ಜಿಂಕೆ ಮಾಂಸ ಸಾಗಾಣೆ; ಆರೋಪಿ ಬಂಧನ
ಚಾಮರಾಜನಗರ

ಜಿಂಕೆ ಮಾಂಸ ಸಾಗಾಣೆ; ಆರೋಪಿ ಬಂಧನ

June 8, 2018

ಹನೂರು: ಅರಣ್ಯದೊಳಗೆ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸು ತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿ ಗಳು ಬಂಧಿಸಿದ್ದಾರೆ.
ಹನೂರು ಸಮೀಪದ ಸೊಪ್ಪಿನಗುಡ್ಡೆ ಗ್ರಾಮದ ರಾಮಚಂದ್ರ ಬಂಧಿತ ಆರೋಪಿ.

ಪಿ.ಜಿ. ಪಾಳ್ಯ ವನ್ಯಜೀವಿ ವಲಯದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಾಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಅರಣ್ಯಾಧಿಕಾರಿ ಗಳು ದಾಳಿ ಮಾಡಿ ಜಿಂಕೆ ಚರ್ಮ ಮತ್ತು ಎರಡು ಕೆ.ಜಿ ಮಾಂಸವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಮಸಿಬಾವಿದೊಡ್ಡಿ ಗ್ರಾಮದ ದೊರೆ ಹಾಗೂ ಸೊಪ್ಪಿನಗುಡ್ಡೆ ಗ್ರಾಮದ ಸೋಮ ಎಂಬುವವರು ಜಿಂಕೆ ಮಾಂಸದೊಂದಿಗೆ ಪರಾರಿಯಾಗಿದ್ದಾರೆ.

ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಸಯ್ಯಾದ್‍ಸಾಬಾ, ಎಚ್. ನದಾಫ್, ಉಪ ವಲಯ ಅರಣ್ಯಾಧಿಕಾರಿ ವಿಜಯ್ ಕುಮಾರ್, ಅರಣ್ಯ ರಕ್ಷಕ ಕೃಷ್ಣಪ್ಪ, ನವೀನ್ ಕುಮಾರ್ ಪಾಲ್ಗೊಂಡಿದ್ದರು.

Translate »