ಪ್ರೊ.ಭಗವಾನ್ ಮುಖಕ್ಕೆ ಮಸಿ ಖಂಡಿಸಿ ದಸಂಸ ಪ್ರತಿಭಟನೆ
ಮೈಸೂರು

ಪ್ರೊ.ಭಗವಾನ್ ಮುಖಕ್ಕೆ ಮಸಿ ಖಂಡಿಸಿ ದಸಂಸ ಪ್ರತಿಭಟನೆ

February 7, 2021

ಮೈಸೂರು,ಫೆ.6(ಪಿಎಂ)-ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದು ಅಪಮಾನಿಸಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ/ಬುದ್ಧವಾದ) ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬೆಂಗ ಳೂರಿನ ನ್ಯಾಯಾಲಯದ ಆವರಣದಲ್ಲಿ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಹಿಳಾ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದಿರುವುದು ಹೇಯ ಕೃತ್ಯ ಎಂದು ಖಂಡಿಸಿದರು.

ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಚರ್ಚೆ ಅಥವಾ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಬೇಕು. ಇದನ್ನು ಬಿಟ್ಟು ಒಬ್ಬ ಹಿರಿಯ ಸಾಹಿತಿ ಮುಖಕ್ಕೆ ಮಸಿ ಬಳಿಯು ವುದು ಖಂಡನಾರ್ಹ. ಒಬ್ಬ ಮಹಿಳಾ ವಕೀಲೆ ಯಾಗಿ ನ್ಯಾಯ ಎತ್ತಿಹಿಡಿಯಬೇಕಾದ ಇವರೇ ಕಾನೂನು ಕೈಗೆತ್ತಿಗೊಳ್ಳುವುದು ಎಷ್ಟು ಸರಿ? ನಾವು ಹಿಂದೂ ಧರ್ಮವನ್ನು ಗೌರವಿಸುತ್ತೇವೆ. ಆದರೆ ಹಿಂದೂ ಧರ್ಮ ದಲ್ಲಿರುವ ಅಸ್ಪøಶ್ಯತೆ, ಜಾತಿಯತೆ, ಅಸಮಾ ನತೆ, ಲಿಂಗ ಭೇದವನ್ನು ವಿರೋಧಿಸು ತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರನ್ನು 5 ಸಾವಿರ ವರ್ಷಗಳಿಂದ ದೇವರು ಮತ್ತು ಧರ್ಮದ ಹೆಸರಿನಲ್ಲಿ ಕತ್ತಲೆಯಲ್ಲಿ ಇಡಲಾಗಿತ್ತು. ಇದರಿಂದ ದಲಿತ ಸಮುದಾಯದ ಸ್ಥಿತಿ ಅತ್ಯಂತ ಶೋಚ ನೀಯವಾಗಿತ್ತು. ಬಾಬಾ ಸಾಹೇಬ್ ಅಂಬೇ ಡ್ಕರ್ ಬರುವವರೆಗೆ ದಲಿತರನ್ನು ಈ ವ್ಯವ ಸ್ಥೆಯು ಮನುಷ್ಯರ ರೀತಿ ನೋಡುತ್ತಿರ ಲಿಲ್ಲ. ನಮ್ಮ ಬದುಕು ಪ್ರಾಣಿಗಳಿಂತಲೂ ಹೀನಾಯವಾಗಿತ್ತು ಎಂದು ಕಿಡಿಕಾರಿದರು.

ಈಗಲೂ ಪ್ರತಿದಿನ ಮಹಿಳೆಯರು ಹಾಗೂ ಮಕ್ಕಳ ಮೇಲೆ, ಅದರಲ್ಲೂ ದಲಿತ ಸಮುದಾಯದ ಮಹಿಳೆಯರ ಮೇಲೆ ಅತ್ಯಾ ಚಾರ, ದೌರ್ಜನ್ಯ ನಡೆಯುತ್ತಲೇ ಇವೆ. ಈ ಬಗ್ಗೆ ಮಹಿಳಾ ವಕೀಲರಾಗಿ ಮೀರಾ ರಾಘವೇಂದ್ರ ಏಕೆ ದನಿ ಎತ್ತಿಲ್ಲ? ಇಂತಹ ಕೃತ್ಯಗಳ ಬಗ್ಗೆ ದನಿ ಎತ್ತಬೇಕಾದ ಮಹಿಳಾ ನ್ಯಾಯವಾದಿಗಳು ಪ್ರೊ.ಭಗವಾನ್ ಅವರ ಮುಖಕ್ಕೆ ಮಸಿ ಬಳಿಯುವ ಮೂಲಕ ಅವರ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ರಾಜ್ಯ ಸಂಚಾಲಕ ನಿಂಗರಾಜ ಮಲ್ಲಾಡಿ, ರಾಜ್ಯ ಸಂಘಟನಾ ಸಂಚಾಲಕ ಕೆ.ನಂಜಪ್ಪ ಬಸವನಗುಡಿ, ನಗರ ಸಂಚಾಲಕ ರಾದ ಬಿ.ರಂಗಸ್ವಾಮಿ, ಸಿ.ಮೋಹನ್ ಕುಮಾರ್, ಮಹಿಳಾ ಮುಖಂಡರಾದ ರಂಗಮ್ಮ, ಮಾಳಮ್ಮ, ಶಾಂತಮ್ಮ, ರಾಣಿ, ಭಾಗ್ಯಮ್ಮ, ದೇವಿರಮ್ಮ ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »