ಮೈಸೂರು, ಫೆ.21 (ಪಿಎಂ)- ದೇಶದ 400ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಸೂಕ್ಷ್ಮ-ಸಣ್ಣ ಉದ್ಯಮಗಳ ಸಂಘಟನೆ `ಲಘು ಉದ್ಯೋಗ್ ಭಾರತಿ’ಯ ಮೈಸೂರು ವಿಭಾಗ ಭಾನುವಾರ ಅಸ್ತಿತ್ವಕ್ಕೆ ಬಂತು. ಮೈಸೂರಿನ ಹೈವೇ ವೃತ್ತದ ಬಳಿ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು, ಚಾಮರಾಜ ನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ `ಎಲ್‍ಯುಬಿ-ಮೈಸೂರು ವಿಭಾಗ’ವನ್ನು ಸಂಸದ ಪ್ರತಾಪ ಸಿಂಹ ಮತ್ತು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ `ಆತ್ಮನಿರ್ಭರ…
ರಕ್ತದಾನ ಶಿಬಿರಕ್ಕೆ ರಕ್ತದಾನದ ಮೂಲಕವೇ ಚಾಲನೆ!
February 7, 2021ಸಂಸದ ಪ್ರತಾಪ್ ಸಿಂಹ ಪತ್ನಿಯವರಿಂದ ಅರ್ಥಪೂರ್ಣ ಉದ್ಘಾಟನೆ ಮೈಸೂರು,ಫೆ.6(ಪಿಎಂ)- ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಲಯನ್ಸ್ ರಕ್ತನಿಧಿ ಜೀವಧಾರ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ, ರಕ್ತದಾನದ ಮೂಲಕ ಅರ್ಥ ಪೂರ್ಣ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮತ್ತೊಂದು ಜೀವ ಉಳಿಸುವ ಶ್ರೇಷ್ಠದಾನ ರಕ್ತದಾನ. ಮಹಿಳಾ ಸಮುದಾಯ ರಕ್ತ ದಾನ ಮಾಡುವ ಮನೋಭಾವ ಬೆಳೆಸಿ ಕೊಳ್ಳಬೇಕು. ರಕ್ತದಾನ…
ಮೈಸೂರಿಗೆ ಹೊಸ ರೈಲುಗಳು, ಹಲವು ಯೋಜನೆ ಕಲ್ಪಿಸಿದ್ದಕ್ಕೆ ರೈಲ್ವೆ ಸಚಿವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಕೃತಜ್ಞತೆ
March 14, 2020ನವದೆಹಲಿ, ಮಾ.13 – ಮೈಸೂರಿನಿಂದ ವಿವಿಧ ಸ್ಥಳಗಳಿಗೆ ಸಂಪರ್ಕ ಸಾಧಿಸಲು ರೈಲುಗಳ ಸಂಖ್ಯೆ ಹೆಚ್ಚಿಸಿದ್ದಕ್ಕಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ರೈಲ್ವೆ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಗುರುವಾರ ಲೋಕಸಭೆಯಲ್ಲಿ 2020-21ನೇ ಸಾಲಿನ ರೈಲ್ವೆ ಸಚಿವಾಲಯದ ಅನುದಾನದ ಬೇಡಿಕೆಗಳ ಮೇಲಿನ ತಮ್ಮ ಭಾಷಣದಲ್ಲಿ, ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಮತ್ತು ಇತರ ನಗರಗಳಿಗೆ ಸಾಕಷ್ಟು ಸಂಪರ್ಕ ಸಾಧ್ಯವಾಗಿಸಲು ಹಣಕಾಸು ಅನುದಾನ ಕಲ್ಪಿಸಿದ ರೈಲ್ವೆ ಸಚಿವಾ ಲಯಕ್ಕೆ ಧನ್ಯವಾದ ಸಲ್ಲಿಸಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ…
ಇಂದಿರಾ ಗಾಂಧಿ 45 ದಿನ ಜೆಎನ್‍ಯು ಮುಚ್ಚಿಸಿದ್ದ ಕ್ರಮ ಸರಿ ಎಂದು ಕಾಂಗ್ರೆಸ್‍ನವರು ಒಪ್ಪುತ್ತಾರಾ?
January 9, 2020ಮೈಸೂರು,ಜ.8(ಪಿಎಂ)- ಜವಾಹರ ಲಾಲ್ ನೆಹರೂ ವಿವಿಯನ್ನು (ಜೆಎನ್‍ಯು) ಮಾಜಿ ಪ್ರಧಾನಿ ಇಂದಿರಾ ಗಾಂಧಿ 45 ದಿನಗಳ ಕಾಲ ಮುಚ್ಚಿಸಿದ್ದರು. ಇಂದಿರಾ ಅವರ ಈ ಕ್ರಮವನ್ನು ಕಾಂಗ್ರೆಸ್‍ನವರು ಸರಿ ಎಂದು ಒಪ್ಪಿಕೊಳ್ಳುತ್ತಾರಾ? ಇದಕ್ಕೆ ಅವರು ಉತ್ತರ ಕೊಡಲಿ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮೈಸೂರು ವಿವಿ ಓಆರ್‍ಐ ಆವರಣ ದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಜೆಎನ್‍ಯುನಲ್ಲಿ ನಡೆದ ಹಿಂಸಾಚಾರ ಸಂಬಂಧ ಘಟನೆ ನಡೆದ ಕೂಡಲೇ ಕೇಂದ್ರ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಆದರೆ ಪ್ರತಿಭಟನೆ ನೆಪ…
ಮೈಸೂರು-ಕೊಡಗಿನಿಂದ ಪ್ರತಾಪ್ ಸಿಂಹ, ಮಂಡ್ಯದಿಂದ ಸುಮಲತಾ ಅಂಬರೀಶ್, ಚಾ.ನಗರದಿಂದ ಶ್ರೀನಿವಾಸಪ್ರಸಾದ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಜಯಭೇರಿ
May 24, 2019ಮೈಸೂರು: ಮೈಸೂರು-ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಕ್ಷೇತ್ರಗಳ ಪೈಕಿ ಬಿಜೆಪಿ 2 ಸ್ಥಾನಗಳನ್ನು ಪಡೆದಿದ್ದರೆ, ಜೆಡಿಎಸ್ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಮತ್ತೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿನ ನಗೆ ಬೀರಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ಪ್ರತಾಪ್ ಸಿಂಹ ಭಾರೀ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪುನರಾಯ್ಕೆ ಆಗಿದ್ದಾರೆ. ಈ ಕ್ಷೇತ್ರದಲ್ಲಿ ಚಲಾವಣೆ ಯಾದ 13,18,103 ಮತಗಳ ಪೈಕಿ ಪ್ರತಾಪ್ ಸಿಂಹ 6,88,974 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ…
ಪತಿ ಪರ ಅರ್ಪಿತಾ ಪ್ರತಾಪಸಿಂಹ ಪ್ರಚಾರ
April 13, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಬಿಜೆಪಿ ಮುಖಂಡರೊಂದಿಗೆ ಅರ್ಪಿತಾ ಪ್ರತಾಪ್ ಸಿಂಹ ಪ್ರಚಾರ ನಡೆಸಿದರು. ಮೈಸೂರಿನ 23ನೇ ವಾರ್ಡ್ ವ್ಯಾಪ್ತಿಯ ಸುಬ್ಬರಾಯನ ಕೆರೆ ಸೋನಾ ಸ್ಟ್ರೀಟ್‍ನ ಮನೆ ಮನೆಗೆ ತೆರಳಿ ಮತಯಾಚಿಸಿದರು. ಈ ವೇಳೆ ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ಸಂಸದ ಪ್ರತಾಪ್ ಸಿಂಹ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಹಾಗೆಯೇ ಮತ್ತೆ ಮೋದಿಯವರನ್ನು ಪ್ರಧಾನಿಯನ್ನಾಗಿಸಲು ತಪ್ಪದೆ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು. ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಪರಮೇಶ್‍ಗೌಡ,…
ನನ್ನ ಗೆಲುವಿಗೆ ಸಹಕರಿಸಿ: ಪ್ರತಾಪ್ ಸಿಂಹ
April 9, 2019ಮೈಸೂರು: ಕಳೆದ ಬಾರಿ ಯಂತೆ ಈ ಸಲವೂ ಬೆಂಬಲ ನೀಡಿ ನನ್ನ ಗೆಲುವಿಗೆ ಸಹಕರಿಸಿ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ನಾಯಕ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಮುಖಂಡರಿಗೆ ಮನವಿ ಮಾಡಿದ್ದಾರೆ. ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ನೂತನ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಳವಾರ ಮತ್ತು ಉಪ್ಪಾರ ಸಮುದಾಯಗಳನ್ನು ಎಸ್ಟಿಗೆ ಸೇರಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಬಗ್ಗೆ ನಾನು ಸಂಸತ್ತಿನಲ್ಲಿ ಧನಿ ಎತ್ತಿ ಒಪ್ಪಿಗೆ ಸೂಚಿಸಲು ಶ್ರಮಿಸಿದ್ದೇನೆ ಎಂದರು….
ಭ್ರಷ್ಟಾಚಾರಿಗಳಿಗೆ ಮೋದಿ ಭಯ
April 1, 2019ಮಡಿಕೇರಿ: ಮೋದಿಯವರನ್ನು ಮತ್ತೊಮ್ಮೆ ದೇಶದ ಸೇವಕನನ್ನಾಗಿಸಲು ಪ್ರತೀ ಯೋರ್ವರ ಮತ ಕೂಡ ಮುಖ್ಯವಾಗಿದ್ದು, ಮಹಾ ಘಟಬಂಧನ್ ನಾಯಕರು ಈ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವುದೇ ಮೋದಿಯ ನಿಜವಾದ ಶಕ್ತಿಗೆ ನಿದರ್ಶನವಾಗಿದೆ ಎಂದು ಕೇಂದ್ರ ರೇಷ್ಮೆ ಸಚಿವೆ ಸ್ಮ್ರಿತಿ ಇರಾನಿ ಹೇಳಿದ್ದಾರೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲುವಿನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತ ನಾಡಿದ ಸ್ಮ್ರಿತಿ ಇರಾನಿ, ಭ್ರಷ್ಟಾಚಾರದಲ್ಲಿಯೇ ಮುಳುಗೆದ್ದಿರುವ ಕಾಂಗ್ರೆಸ್ ಮುಖಂಡರು ಈಗಾಗಲೇ ಜಾಮೀನು ಪಡೆದುಕೊಂಡು ತಿರು ಗುತ್ತಿದ್ದಾರೆ. ಭ್ರಷ್ಟಾಚಾರಿಗಳಿಗೆ ಮೋದಿ ಅವರ ಭಯ ಕಾಡುತ್ತಿದೆ ಎಂದು ಟೀಕಿಸಿದರು….
ಅಭಿವೃದ್ಧಿ ಮುಂದಿಟ್ಟು ಮತ ಯಾಚನೆ: ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ
March 25, 2019ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಭಿ ವೃದ್ಧಿ ಯೋಜನೆ ಹಾಗೂ ತಾವು ಕ್ಷೇತ್ರ ದಲ್ಲಿ ಮಾಡಿರುವ ಕೆಲಸವನ್ನು ಮುಂದಿಟ್ಟು ಜನರ ಬಳಿ ಮತ ಯಾಚನೆ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿ ಇಂದು ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸುತ್ತೂರು ಶ್ರೀಗಳು ಹಾಗೂ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಗಳಿಂದ ಆಶೀರ್ವಾದ ಪಡೆದು, ನಾಮಪತ್ರ…
ಬಲಿಷ್ಠ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು
February 28, 2019ಮೈಸೂರು: ಬಲಿಷ್ಠ ಭಾರತ ಕಟ್ಟಬೇಕಾ ದರೆ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಮುಂದುವರೆಯಬೇಕು ಎಂದು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟರು. ಜೆಎಲ್‍ಬಿ ರಸ್ತೆಯ ರೋಟರಿ ಐಡಿಯಲ್ ಜಾವಾ ಸಭಾಂಗಣದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕ ಆಯೋಜಿಸಿದ್ದ 23ನೇ ವಾರ್ಡಿನ ಮತದಾರರಿಗೆ ಕೇಂದ್ರ ಸರ್ಕಾರದ `ಆಯುಷ್ಮಾನ್ ಭಾರತ್’ ಕಾರ್ಡ್‍ಗಳನ್ನು ವಿತರಿಸಿ ಅವರು ಮಾತನಾಡಿದರು. ಬಡವರ ಆರೋಗ್ಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು `ಆಯುಷ್ಮಾನ್ ಭಾರತ’ ಬೃಹತ್ ಆರೋಗ್ಯ ಯೋಜನೆ ಯನ್ನು ಜಾರಿಗೊಳಿಸಿದ್ದು, ಇದರ ಉಪಯೋಗವನ್ನು ಮೈಸೂರು ಮತ್ತು…