಿಂದ ಮೂರನೇ ಬಾರಿಗೆ ಹ್ಯಾಟ್ರಿಕ್ ಜಯ ಸಾಧಿಸಿದ್ದ ಕಾಂಗ್ರೆ ಸ್‍ನ ಸಿ.ಪುಟ್ಟರಂಗಶೆಟ್ಟಿ ಹಾಗೂ ಕೊಳ್ಳೇ ಗಾಲ ಮೀಸಲು ಕ್ಷೇತ್ರದಿಂದ ಇದೇ ಪ್ರಥಮ ಬಾರಿಗೆ ಗೆಲುವು ಸಾಧಿಸಿದ್ದ ಬಿಎಸ್‍ಪಿ-ಜೆಡಿಎಸ್ ಮೈತ್ರಿಯ ಎನ್.ಮಹೇಶ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಇತಿಹಾಸ ದಲ್ಲೇ ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ರಾಗುವ ಯೋಗ ಕೂಡಿ ಬಂದಿರುವುದು ಇದೇ ಮೊದಲು. ಇದಲ್ಲದೇ ಚಾಮರಾಜ…
ನನಗೆ ಶಾಸಕ ಸ್ಥಾನ ಹೆಚ್ಚಿನ ಮೌಲ್ಯ ತಂದು ಕೊಟ್ಟಿದೆ
June 5, 2018ಮಂಡ್ಯ: ಪ್ರಸ್ತುತ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದು, ಶಾಸಕನಾಗಿ ಆಯ್ಕೆಯಾಗಿರುವುದು ನನಗೆ ಹೆಚ್ಚಿನ ಮೌಲ್ಯ ತಂದು ಕೊಟ್ಟಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಬಿಎಸ್‍ಪಿ ಶಾಸಕ ಮಹೇಶ್ ಅಭಿಪ್ರಾಯಪಟ್ಟರು. ಶಾಸಕನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಈ ನನ್ನ ವಿಜಯ ಇಡೀ ಕರ್ನಾಟಕದ ಬಿಎಸ್‍ಪಿ ಪಕ್ಷದ ಕಾರ್ಯ ಕರ್ತರಿಗೆ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಪಕ್ಷ ಮುನ್ನಡೆಸಲು ಈ ಅಧಿಕಾರ ಮುನ್ನುಡಿಯಾಗಲಿದೆ….
ಮುಂದುವರೆದ ಗ್ರಾಮೀಣ ಅಂಚೆ ನೌಕರರ ಮುಷ್ಕರ: ಅಂಚೆ ನೌಕರರ ಬೇಡಿಕೆ ಬಗ್ಗೆ ಪ್ರಧಾನಿಗೆ ಪತ್ರ
May 30, 2018ಚಾಮರಾಜನಗರ: ಗ್ರಾಮೀಣ ಅಂಚೆ ನೌಕರರ ಬೇಡಿಕೆ ಗಳನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಅಧಿಕಾರಿ ಗಳಿಗೆ ಪತ್ರ ಬರೆಯುವುದಾಗಿ ಕೊಳ್ಳೇ ಗಾಲದ ಶಾಸಕ ಎನ್.ಮಹೇಶ್ ಹೇಳಿದರು. ನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ರುವ ಕೇಂದ್ರ ಅಂಚೆ ಕಚೇರಿಯ ಆವರಣ ದಲ್ಲಿ ಶ್ರೀಕಮಲೇಶಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿ ರುವ ಅನಿರ್ಧಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಅಂಚೆ ನೌಕರರ ನ್ಯಾಯ ಯುತ ಹೋರಾಟಕ್ಕೆ…
ಶಾಸಕ ಎನ್.ಮಹೇಶ್‍ಗೆ ಸಚಿವ ಸ್ಥಾನ ನೀಡಲು ಒತ್ತಾಯ
May 29, 2018ಚಾಮರಾಜನಗರ: ಹೋರಾಟದ ಹಿನ್ನೆಲೆಯಲ್ಲಿ ಬಂದಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ಹಾಗೂ ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಒತ್ತಾಯಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಪ್ರಗತಿಪರ ಒಕ್ಕೂಟದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಹೇಶ್ ಅವರು ಒಬ್ಬ ಚಳವಳಿಗಾರರಾಗಿದ್ದು, ರೈತಪರ ಹೋರಾಟಗಳಲ್ಲಿ ಭಾಗವಹಿಸಿ ಬೆಂಬಲ ಸೂಚಿಸುತ್ತಿದ್ದರು. ಅನುಭವಿ ರಾಜಕಾರಣ ಯಾಗಿರುವ ಅವರು ರೈತರ…