ನಾಗರಹೊಳೆ ಅಭಯಾರಣ್ಯದಿಂದ ಗ್ರಾಮಗಳತ್ತ ದಾಳಿಯಿಡುತ್ತಿರುವ ಆನೆಗಳು
ಮೈಸೂರು

ನಾಗರಹೊಳೆ ಅಭಯಾರಣ್ಯದಿಂದ ಗ್ರಾಮಗಳತ್ತ ದಾಳಿಯಿಡುತ್ತಿರುವ ಆನೆಗಳು

June 8, 2018
  • ನಾಗರಹೊಳೆ ಅರಣ್ಯದಿಂದ ಗ್ರಾಮದ ಕಡೆ ಆನೆ ನಡೆ
  • ಆನೆ ದಾಳಿಗೆ ಯುವಕನ ಬೈಕ್ ಜಖಂಗೊಂಡಿರುವುದು
  • ಕಾಡಿನತ್ತ ಅಟ್ಟಲು ಹರಸಾಹಸ ಪಡುತ್ತಿರುವ ಗ್ರಾಮಸ್ಥರು

ನಾಗರಹೊಳೆ: ನಾಗರಹೊಳೆ ಮೀಸಲು ಅರಣ್ಯ ಪ್ರದೇಶದಿಂದ ರೈಲ್ವೇ ಬ್ಯಾರಿಕೇಡ್ ಭೇದಿಸಿ ಹೊರ ಬರುತ್ತಿರುವ ಕಾಡಾನೆಗಳು, ವೀರನಹೊಸಹಳ್ಳಿ ಬಳಿಯ ಗ್ರಾಮಗಳತ್ತ ದಾಳಿ ನಡೆಸುತ್ತಿವೆ.ಕಳೆದ ರಾತ್ರಿ ಆನೆಯೊಂದು ಗ್ರಾಮದ ಜಮೀನುಗಳಿಗೆ ನುಗ್ಗಿ, ಬಾಳೆ ಹಾಗೂ ಇತರೆ ಬೆಳೆಗಳನ್ನು ನಾಶ ಮಾಡಿರುವುದಲ್ಲದೆ, ಹಾಡಿಯ ಯುವಕನೊರ್ವನ ಬೈಕ್ ಅನ್ನು ಜಖಂಗೊಳಿಸಿದೆ. ಬೆಳೆ ನಾಶ ಮಾಡಿದ ನಂತರ ಒಂಟಿ ಸಲಗವು ರೈಲ್ವೇ ಬ್ಯಾರಿಕೇಡ್‍ನಿಂದ ಅರಣ್ಯದೊಳಕ್ಕೆ ನುಸುಳಲೆತ್ನಿಸಿ ಅಲ್ಲೇ ನಿಂತಿದೆ.

ಸಮೀಪದ ಕೊಳವೆಗೆ ಗ್ರಾಮಸ್ಥರು ಆನೆಯನ್ನು ಮರಳಿ ಅರಣ್ಯಕ್ಕಟ್ಟಲು ಯತ್ನಿಸಿದರಾದರೂ ಚಿಕ್ಕಹೆಜ್ಜೂರು ಬುಡಕಟ್ಟು ಹಾಡಿಗಳತ್ತ ತಿರುಗಿದ ಆನೆ ಅಲ್ಲಿನ ಮಹಿಳೆಯರು ಹಾಗೂ ಮಕ್ಕಳಿಗೆ ಭಯ ಭೀತಿ ಉಂಟು ಮಾಡಿದೆ. ನಂತರ ಮನೆ ಹೊರಗೆ ನಿಂತಿದ್ದ ರಮೇಶ ಎಂಬುವರಿಗೆ ಸೇರಿದ ಹೋಂಡಾ ಯೂನಿಕಾರ್ನ್ (ಕೆಎ-45, ಕ್ಯೂ-4232) ಬೈಕ್ ಅನ್ನು ಜಖಂಗೊಳಿಸಿದೆ.

ನಂತರ ಕುಮಾರ್ ಎಂಬುವರನ್ನು ಅವರ ಜಮೀನಿನಲ್ಲಿ ಬೆನ್ನತ್ತಿದೆ ಹೇಗೋ ಅವರು ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಎರಡು ರೈಲ್ವೇ ಕಂಬಿಗಳನ್ನು ತೆರವುಗೊಳಿಸಿ, ಆನೆಯನ್ನು ಅರಣ್ಯದೊಳಕ್ಕೆ ಓಡಿಸಿದ್ದಾರೆ.

Translate »