ಸಿ.ಪುಟ್ಟರಂಗಶೆಟ್ಟಿ v/s ಎನ್.ಮಹೇಶ್: ಜಿಲ್ಲೆಯ ಉಸ್ತುವಾರಿ ನೊಗ ಯಾರ ಹೆಗಲಿಗೆ
ಚಾಮರಾಜನಗರ

ಸಿ.ಪುಟ್ಟರಂಗಶೆಟ್ಟಿ v/s ಎನ್.ಮಹೇಶ್: ಜಿಲ್ಲೆಯ ಉಸ್ತುವಾರಿ ನೊಗ ಯಾರ ಹೆಗಲಿಗೆ

June 8, 2018

ಚಾಮರಾಜನಗರ:  ಜಿಲ್ಲೆಯ ಇಬ್ಬರು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ದೊರಕಿದೆ. ಈ ಇಬ್ಬರ ಪೈಕಿ ಯಾರಿಗೆ ಜಿಲ್ಲಾ ಉಸ್ತುವಾರಿ ಹೊಣೆ ದೊರೆಯಲಿದೆ ಎಂಬ ಚರ್ಚೆ ಜಿಲ್ಲೆ ಯಾದ್ಯಂತ ನಡೆಯುತ್ತಿದೆ. ಜಿಲ್ಲೆಯ ಉಸ್ತುವಾರಿ ಹೊಣೆ ವಹಿಸಿ ಕೊಳ್ಳಲು ಈ ಇಬ್ಬರು ಸಚಿವರು ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಯಾರ ಹೆಗಲಿಗೆ ಜಿಲ್ಲೆಯ ಉಸ್ತು ವಾರಿ ನೊಗ ಬೀಳಲಿದೆ ಎಂಬುದು ರಾಜ ಕೀಯ ಹಾಗೂ ಸಾರ್ವಜನಿಕ ವಲಯ ದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಚಾಮರಾಜನಗರ ಕ್ಷೇತ್ರದಿಂದ ‘ಹ್ಯಾಟ್ರಿಕ್’ ಜಯ ಸಾಧಿಸಿ ಉಪ್ಪಾರ ಕೋಟಾದಡಿ ಸಿ.ಪುಟ್ಟರಂಗಶೆಟ್ಟಿ ಸಂಪುಟ ದರ್ಜೆ ಸಚಿವ ರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗೆಯೇ ಕೊಳ್ಳೇಗಾಲ ಮೀಸಲು ಕ್ಷೇತ್ರ ದಿಂದ ‘ಮೊದಲ’ ಬಾರಿಗೆ ಗೆಲುವು ಕಂಡ ಎನ್.ಮಹೇಶ್ ಅವರಿಗೂ ಸಹ ಯಾವುದೇ ರೀತಿಯ ವಿಘ್ನಗಳು ಇಲ್ಲದೇ ಸಚಿವ ಸ್ಥಾನ ತಾನಾಗಿಯೇ ಒಲಿದು ಬಂದಿದೆ. ಇವರಿ ಬ್ಬರಿಗೂ ಸಹ ಖಾತೆಗಳನ್ನು ಹಂಚಿಕೆ ಮಾಡಿಲ್ಲ. ಸಿ.ಪುಟ್ಟರಂಗಶೆಟ್ಟಿ ಅವರಿಗೆ ಕಾರ್ಮಿಕ ಖಾತೆ, ಎನ್.ಮಹೇಶ್ ಅವ ರಿಗೆ ಪ್ರವಾಸೋದ್ಯಮ ಖಾತೆ ನೀಡಲಾಗು ವುದು ಎಂದು ಹೇಳಲಾಗುತ್ತಿದೆ. ಆದರೆ ಇವರಿಬ್ಬರಲ್ಲಿ ಯಾರು ಜಿಲ್ಲೆಯ ಉಸ್ತುವಾರಿ ಆಗಲಿದ್ದಾರೆ ಎಂಬ ಕುತೂ ಹಲ ಎಲ್ಲರಲ್ಲೂ ಮನೆ ಮಾಡಿದೆ.

ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಸಚಿವ ಸಂಪು ಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ದೊರೆಯದಿ ದ್ದುದೇ ಈ ಹಿಂದೆ ಹೆಚ್ಚಾಗಿರುತ್ತಿತ್ತು. ಈ ವೇಳೆ ಹೊರ ಜಿಲ್ಲೆಯ ಸಚಿವರಿಗೆ ಜಿಲ್ಲೆಯ ಉಸ್ತುವಾರಿ ಸ್ಥಾನ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಒಬ್ಬರು ಶಾಸಕರಿಗೆ ಮಂತ್ರಿ ಸ್ಥಾನ ದೊರಕುತ್ತಿತ್ತು. ಹೀಗಾಗಿ ಅವರೇ ಜಿಲ್ಲೆಯ ಉಸ್ತುವಾರಿ ಆಗುತ್ತಿದ್ದರು. ಆದರೆ ಈಗಿನ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯ ಇಬ್ಬರು ಶಾಸಕರಿಗೆ ಮಂತ್ರಿ ಸ್ಥಾನ ದೊರೆತು ಇತಿಹಾಸ ಸೃಷ್ಟಿ ಆಗಿದೆ. ಇವರಿಬ್ಬರಲ್ಲಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲು ಪೈಪೋಟಿ ಏರ್ಪಟ್ಟಿದೆ.

ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದೆ. ಈ ಜಿಲ್ಲೆ ಗಳ ಉಸ್ತುವಾರಿ ಹೊಣೆ ಜೆಡಿಎಸ್ ಸಚಿ ವರ ಪಾಲಾಗಲಿದೆ ಎಂದು ಹೇಳಲಾಗು ತ್ತಿದೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಕಾಂಗ್ರೆಸ್ ಪಾಲಾಗಲಿದ್ದು, ಆ ಪಕ್ಷದ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಜಿಲ್ಲೆಯ ಉಸ್ತುವಾರಿ ಆಗಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ವಿಷಯ ಅರಿತಿರುವ ಸಚಿವ ಎನ್. ಮಹೇಶ್ ಜಿಲ್ಲೆಯ ಉಸ್ತು ವಾರಿಗಾಗಿ ತಮ್ಮ ಗಾಡ್‍ಫಾದರ್ ಮೂಲಕ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವರಿಬ್ಬರಲ್ಲಿ ಯಾರ ಹೆಗಲಿಗೆ ಜಿಲ್ಲೆಯ ಉಸ್ತುವಾರಿಯ ನೊಗ ಬೀಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಜಿಲ್ಲೆಯ ಉಸ್ತುವಾರಿ ಆಗಿದ್ದವರು: 1. ಹೆಚ್.ನಾಗಪ್ಪ , 2. ಜಿ.ರಾಜೂಗೌಡ, 3. ಎಂ.ಮಹದೇವು, 4. ಡಿ.ಟಿ.ಜಯಕುಮಾರ್, 5. ಹೆಚ್.ಎಸ್.ಮಹದೇವಪ್ರಸಾದ್, 6. ಹೆಚ್.ಹಾಲಪ್ಪ, 7. ಸಿ.ಹೆಚ್.ವಿಜಯಶಂಕರ್, 8. ಪಿ.ಎಂ.ನರೇಂದ್ರಸ್ವಾಮಿ, 9. ಎಂ.ಪಿ.ರೇಣುಕಾಚಾರ್ಯ, 10. ವಿ.ಸೋಮಣ್ಣ, 11. ಹೆಚ್.ಎಸ್.ಮಹದೇವಪ್ರಸಾದ್ 12. ಯು.ಟಿ.ಖಾದರ್, 13. ಡಾ.ಗೀತಾಮಹದೇವಪ್ರಸಾದ್

Translate »