ಹನೂರು ಬಳಿ ಟೆಂಪೋ ಉರುಳಿ 40ಕ್ಕೂ ಅಧಿಕ ಜನರಿಗೆ ಗಾಯ
ಚಾಮರಾಜನಗರ, ಮೈಸೂರು

ಹನೂರು ಬಳಿ ಟೆಂಪೋ ಉರುಳಿ 40ಕ್ಕೂ ಅಧಿಕ ಜನರಿಗೆ ಗಾಯ

November 8, 2020

ಹನೂರು, ನ.7(ಸೋಮು)- ಸಂಬಂಧಿಕ ರೊಬ್ಬರ ಅಂತ್ಯಸಂಸ್ಕಾರಕ್ಕೆ ತೆರಳಿ ವಾಪಸ್ ಬರುತ್ತಿ ದ್ದಾಗ ಟೆಂಪೋ ಉರುಳಿ ಬಿದ್ದು 40ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಹಲಗಾಪುರ ಗ್ರಾಮದ ಬಳಿ ಶನಿವಾರ ನಡೆದಿದೆ.

ಗಾಯಗೊಂಡ ಎಲ್ಲರೂ ಹುತ್ತೂರು ಗ್ರಾಮದವ ರಾಗಿದ್ದಾರೆ. ತಾಲೂಕಿನ ಶಾಗ್ಯ ಗ್ರಾಮದಲ್ಲಿ ಮೂಲ ಹುತ್ತೂರು ಗ್ರಾಮದ ದುಂಡಮ್ಮ ಹಾಗೂ ಮಲ್ಲ ನಾಯಕ ಅವರ ಪುತ್ರ ಪ್ರದೀಪ್(25) ಅನಾ ರೋಗ್ಯದಿಂದ ಶುಕ್ರವಾರ ರಾತ್ರಿ ಮೈಸೂರಿನ ಆಸ್ಪತ್ರೆ ಯಲ್ಲಿ ನಿಧನರಾಗಿದ್ದು, ಈ ವಿಚಾರ ತಿಳಿದು, ಹುತ್ತೂರು ಗ್ರಾಮದ ದುಂಡಮ್ಮ ಅವರ ಸುಮಾರು 40ಕ್ಕೂ ಹೆಚ್ಚು ಸಂಬಂಧಿಕರು ಶನಿವಾರ ಬೆಳಗ್ಗೆ ಈಚರ್ ಟೆಂಪೋದಲ್ಲಿ ತೆರಳಿದ್ದರು. ಶವ ಸಂಸ್ಕಾರ ಮುಗಿಸಿಕೊಂಡು ವಾಪಸ್ ಸ್ವ ಗ್ರಾಮಕ್ಕೆ ಬರುತ್ತಿದ್ದಾಗ ಹಲಗಾಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ 3 ಸುತ್ತು ಉರುಳಿದೆ. ಪರಿಣಾಮ ಟೆಂಪೋದಲ್ಲಿದ್ದ 40ಕ್ಕೂ ಹೆಚ್ಚು ಮಂದಿಯೂ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿ, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮೀಪದ ಹೋಲಿಕ್ರಾಸ್ ಆಸ್ಪತ್ರೆಗೆ 14 ಜನರು ಚಿಕಿತ್ಸೆಗಾಗಿ ದಾಖಲಾಗಿದ್ದು ಇವರಲ್ಲಿ ಇಬ್ಬರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಇನ್ನುಳಿದ 34 ಜನರನ್ನು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ 4 ಜನರನ್ನು ಮೈಸೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಗಾಯಗೊಂಡಿರುವ ಬಹುತೇಕರಿಗೆ ಬೆನ್ನುಮೂಳೆ ಮುರಿತದಂಥ ಗಂಭೀರ ಸ್ವರೂಪದ ಗಾಯಗಳಾಗಿವೆ ಘಟನಾ ಸ್ಥಳಕ್ಕೆ ಹನೂರು ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಶಾಸಕ ಆರ್.ನರೇಂದ್ರ ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಬಗ್ಗೆ ವಿಚಾರಿಸಿದರು. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಅಗತ್ಯವಿದ್ದರೆ ಮೈಸೂರಿಗೆ ರವಾನಿಸುವಂತೆ ವೈದ್ಯರಿಗೆ ಸೂಚಿಸಿದರು.

Translate »