ಬಿಎಸ್‍ಪಿ ಅಭ್ಯರ್ಥಿಯಾಗಿ ಡಾ.ಶಿವಕುಮಾರ್ ಆಯ್ಕೆ
ಚಾಮರಾಜನಗರ

ಬಿಎಸ್‍ಪಿ ಅಭ್ಯರ್ಥಿಯಾಗಿ ಡಾ.ಶಿವಕುಮಾರ್ ಆಯ್ಕೆ

March 20, 2019

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ದಿಂದ ಬಿಎಸ್‍ಪಿ ಪಕ್ಷದ ಅಭ್ಯರ್ಥಿಯಾಗಿ ಐಎಎಸ್ ತರÀ ಬೇತುದಾರ ಡಾ.ಶಿವಕುಮಾರ್ ಅವರನ್ನು ಕಣಕ್ಕಿಳಿಸಿದೆ.

ರಾಜ್ಯಾಧ್ಯಕ್ಷ ಪ್ರೊ.ಎ.ಹರಿರಾಮ್ ಅವರು ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದಾರೆ. ಈ ಪಟ್ಟಿಯಲ್ಲಿ ಚಾಮ ರಾಜನಗರ ಕ್ಷೇತ್ರದಿಂದ ಡಾ.ಶಿವಕುಮಾರ್, ಚಿಕ್ಕಬ ಳ್ಳಾಪುರ ಕ್ಷೇತ್ರದಿಂದ ಡಾ.ಸಿ.ಎಸ್.ದ್ವಾರಕನಾಥ್ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.

ಚಾಮರಾಜನಗರ ಕ್ಷೇತ್ರದಿಂದ ಡಾ.ಶಿವಕುಮಾರ್ ಸ್ಪರ್ಧಿಸುವುದು ಖಚಿತ ಎಂದು ಮೈಸೂರು ಮಿತ್ರ ಫೆ.19 ಸಂಚಿಕೆಯಲ್ಲಿಯೇ ಪ್ರಕಟಿಸಿತ್ತು. ಅದರಂತೆ ಶಿವಕುಮಾರ್ ಅವರ ಆಯ್ಕೆ ನಿಜವಾಗಿದೆ. ಡಾ.ಶಿವಕುಮಾರ್ ಸಂಶೋಧಕ ಹಾಗೂ ಐಎಎಸ್ ತರಬೇತುದಾರರಾಗಿದ್ದು, ದೆಹಲಿ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ವಿದ್ಯಾ ರ್ಥಿಗಳಿಗೆ ಐಎಎಸ್ ತರಬೇತಿ ನೀಡುತ್ತಿದ್ದರು. ಇದೇ ಪ್ರಥಮ ಬಾರಿಗೆ ಚಾಮ ರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಇವರು ಈ ಹಿಂದೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಶೌಚಾಲಯ ದುರಸ್ತಿಪಡಿಸಿ, ಪಡಸಾಲೆ ಆವರಣವನ್ನು ಹೈಟೆಕ್ ಮಾದರಿಯಲ್ಲಿ ನವೀಕರಿಸಿ ನಾಗರಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗಿದೆ ಎಂದು ತಹಸೀಲ್ದಾರ್ ಎನ್.ವಿ.ನಟೇಶ್ ಹೇಳಿದರು.

ನಗರದ ತಾಲೂಕು ಕಚೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಸೇರಿದಂತೆ ಸಾರ್ವಜನಿಕ ವಲಯ ಹಾಗೂ ವಿವಿಧ ಸಂಘ ಸಂಸ್ಥೆಗಳು ಕಚೇರಿಯಲ್ಲಿರುವ ಮೂಲಸೌಲಭ್ಯ

Translate »