ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಡಬಲ್ ಧಮಾಕ: ಚಾ.ನಗರ ಕ್ಷೇತ್ರಕ್ಕೆ ಮೊದಲ ಸಚಿವ ಪಟ್ಟ, ಕೊಳ್ಳೇಗಾಲಕ್ಕೆ ಎರಡನೇ ಸಚಿವ ಸ್ಥಾನ
ಚಾಮರಾಜನಗರ

ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಡಬಲ್ ಧಮಾಕ: ಚಾ.ನಗರ ಕ್ಷೇತ್ರಕ್ಕೆ ಮೊದಲ ಸಚಿವ ಪಟ್ಟ, ಕೊಳ್ಳೇಗಾಲಕ್ಕೆ ಎರಡನೇ ಸಚಿವ ಸ್ಥಾನ

June 7, 2018

ಚಾಮರಾಜನಗರ:  ಚಾಮರಾಜ ನಗರ ಜಿಲ್ಲೆಯ ಇಬ್ಬರು ಶಾಸಕರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ದೊರೆತಿದೆ. ಚಾಮರಾಜನಗರ ಕ್ಷೇತ್ರದಿಂದ ಮೂರನೇ ಬಾರಿಗೆ ಹ್ಯಾಟ್ರಿಕ್ ಜಯ ಸಾಧಿಸಿದ್ದ ಕಾಂಗ್ರೆ ಸ್‍ನ ಸಿ.ಪುಟ್ಟರಂಗಶೆಟ್ಟಿ ಹಾಗೂ ಕೊಳ್ಳೇ ಗಾಲ ಮೀಸಲು ಕ್ಷೇತ್ರದಿಂದ ಇದೇ ಪ್ರಥಮ ಬಾರಿಗೆ ಗೆಲುವು ಸಾಧಿಸಿದ್ದ ಬಿಎಸ್‍ಪಿ-ಜೆಡಿಎಸ್ ಮೈತ್ರಿಯ ಎನ್.ಮಹೇಶ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಇತಿಹಾಸ ದಲ್ಲೇ ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ರಾಗುವ ಯೋಗ ಕೂಡಿ ಬಂದಿರುವುದು ಇದೇ ಮೊದಲು. ಇದಲ್ಲದೇ ಚಾಮರಾಜ ನಗರ ಕ್ಷೇತ್ರಕ್ಕೆ ಇದೇ ಪ್ರಪ್ರಥಮ ಬಾರಿಗೆ ಸಚಿವ ಸ್ಥಾನ ದೊರೆತಿದೆ. ಕೊಳ್ಳೇಗಾಲ ಕ್ಷೇತ್ರಕ್ಕೆ ಎರಡನೇ ಬಾರಿಗೆ ಸಚಿವ ಸ್ಥಾನ ದೊರೆತಿದ್ದು, ಜಿಲ್ಲೆಗೆ ಡಬಲ್ ಧಮಾಕ ದೊರೆತಿದೆ. ಇದು ಜಿಲ್ಲೆಯ ಇತಿಹಾಸ ದಲ್ಲಿಯೇ ಪ್ರಥಮ.

ಸಿ.ಪುಟ್ಟರಂಗಶೆಟ್ಟಿ: ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹ್ಯಾಟ್ರಿಕ್ ಜಯ ಸಾಧಿಸಿದ್ದ ಸಿ.ಪುಟ್ಟ ರಂಗಶೆಟ್ಟಿ ಇಂದು ಸಂಪುಟ ದರ್ಜೆಯ ಸಚಿವ ರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಳಿ ಪ್ಯಾಂಟು, ಬಿಳಿ ಷರಟು ಧರಿಸಿದ ಪುಟ್ಟರಂಗಶೆಟ್ಟಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಚಾಮರಾಜನಗರ ಕ್ಷೇತ್ರದಿಂದ ಗೆದ್ದು ಸಚಿವರಾದ ಮೊದಲಿಗರು ಎಂಬ ಕೀರ್ತಿಗೆ ಅವರು ಪಾತ್ರರಾದರು.

2008, 2013 ಮತ್ತು 2018ರ ವಿಧಾನ ಸಭಾ ಚುನಾವಣೆಯಲ್ಲಿ ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದ್ದಾರೆ. ಚಾಮರಾಜನಗರ ಕ್ಷೇತ್ರದಿಂದ ಗೆದ್ದವರು ಮಾತ್ರ ಇದುವರೆ ವಿಗೂ ಮಂತ್ರಿಗಳಾಗಿರಲಿಲ್ಲ. ಈಗ ಈ ಕೊರಗನ್ನು ಪುಟ್ಟರಂಗಶೆಟ್ಟಿ ದೂರ ಮಾಡಿದ್ದಾರೆ. ಕಳೆದ ಅವಧಿಯಲ್ಲಿಯೇ (2013) ಸಚಿವರಾಗಲು ಪುಟ್ಟರಂಗಶೆಟ್ಟಿ ಪ್ರಯತ್ನ ಮಾಡಿದ್ದರು. ಅದು ವಿಫಲ ವಾಗಿತ್ತು. ಹೀಗಾಗಿ ಪುಟ್ಟರಂಗಶೆಟ್ಟಿ ಅವ ರಿಗೆ ರಾಜ್ಯ ಸಚಿವ ಸ್ಥಾನಮಾನದ ಸಂಸ ದೀಯ ಕಾರ್ಯದರ್ಶಿ ನಂತರ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರಿ ದೊರೆತಿತ್ತು. ಈ ಬಾರಿಯ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟ ರಂಗಶೆಟ್ಟಿ ಅವರಿಗೆ ಉಪ್ಪಾರ ಕೋಟಾ ದಡಿ ಸಚಿವ ಸ್ಥಾನ ದೊರೆತಿದೆ.

1952ರ ಮೊದಲ ಸಾರ್ವತ್ರಿಕ ಚುನಾ ವಣೆಯಿಂದಲೂ ಚಾಮರಾಜನಗರ ಕ್ಷೇತ್ರ ಅಸ್ಥಿತ್ವದಲ್ಲಿ ಇದೆ. 2018ರವರೆಗೆ ಒಟ್ಟು 15 ವಿಧಾನಸಭಾ ಚುನಾವಣೆ ನಡೆದಿದೆ. ಕ್ಷೇತ್ರದಿಂದ ಇದುವರೆವಿಗೆ 7 ಮಂದಿ ಶಾಸಕ ರಾಗಿ ಆಯ್ಕೆಯಾಗಿದ್ದಾರೆ. ಈ 7 ಶಾಸಕ ರಲ್ಲಿ ಯಾರೊಬ್ಬರು ಹ್ಯಾಟ್ರಿಕ್ ಜಯ ಸಾಧಿಸಿರಲಿಲ್ಲ. ಮೊದಲ ಬಾರಿಗೆ ಈ ಸಾಧನೆಗೈದ ಶಾಸಕ ಪುಟ್ಟರಂಗಶೆಟ್ಟಿ ಈಗ ಸಚಿವರಾಗಿದ್ದಾರೆ.

ಎನ್.ಮಹೇಶ್: ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಿಎಸ್‍ಪಿ ರಾಜ್ಯಾಧ್ಯಕ್ಷರೂ ಆದ ಎನ್.ಮಹೇಶ್ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ‘ಬಿಳಿ ಬಣ್ಣದ ಷರಟ್ ಮೇಲೆ ನೀಲಿ ಬಣ್ಣದ ಕೋಟ್, ಟೈ, ಕನ್ನಡಕ ಧರಿಸಿ ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ. ಪ್ರಮಾಣ ವಚನದ ಕೊನೆಯಲ್ಲಿ ಅವರು ಜೈ ಭೀಮ್, ಜೈ ಭಾರತ್ ಎಂದು ಸಂಬೋಧಿಸಿದರು.

ಕೊಳ್ಳೇಗಾಲ ಕ್ಷೇತ್ರದಿಂದ 2004, 2008, 2013ರ ಚುನಾವಣೆಯಲ್ಲಿ ಎನ್.ಮಹೇಶ್ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ ಸೋಲುಂಡಿದ್ದರು. 2018ರ ಚುನಾವಣೆ ಯಲ್ಲಿ ಎನ್.ಮಹೇಶ್ ತನ್ನ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು 19, 454 ಮತಗಳ ಅಂತರ ದಿಂದ ಸೋಲಿಸಿ ಪ್ರಚಂಡ ಗೆಲುವು ಸಾಧಿಸಿದ್ದರು. ಈ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಅವರಿಗೆ ಶಾಸಕರಾದ ಮೊದಲ ಅವಧಿ ಯಲ್ಲಿಯೇ ಸಚಿವರಾಗುವ ಯೋಗ ಕೂಡಿ ಬಂದಿರುವುದು ಅವರ ಅದೃಷ್ಟವೇ ಸರಿ.

1985ರ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಜನತಾ ಪಕ್ಷದ ಬಿ.ಬಸವಯ್ಯ ಗೆಲುವು ಸಾಧಿಸಿದ್ದರು. ಇವರು ಎಸ್.ಆರ್. ಬೊಮ್ಮಾಯಿ ಅವರ ಸಂಪುಟದಲ್ಲಿ ಅಲ್ಪ ಕಾಲ ಸಚಿವರಾಗಿದ್ದರು. ಇದಾದ ನಂತರ ಈ ಕ್ಷೇತ್ರದಿಂದ ಗೆದಿದ್ದ ಶಾಸಕರ್ಯಾರು ಸಚಿವ ರಾಗಿರಲಿಲ್ಲ. ಈಗ ಎನ್.ಮಹೇಶ್ ಸಚಿವ ರಾಗುವ ಮೂಲಕ ಕ್ಷೇತ್ರದಿಂದ ಗೆಲುವು ಸಾಧಿಸಿದ ಶಾಸಕರ ಪೈಕಿ ಎರಡನೇ ಸಚಿವ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಎಸ್‍ಪಿ ಮೈತ್ರಿ ಮಾಡಿಕೊಂಡಿದ್ದವು. ಇದರಲ್ಲಿ ಎನ್.ಮಹೇಶ್ ಗೆಲುವು ಸಾಧಿಸುವ ಮೂಲಕ ಏಕೈಕ ಬಿಎಸ್‍ಪಿ ಶಾಸಕ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇವರ ಅದೃಷ್ಟ ಎಂಬಂತೆ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ಖಚಿತ ಎನ್ನಲಾ ಗಿತ್ತು. ನಿರೀಕ್ಷೆಯಂತೆ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎರ ಡನೇ ಬಾರಿಗೆ ವಿಧಾನಸಭೆಗೆ ‘ಆನೆ’ ಪ್ರವೇಶಿಸಲು ಕಾರಣರಾಗಿದ ಎನ್.ಮಹೇಶ್ ಬಿಎಸ್‍ಪಿಯ ಮೊದಲ ಸಚಿವ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

Translate »