ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಇಂದು ಮತದಾನ
ಚಾಮರಾಜನಗರ

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಇಂದು ಮತದಾನ

June 8, 2018

ಚಾಮರಾಜನಗರ: ಕರ್ನಾ ಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೂನ್ 8ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಇಂದು ಮಸ್ಟರಿಂಗ್ ಕಾರ್ಯ ನಡೆ ಯಿತು. ಬಳಿಕ ಮತಗಟ್ಟೆಗಳಿಗೆ ಚುನಾವಣೆ ಕಾರ್ಯಕ್ಕೆ ನಿಯೋಜಿತವಾಗಿರುವ ಅಧಿಕಾರಿ ಸಿಬ್ಬಂದಿಯವರು ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ ಕೇಂದ್ರಗಳಿಗೆ ಅಗತ್ಯ ಪರಿಕರಗಳೊಂದಿಗೆ ತೆರಳಿದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮಸ್ಟರಿಂಗ್ ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿನ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ದರು. ಜೂನ್ 8ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಗುಂಡ್ಲುಪೇಟೆ, ಚಾಮರಾಜ ನಗರ, ಯಳಂದೂರು, ಕೊಳ್ಳೇಗಾಲ ತಾಲೂಕು ಕಚೇರಿಯ ಮಿನಿ ವಿಧಾನಸೌಧದ ಮೀಟಿಂಗ್ ಹಾಲ್‍ನಲ್ಲಿ ಹಾಗೂ ಹನೂರು ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ ತಲಾ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 5 ಮತಗಟ್ಟೆಗಳನ್ನು ತೆರೆಯಲಾಗಿದೆ.
ಜಿಲ್ಲೆಯಲ್ಲಿ 1351 ಪುರುಷ ಮತ ದಾರರು, 548 ಮಹಿಳಾ ಮತದಾರರು ಸೇರಿದಂತೆ ಒಟ್ಟು 1899 ಮತದಾರರು ಇದ್ದಾರೆ. ಗುಂಡ್ಲುಪೇಟೆ ತಾಲೂಕಿನಲ್ಲಿ 285 ಪುರುಷರು, 61 ಮಹಿಳೆಯರು ಸೇರಿ 346 ಮತದಾರರಿದ್ದಾರೆ. ಚಾಮರಾಜ ನಗರ ತಾಲೂಕಿನಲ್ಲಿ 438 ಪುರುಷರು, 232 ಮಹಿಳೆಯರು ಸೇರಿ 670 ಮತ ದಾರರಿದ್ದಾರೆ. ಯಳಂದೂರು ತಾಲೂಕಿ ನಲ್ಲಿ 132 ಪುರುಷರು, 43 ಮಹಿಳೆಯರು ಸೇರಿ 175 ಮತದಾರರಿದ್ದಾರೆ. ಕೊಳ್ಳೇ ಗಾಲ ತಾಲೂಕಿನಲ್ಲಿ 342 ಪುರುಷರು 189 ಮಹಿಳೆಯರು ಸೇರಿ 531 ಮತದಾರರಿ ದ್ದಾರೆ. ಹನೂರು ತಾಲೂಕಿನಲ್ಲಿ 154 ಪುರುಷರು 23 ಮಹಿಳೆಯರು ಸೇರಿ 177 ಮತದಾರರಿದ್ದಾರೆ.

ಮತದಾನ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ಮಾಹಿತಿ ಕೇಂದ್ರ ನಿಷೇಧ

ಚಾಮರಾಜನಗರ:  ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೂನ್ 8 ರಂದು ಮತದಾನ ನಡೆಯಲಿದ್ದು, ಮತದಾನ ಕೇಂದ್ರದ 200 ಮೀ. ಪ್ರದೇಶದ ಒಳವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸುವಂತಿಲ್ಲ.
ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರ, ನಗರ ಸ್ಥಳೀಯ ಸಂಸ್ಥೆ ಗಳ ಲಿಖಿತ ಅನುಮತಿಯೊಂದಿಗೆ 200 ಮೀ. ಪ್ರದೇಶದ ಹೊರಗೆ ಕೇವಲ ಒಂದು ಮಾಹಿತಿ ಕೇಂದ್ರವನ್ನು ಮಾತ್ರ (1 ಟೇಬಲ್ ಹಾಗೂ 2 ಕುರ್ಚಿಗಳಿಗೆ ಸೀಮಿತಗೊಳಿಸಿ, 3 ಅಡಿ ಅಗಲ ನಾಲ್ಕೂವರೆ ಅಡಿ ಉದ್ದದ ಬ್ಯಾನರ್) ಮತದಾರರಿಗೆ ಅನಧಿಕೃತ ಗುರುತಿನ ಚೀಟಿಗಳನ್ನು ನೀಡುವ ಸಲುವಾಗಿ ಸ್ಥಾಪಿಸಬಹುದಾಗಿದೆ. ಮಾಹಿತಿ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಮುಂಚಿತವಾಗಿ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿ ರುವ ಬಿ.ಬಿ. ಕಾವೇರಿ ತಿಳಿಸಿದ್ದಾರೆ.

ಇಂದು ವಿಶೇಷ ಸಾಂದರ್ಭಿಕ ರಜೆ

ಚಾಮರಾಜನಗರ:  ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಜೂ.8ರಂದು ಮತ ದಾನ ನಡೆಯಲಿರುವ ಹಿನ್ನೆಲೆಯಲ್ಲಿ ಅರ್ಹ ಮತದಾರರಿಗೆ ಮತದಾನ ಮಾಡಲು ಅನು ಕೂಲವಾಗುವಂತೆ ಜೂ.8ರಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.

ವಿಧಾನ ಪರಿಷತ್ ಮತಕ್ಷೇತ್ರಗಳಲ್ಲಿನ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು, ಅನುದಾನ, ಅನುದಾನ ರಹಿತ ವಿದ್ಯಾಸಂಸ್ಥೆ ಸೇರಿದಂತೆ ಎಲ್ಲ ಶೈಕ್ಷಣ ಕ ಸಂಸ್ಥೆಗಳು, ರಾಜ್ಯ, ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಇತರೆ ಬ್ಯಾಂಕುಗಳು, ರಾಜ್ಯ, ಕೇಂದ್ರ ಸರ್ಕಾ ರದ ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಸಹಕಾರಿ ರಂಗದ ಸಂಸ್ಥೆಗಳಲ್ಲಿ ಕೆಲಸ ನಿರ್ವ ಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗು ವಂತೆ ಅರ್ಹ ಮತದಾರರಿಗೆ ಹಾಗೂ ಎಲ್ಲ ವ್ಯಾವಹಾರಿಕ, ಔದ್ಯಮಿಕ ಸಂಸ್ಥೆಗಳು, ಇನ್ನಿ ತರ ಎಸ್ಟಾಬ್ಲಿಷ್‍ಮೆಂಟ್‍ನಲ್ಲಿ ಖಾಯಂ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿ ರುವ ಎಲ್ಲ ಅರ್ಹ ಮತದಾರರಿಗೆ ಸೀಮಿತ ವಾಗುವಂತೆ ಮತದಾನ ಮಾಡಲು ಸರ್ಕಾ ರದ ಅಧಿಸೂಚನೆಯಂತೆ ಜೂನ್ 8 ರಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾ ವಣಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ

Translate »