ಗೌರಿಲಂಕೇಶ ಹಂತಕರಿಂದ  ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೂ ಸಂಚು ಎಸ್‍ಐಟಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಮೈಸೂರು

ಗೌರಿಲಂಕೇಶ ಹಂತಕರಿಂದ  ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೂ ಸಂಚು ಎಸ್‍ಐಟಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

June 8, 2018

ಮೈಸೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಂತಕರು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೂ ಸಂಚು ನಡೆಸಿದ್ದರೆಂಬ ಸ್ಫೋಟಕ ಮಾಹಿತಿ ಬಹಿ ರಂಗವಾಗಿದೆ. ಬೆಂಗಳೂರಿನ ಸ್ಪೆಷಲ್ ಇನ್ ವೆಸ್ಟಿಗೇಷನ್ ಟೀಂ (SIಖಿ) ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ಲೇಖಕಿ, ಪತ್ರಕರ್ತೆ ಗೌರಿ ಲಂಕೇಶ್ ಹಂತಕರಾದ ಹೊಟ್ಟೆ ಮಂಜ ಹಾಗೂ ಅನಿಲ್ ಹೇಳಿಕೆಯಲ್ಲಿ ಈ ವಿಷಯ ಬಾಯ್ಬಿಟ್ಟಿದ್ದಾರೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ಹಿಂದೂ ಧರ್ಮದ ಉಳಿವಿಗೆ ಮೈಸೂ ರಿನ ಕೆ.ಎಸ್.ಭಗವಾನ್ ಅವರನ್ನು ಮುಗಿ ಸಲು ಸಂಚು ರೂಪಿಸಿ ಮುಹೂರ್ತವನ್ನು ಫಿಕ್ಸ್ ಮಾಡಿದ್ದುದಾಗಿ ಬಂಧಿತ ಆರೋಪಿ ಗಳು ಬಹಿರಂಗಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದಕ್ಕಾಗಿ ಗನ್ ವೊಂದನ್ನು ಖರೀದಿಸಿದ್ದ ಹೊಟ್ಟೆ ಮಂಜ, ಅದನ್ನು ಸಹಚರ ಅನಿಲ್‍ಗೆ ಒಪ್ಪಿಸಿದ್ದ. ಮೈಸೂ ರಿನ ಪ್ರೊ.ಭಗವಾನ್ ನಿವಾಸದ ಸಿಸಿ ಕ್ಯಾಮರಾ, ಪೊಲೀಸ್ ಭದ್ರತೆ ಬಗ್ಗೆಯೂ ನಿಗಾ ಇರಿಸಿ, ಅವರ ಚಲನ-ವಲನಗಳನ್ನು ಗಮನಿಸುವಂತೆ ಹೇಳಿದ್ದ ಎಂಬುದು ಸಹ 12 ಪುಟಗಳ ಲಿಖಿತ ಹೇಳಿಕೆಯಲ್ಲಿ ದಾಖ ಲಿಸಲಾಗಿದೆ ಎಂದು ಹೇಳಲಾಗಿದೆ.

ಪ್ರೊ.ಭಗವಾನ್ ಅವರ ಚಟುವಟಿಕೆ ಗಳು, ಅವರ ನಿತ್ಯ ಕಾಯಕ, ಅನುಯಾಯಿ ಗಳ ಸಂಪರ್ಕದ ಬಗ್ಗೆಯೂ ನಿಗಾ ಇರಿಸಿದ್ದ ಹಂತಕರು, ಯಾವ ಸಮಯದಲ್ಲಿ ಅವ ರೊಂದಿಗೆ ಪೊಲೀಸ್ ಬೆಂಗಾವಲಿರುವು ದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಗಮನಿ ಸುತ್ತಿದ್ದರು ಎಂದು ಹೇಳಲಾಗಿದೆ. ಹತ್ಯೆ ಕಾರ್ಯಾಚರಣೆ ನಡೆಸುವ ಮುನ್ನವೇ ವಿಶೇಷ ತನಿಖಾ ದಳದ ಅಧಿಕಾರಿಗಳು ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿ ಕ್ರಿಯೆ ನೀಡಿದ ಪ್ರೊ.ಭಗವಾನ್, ಹೊಟ್ಟೆ ಮಂಜ ಹಾಗೂ ಸಹಚರರು ನನ್ನನ್ನು ಹತ್ಯೆ ಗೈಯ್ಯಲು ಕಾರ್ಯಾಚರಣೆ ನಡೆಸುತ್ತಿದ್ದ ರೆಂಬುದರ ಬಗ್ಗೆ ಪೊಲೀಸರಿಗೆ ಬಲವಾದ ಮಾಹಿತಿ ದೊರೆತಂತಿದೆ. ಆದರೆ ತನಿಖಾ ಧಿಕಾರಿಗಳ್ಯಾರೂ ನನಗೆ ಆ ವಿಷಯ ತಿಳಿಸಿಲ್ಲ ಎಂದರು. ನಾನೂ ಸಹ ಟಿವಿ, ಪತ್ರಿಕೆಗಳಲ್ಲಷ್ಟೇ ನೋಡಿದ್ದೇನೆ. ಕಳೆದ ಎರಡೂವರೆ ವರ್ಷಗಳಿಂದ ನನಗೆ ಗನ್ ಮ್ಯಾನ್ ನೀಡಲಾಗಿದೆ. ಎಚ್ಚರಿಕೆಯಿಂದಿ ದ್ದೇನೆ ಎಂದು ಅವರು ತಿಳಿಸಿದರು.

Translate »