ನಾಗರತ್ನ ಸ್ವಾಮಿಯವರೇ ಅಧಿಕೃತ ಅಧ್ಯಕ್ಷರು
ಮಂಡ್ಯ, ಮೈಸೂರು

ನಾಗರತ್ನ ಸ್ವಾಮಿಯವರೇ ಅಧಿಕೃತ ಅಧ್ಯಕ್ಷರು

November 8, 2020

ಮಂಡ್ಯ, ನ.7-ಜಿಲ್ಲಾ ಪಂಚಾಯ್ತಿಗೆ ನಾಗರತ್ನ ಸ್ವಾಮಿಯವರೇ ಅಧಿಕೃತ ಅಧ್ಯಕ್ಷರಾಗಿದ್ದಾರೆ ಎಂದು ಜಿಪಂ ಸಿಇಓ ಜುಲ್ಫಿಕಾರ್ ಉಲ್ಲಾ ಸ್ಪಷ್ಟಪಡಿಸಿದರು.

ಇಂದು ಸಂಜೆ ಜಿಪಂ ಅಧ್ಯಕ್ಷರ ಕೊಠಡಿ ಯಲ್ಲಿ ನಾಗರತ್ನ ಸ್ವಾಮಿ ಅವರ ಸಮ್ಮುಖ ದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾ ಯತ್ ರಾಜ್ ಅಧಿನಿಯಮ 1993ರ ಪ್ರಕರಣ 177(2)(ಸಿ)(3)ರ ಪ್ರಕಾರ ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 30 ತಿಂಗಳು ಎಂದು ಸರ್ಕಾರ ಅಧಿ ಸೂಚನೆ ಹೊರಡಿಸಿದೆ. ಆದರೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಗೆ ಸಂಬಂಧಿಸಿ ದಂತೆ ಸರ್ಕಾರ ಇನ್ನೂ ಆದೇಶ ಹೊರ ಡಿಸದ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಕಟ ವಾಗುವವರೆಗೂ ನಾಗರತ್ನ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದರು. ಜಿಪಂ ಅಧ್ಯಕ್ಷರ ಕೊಠಡಿಗೆ ಪ್ರವೇಶಿಸಿ ಯಾವ ಮಾನದಂಡದ ಆಧಾರದ ಮೇಲೆಯೇ ಸಿ.ಅಶೋಕ್ ಅವರು ಅಧಿಕಾರ ಸ್ವೀಕರಿಸಿದ್ದರೋ ಗೊತ್ತಿಲ್ಲ. ಅವರು ಅಧಿಕಾರ ಸ್ವೀಕರಿಸಿದಾಗ ನಾನು ಇರಲಿಲ್ಲ. ನನ್ನ ಅನುಪಸ್ಥಿತಿಯಲ್ಲಿ ಅದು ನಡೆದಿದೆ. ಈ ಸಂಬಂಧ ಜಿಪಂ ಅಧ್ಯಕ್ಷರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ನನ್ನ ಅನುಪಸ್ಥಿತಿಯಲ್ಲಿ ನಡೆದಿರುವ ಘಟನೆಗಳ ಕುರಿತು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದ ಅವರು, ಇಂದು ಬೆಳಿಗ್ಗೆ ಶಾಸಕರಾದ ಸಿ.ಎಸ್.ಪುಟ್ಟರಾಜು ಮತ್ತು ಡಿ.ಸಿ.ತಮ್ಮಣ್ಣ ಅವರು ಸರ್ಕಾರದ ಅಧಿಸೂಚನೆಯಂತೆ ನಾಗರತ್ನ ಜಿಪಂ ಅಧ್ಯಕ್ಷರಾಗಿ ಮುಂದು ವರೆಯುವ ಅಧಿಕಾರ ಕಳೆದುಕೊಂಡಿದ್ದಾರೆ. ಆದ್ದರಿಂದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಅಶೋಕ್ ಅವರು ಜಿಪಂ ಅಧ್ಯಕ್ಷರ ಅಧಿಕಾರ ಸ್ವೀಕರಿಸಲು ಅನುವು ಮಾಡಿಕೊಡಿ ಎಂದು ಹೇಳಿದ್ದರು. ಆದರೆ ನಾನು ಅದಕ್ಕೆ ಒಪ್ಪದೇ ಸರ್ಕಾರದೊಂದಿಗೆ ಮಾತನಾಡೋಣ ಎಂದು ಶಾಸಕದ್ವಯರಿಗೆ ತಿಳಿಸಿದ್ದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ ಮಾತನಾಡಿ, ಅಶೋಕ್ ವಿರುದ್ಧ ಜಿಲ್ಲಾ ಎಸ್ಪಿಯವರಿಗೆ ದೂರು ನೀಡಿದ ನಂತರ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ನನ್ನ ಜೊತೆ ಮಾತನಾಡಿ ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಅಧಿಕೃತವಾಗಿ ತಿಳಿಸಿ ಎಂದು ನಾನು ಕೇಳಿಕೊಂಡ ಹಿನ್ನೆಲೆಯಲ್ಲಿ ಜಿಪಂ ಸಿಇಓ ಅವರು ನನ್ನ ಕೊಠಡಿ ಯಲ್ಲೇ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ ಎಂದರು.

Translate »