ಹಂಗಾಮಿ ಅಧ್ಯಕ್ಷರಾಗಿ ಅಶೋಕ್ ಅಧಿಕಾರ ಸ್ವೀಕಾರ
ಮಂಡ್ಯ, ಮೈಸೂರು

ಹಂಗಾಮಿ ಅಧ್ಯಕ್ಷರಾಗಿ ಅಶೋಕ್ ಅಧಿಕಾರ ಸ್ವೀಕಾರ

November 8, 2020

ಮಂಡ್ಯ, ನ.7-ಮಂಡ್ಯ ಜಿಲ್ಲಾ ಪಂಚಾಯ್ತಿ ಯಲ್ಲಿ ಶನಿವಾರ ಹೈಡ್ರಾಮಾವೇ ನಡೆದು ಹೋಯಿತು. ಜಿಲ್ಲಾ ಪಂಚಾಯ್ತಿ ಸಾಮಾ ಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಅವರು ಶನಿವಾರ ಬೆಳಗ್ಗೆ ಕೆಲ ಜಿಪಂ ಸದಸ್ಯರೊಂದಿಗೆ ಆಗಮಿಸಿ ಜಿಪಂ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡರು. ಈ ದಿಢೀರ್ ರಾಜಕೀಯ ಬೆಳವಣಿಗೆ ಹಲವು ಗೊಂದಲಗಳಿಗೆ, ರಾಜ ಕೀಯ ಮೇಲಾಟಗಳಿಗೆ ನಾಂದಿಯಾಗಿದೆ.

ಈ ವಿಷಯ ಅರಿತ ಜಿಪಂ ಅಧ್ಯಕ್ಷೆ ನಾಗ ರತ್ನ ಸ್ವಾಮಿ ಅವರು ಸಂಜೆ ವೇಳೆಗೆ ಕಚೇರಿಗೆ ಆಗಮಿಸಿದ್ದಲ್ಲದೇ, ಜಿಪಂ ಅಧ್ಯಕ್ಷರ ಕೊಠಡಿಗೆ ಸಿ.ಅಶೋಕ್ ಅವರು ಅತಿಕ್ರಮ ಪ್ರವೇಶ ಮಾಡಿ, ನಿಯಮಬಾಹಿರವಾಗಿ ಅಧ್ಯಕ್ಷರ ಕುರ್ಚಿಯಲ್ಲಿ ಆಸೀನರಾಗಿ ನನ್ನ ಕರ್ತವ್ಯ ನಿರ್ವಹಣೆಗೆ ಅಡಚಣೆ ಉಂಟು ಮಾಡಿ ದ್ದಾರೆ ಎಂದು ಜಿಲ್ಲಾ ಎಸ್ಪಿ ಪರಶುರಾಂ ಅವರಿಗೆ ದೂರು ಸಲ್ಲಿಸಿದ್ದಾರೆ.

ವಿವರ: ನಾಗರತ್ನ ಸ್ವಾಮಿ ಅವರು ಜಿಪಂ ಅಧ್ಯಕ್ಷರಾಗಿ 2018ರ ಮೇ 2ರಂದು ಅಧಿಕಾರ ವಹಿಸಿಕೊಂಡಿದ್ದರು. ಆ ವೇಳೆ ಜಿಪಂ ಅಧ್ಯಕ್ಷ ಸ್ಥಾನದ ಅವಧಿ 5 ವರ್ಷವಿತ್ತು. ಆದರೆ ರಾಜ್ಯ ಸರ್ಕಾರವು

2020ರ ಮಾ.31ರಂದು ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯನ್ನು 30 ತಿಂಗಳಿಗೆ ನಿಗದಿಪಡಿಸಿ ಸುಗ್ರೀವಾಜ್ಞೆ ತಂದಿತ್ತು. ಆದರೆ ಈ ಹಿಂದೆ 5 ವರ್ಷಗಳ ಅವಧಿಗೆ ಅಧ್ಯಕ್ಷರ ಸ್ಥಾನಕ್ಕೆ ನಿಗದಿಪಡಿಸಿದ್ದ ಮೀಸಲಾತಿಯನ್ನು 30 ತಿಂಗಳಿಗೆ ಕಡಿತ ಮಾಡಿ ಅಧಿಸೂಚನೆ ಹೊರಡಿಸಿರಲಿಲ್ಲ. ಒಂದೆಡೆ ಸರ್ಕಾರದ ಅದೇಶದಂತೆ 30 ತಿಂಗಳಿಗೆ ನಾಗರತ್ನ ಸ್ವಾಮಿ ಅವರ ಅಧ್ಯಕ್ಷ ಸ್ಥಾನ ಮುಕ್ತಾಯಗೊಂಡಿದ್ದು, ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗುವವರೆಗೂ ತಾವು ಹಂಗಾಮಿ ಅಧ್ಯಕ್ಷರು ಎಂದು ಹೇಳಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಎಂದು ವಾದಿಸುತ್ತಿದ್ದರೆ, ತಮ್ಮ ಅಧ್ಯಕ್ಷ ಸ್ಥಾನದ ಅವಧಿ ಮುಗಿದಿಲ್ಲ ಎಂದು ನಾಗರತ್ನ ಸ್ವಾಮಿ ಪಟ್ಟಾಗಿ ಕುಳಿತ್ತಿದ್ದರಿಂದ ಈ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಈ ಮಧ್ಯೆ ಸರ್ಕಾರಿ ಆದೇಶದಂತೆ ತಮಗೆ ಜಿಪಂ ಹಂಗಾಮಿ ಅಧ್ಯಕ್ಷ ಸ್ಥಾನ ವಹಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಸಿ.ಅಶೋಕ್ ಅವರು ನ.6ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು ಅವರ ಮನವಿಯನ್ನು ಲಗತ್ತಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಮತ್ತು ನಿಯಮಗಳನ್ವಯ ಕ್ರಮ ವಹಿಸುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಅದೇ ದಿನ ಪತ್ರ ಬರೆದಿದ್ದರು. ಇಂದು ಬೆಳಿಗ್ಗೆ ಜಿಪಂ ಅಧ್ಯಕ್ಷರ ಕೊಠಡಿಗೆ ಕೆಲ ಸದಸ್ಯರೊಂದಿಗೆ ಆಗಮಿಸಿದ ಅಶೋಕ್, ಜಿಪಂ ಅಧ್ಯಕ್ಷರ ಸ್ಥಾನದಲ್ಲಿ ಕುಳಿತು ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯನ್ನು 5 ವರ್ಷದಿಂದ 30 ತಿಂಗಳಿಗೆ ಕಡಿತಗೊಳಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದರಿಂದ ನಾಗರತ್ನ ಸ್ವಾಮಿ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯವಾಗಿದ್ದು, ನಿಯಮದಂತೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ತಾವು ಜಿಪಂನ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಂಡಿರುವು ದಾಗಿ ಘೋಷಿಸಿದರು. ಸಂಜೆ ವೇಳೆಗೆ ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ ಜಿಲ್ಲಾ ಎಸ್ಪಿ ಕಚೇರಿಗೆ ತೆರಳಿ ಅಶೋಕ್ ವಿರುದ್ಧ ದೂರು ಸಲ್ಲಿಸಿದರಲ್ಲದೇ, ಜಿಪಂ ಕಚೇರಿಗೆ ಬಂದು ತಮ್ಮ ಕೊಠಡಿಯಲ್ಲಿ ತಮ್ಮ ಸ್ಥಾನವನ್ನು ಅಲಂಕರಿಸಿ, ತಾವೇ ಜಿಪಂ ಅಧ್ಯಕ್ಷೆ ಎಂದು ಘೋಷಿಸಿದರು.

Translate »