ರಕ್ತದಾನ ಶಿಬಿರಕ್ಕೆ ರಕ್ತದಾನದ ಮೂಲಕವೇ ಚಾಲನೆ!
ಮೈಸೂರು

ರಕ್ತದಾನ ಶಿಬಿರಕ್ಕೆ ರಕ್ತದಾನದ ಮೂಲಕವೇ ಚಾಲನೆ!

February 7, 2021

ಸಂಸದ ಪ್ರತಾಪ್ ಸಿಂಹ ಪತ್ನಿಯವರಿಂದ ಅರ್ಥಪೂರ್ಣ ಉದ್ಘಾಟನೆ

ಮೈಸೂರು,ಫೆ.6(ಪಿಎಂ)- ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಲಯನ್ಸ್ ರಕ್ತನಿಧಿ ಜೀವಧಾರ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ, ರಕ್ತದಾನದ ಮೂಲಕ ಅರ್ಥ ಪೂರ್ಣ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮತ್ತೊಂದು ಜೀವ ಉಳಿಸುವ ಶ್ರೇಷ್ಠದಾನ ರಕ್ತದಾನ. ಮಹಿಳಾ ಸಮುದಾಯ ರಕ್ತ ದಾನ ಮಾಡುವ ಮನೋಭಾವ ಬೆಳೆಸಿ ಕೊಳ್ಳಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದರು.
ಈಗಾಗಲೇ ಕೊರೊನಾ ತೀವ್ರವಾಗಿದ್ದ ಸಂದರ್ಭದಲ್ಲಿ ಪ್ಲಾಸ್ಮಾ ಅವಶ್ಯಕತೆ ಮಹತ್ವ ಅರಿತು ಜೀವಧಾರ ರಕ್ತನಿಧಿ ಕೇಂದ್ರವು ನೂರಾರು ಮಂದಿಯ ಪ್ರಾಣವನ್ನು ಉಳಿ ಸಲು ಶ್ರಮಿಸಿದೆ. ಮೈಸೂರಿನಲ್ಲಿ ಹತ್ತಾರು ರಕ್ತದಾನಿಗಳ ಬಳಗ ಸ್ವಯಂಪ್ರೇರಿತರಾಗಿ ವಾಟ್ಸಾಪ್ ಗ್ರೂಪ್ ರಚಿಸಿ ಸಾಮಾಜಿಕ ಕಳ ಕಳಿಯಿಂದ ಕಷ್ಟದಲ್ಲಿರುವವರಿಗೆ ನೆರವಾಗು ತ್ತಿರುವುದು ಪ್ರಶಂಸನೀಯ ಎಂದರು.

ಇಂದು ಮಹಿಳೆಯರಿಗೆ ಎಲ್ಲಾ ಕ್ಷೇತ್ರ ದಲ್ಲೂ ಸಮಾನತೆ ದೊರೆಯುವಂತಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಮಹಿಳಾ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎಂದರು. 10ಕ್ಕೂ ಹೆಚ್ಚು ಮಂದಿ ಶಿಬಿರ ದಲ್ಲಿ ರಕ್ತದಾನ ಮಾಡಿದರು. ಇದೇ ವೇಳೆ ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ ನೀಡುವಂತೆ ಕೇಂದ್ರದ ವತಿಯಿಂದ 13 ಸಾವಿರ ರೂ. ಅನ್ನು ಅರ್ಪಿತಾ ಸಿಂಹ ಅವರಿಗೆ ನೀಡಲಾಯಿತು. ರಕ್ತನಿಧಿ ಕೇಂದ್ರದ ಅಧ್ಯಕ್ಷ ಗಿರೀಶ್, ನಿರ್ದೇಶಕ ಮುತ್ತಣ್ಣ, ಮುಡಾ ಸದಸ್ಯೆ ಲಕ್ಷ್ಮೀದೇವಿ, ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿ ರೇಣುಕಾ ರಾಜ, ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಜಯಶಂಕರ್, ಬಿಜೆಪಿ ಮುಖಂಡ ಮನೋಜ್ ಮತ್ತಿತರರು ಹಾಜರಿದ್ದರು.

 

Translate »