ಕೇಂದ್ರದಲ್ಲಿ ಮೋದಿ ಸರ್ಕಾರ ಬದಲಿಸಲು ಶ್ರಮಿಸಿ
ಚಾಮರಾಜನಗರ

ಕೇಂದ್ರದಲ್ಲಿ ಮೋದಿ ಸರ್ಕಾರ ಬದಲಿಸಲು ಶ್ರಮಿಸಿ

March 20, 2019

ಹನೂರು: ಕೇಂದ್ರದಲ್ಲಿ ಮೋದಿ ಸರ್ಕಾರವನ್ನು ಬದಲಾಯಿಸಿ, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಸಂಘಟನೆಗೆ ಕಾರ್ಯಕರ್ತರು, ಮುಖಂ ಡರು ಶ್ರಮಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದರು.

ಪಟ್ಟಣದ ಶ್ರೀ ವಾಸವಿ ಮಹಲ್‍ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಹಿನೆÀ್ನಲೆ ಯಲ್ಲಿ ಆಯೋಜಿಸಿದ್ದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಯಾರೇ ನಿಲ್ಲಲಿ ಅದರ ಚಿಂತೆ ಬೇಡ. ಸಂಸದ ಆರ್.ಧ್ರುವನಾರಾ ಯಣ್ ಉತ್ತಮ ಸಂಸದರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ನಮ್ಮ ಪಕ್ಷದ ಸಿದ್ಧಾಂತ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಸಂಸದರ ಜನ ಪ್ರಿಯ ಕಾರ್ಯಕ್ರಮಗಳನ್ನು ಹಿಡಿದು ಮತ ಕೇಳಿ ಎಂದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಸಂಸದ ಧ್ರುವನಾರಾಯಣ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಜನಪರ ಸಾಧನೆ ಹಾಗೂ ಯುಪಿಎ ಆಡಳಿತದಲ್ಲಿ ಇದ್ದಾಗ ಕೈಗೊಂಡ ಜನಪ್ರಿಯ ಕಾರ್ಯಗಳು ಮತ್ತು ನನ್ನ ಕೆಲಸ ಕಾರ್ಯಗಳ ಬಗ್ಗೆ ಜನತೆಗೆ ತಿಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಾಗಿದೆ. ಮತ ದಾರರ ಮುಂದೆ ಧೈರ್ಯವಾಗಿ ಮತ ಕೇಳಿ, ನಾನು ಸಂಸದನಾಗಿ ನಾನು ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳ ಕೈಪಿಡಿ ಯಲ್ಲಿರುವ ವಿಷಯಗಳನ್ನು ಮತದಾ ರರಿಗೆ ತಿಳಿಸುವ ಜೊತೆಗೆ ಕೇಂದ್ರದ ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿರುವ ಬಗ್ಗೆ ತಿಳಿಸಿ ಎಂದು ಕರೆ ನೀಡಿದರು.

ಆಹಾರ ನಿಗಮದ ಅಧ್ಯಕ್ಷರೂ ಆದ ಶಾಸಕ ಆರ್.ನರೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಹಿತ, ಭದ್ರತೆ ದೃಷ್ಟಿ ಯಿಂದ ಬಿಜೆಪಿಯನ್ನು ದೂರವಿಡ ಬೇಕಾಗಿದೆ. ಡಾ.ಬಾಬಾ ಸಾಹೇಬ್ ಅಂಬೇ ಡ್ಕರ್ ನೀಡಿರುವ ಅತ್ಯುತ್ತಮ ಸಂವಿಧಾ ನದÀ ಬಗ್ಗೆ ಪ್ರಪಂಚದಾದ್ಯಂತ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ವರುಣಾ ಕ್ಷೇತ್ರ ಶಾಸಕ ಡಾ.ಯತೀಂದ್ರ, ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಜಿಪಂ ಅಧ್ಯಕ್ಷೆ ಶಿವಮ್ಮ, ಕೆಪಿಸಿಸಿ ಸದಸ್ಯರಾದ ಬಸವ ರಾಜು, ಜಿಪಂ ಸದಸ್ಯರಾದ ಬಸವರಾಜು, ಮರಗದಮಣಿ, ಮಾಜಿ ಸದಸ್ಯರಾದ ಕೊಪ್ಪಾಳಿ ಮಹಾದೇವನಾಯಕ, ಶಿವಕುಮಾರ್, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ತಾಪಂ ಸದಸ್ಯ ಜವಾದ್ ಅಹಮದ್, ಬಾಲರಾಜು, ಬ್ಲಾಕ್ ಕಾಂಗೆÀ್ರಸ್ ಅಧ್ಯಕ್ಷರಾದ ಈಶ್ವರ್, ಕೆಂಪಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮರಿಸ್ವಾಮಿ, ನಾಗರಾಜು, ಮಂಗಲ ಪುಟ್ಟರಾಜು, ಕಾಂಗ್ರೆಸ್ ಕಾರ್ಯಕರ್ತರಿದ್ದರು.

Translate »