ಭ್ರಷ್ಟಾಚಾರಿಗಳಿಗೆ ಮೋದಿ ಭಯ
ಕೊಡಗು, ಮೈಸೂರು

ಭ್ರಷ್ಟಾಚಾರಿಗಳಿಗೆ ಮೋದಿ ಭಯ

April 1, 2019

ಮಡಿಕೇರಿ: ಮೋದಿಯವರನ್ನು ಮತ್ತೊಮ್ಮೆ ದೇಶದ ಸೇವಕನನ್ನಾಗಿಸಲು ಪ್ರತೀ ಯೋರ್ವರ ಮತ ಕೂಡ ಮುಖ್ಯವಾಗಿದ್ದು, ಮಹಾ ಘಟಬಂಧನ್ ನಾಯಕರು ಈ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವುದೇ ಮೋದಿಯ ನಿಜವಾದ ಶಕ್ತಿಗೆ ನಿದರ್ಶನವಾಗಿದೆ ಎಂದು ಕೇಂದ್ರ ರೇಷ್ಮೆ ಸಚಿವೆ ಸ್ಮ್ರಿತಿ ಇರಾನಿ ಹೇಳಿದ್ದಾರೆ.

ಕೊಡಗು ಜಿಲ್ಲೆಯ ಗೋಣಿಕೊಪ್ಪಲುವಿನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತ ನಾಡಿದ ಸ್ಮ್ರಿತಿ ಇರಾನಿ, ಭ್ರಷ್ಟಾಚಾರದಲ್ಲಿಯೇ ಮುಳುಗೆದ್ದಿರುವ ಕಾಂಗ್ರೆಸ್ ಮುಖಂಡರು ಈಗಾಗಲೇ ಜಾಮೀನು ಪಡೆದುಕೊಂಡು ತಿರು ಗುತ್ತಿದ್ದಾರೆ. ಭ್ರಷ್ಟಾಚಾರಿಗಳಿಗೆ ಮೋದಿ ಅವರ ಭಯ ಕಾಡುತ್ತಿದೆ ಎಂದು ಟೀಕಿಸಿದರು.

ವಿದೇಶ ಸುತ್ತುತ್ತಿದ್ದವರಿಗೆ ಏಕಾಏಕಿ ಅಯೋಧ್ಯೆ, ಗಂಗಾ ನದಿ ನೆನಪಾಗಬೇಕಾದರೆ ಮೋದಿ ಯವರೇ ಕಾರಣ ಎಂದು ವ್ಯಂಗ್ಯವಾಡಿದ ಸ್ಮ್ರಿತಿ ಇರಾನಿ, ಅಯೋಧ್ಯೆಯ ಶ್ರೀ ರಾಮ ದೇವಾ ಲಯಕ್ಕೆ ತೆರಳಿದ ಸಂದರ್ಭ ತಮ್ಮ ಮತ ಬ್ಯಾಂಕ್ ನೆನಪಾಗಿ ದೇವರ ಮುಂದೆ ತಲೆಬಾಗಲು ತಿಣಕಾಡುತ್ತಿರುವವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

ಸೇನಾ ಪಡೆಯ ಮುಖ್ಯಸ್ಥರನ್ನು ಕಾಂಗ್ರೆಸ್ ಮುಖಂಡರು ಗೂಂಡಾ ಎಂದು ಕರೆಯ ಬಹುದು ಎಂದು ಈ ದೇಶದ ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಭಯೋತ್ಪಾದಕರ ಹೆಣಕ್ಕೆ ಲೆಕ್ಕ ಕೊಡಿ ಎಂದು ಕಾಂಗ್ರೆಸ್ಸಿಗರು ಕೇಳುತ್ತಾರೆ ಎಂದು ಯೋಚಿಸಿರಲಿಲ್ಲ. ಆದರೆ, ಈ ಎಲ್ಲಾ ಹೇಳಿಕೆಗಳ ಮೂಲಕ ಕಾಂಗ್ರೆಸ್ ಮುಖಂಡರ ನೈಜ ಬಣ್ಣ ಬಯಲಾಗಿದೆ ಎಂದು ಸ್ಮ್ರಿತಿ ಇರಾನಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದು ಕೊಂಡರು. ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಇಡೀ ದೇಶ ನ್ಯಾಯಕ್ಕಾಗಿ ಕೋರಿ ದರೂ ಕಾಂಗ್ರೆಸ್ ಮುಖಂಡರು ತೆಪ್ಪಗಿದ್ದರು. ಭಾರತೀಯ ಸೈನ್ಯ ನಮಗೂ ಒಂದು ಅವಕಾಶ ನೀಡಿ, ಪಾಕಿಗಳನ್ನು ಬಗ್ಗುಬಡಿಯುತ್ತೇವೆ ಎಂದು ಕೋರಿದಾಗಲೂ ಅಂದಿನ ಪ್ರಧಾನಿ ಮನ ಮೋಹನ್ ಸಿಂಗ್ ಮೌನ ವಹಿಸಿದ್ದರು. ಸೋನಿಯಾ -ರಾಹುಲ್ ಗಾಂಧಿ ಅನುಮತಿಯನ್ನೇ ನೀಡ ಲಿಲ್ಲ. ಆದರೆ, ಭಾರತೀಯ ಸೈನಿಕರ ತಂಟೆಗೆ ಬಂದ ಭಯೋತ್ಪಾದಕರಿಗೆ ಮೋದಿ ಉರಿ ದಾಳಿ ಮತ್ತು ಬಾಲಕೋಟ್ ದಾಳಿಯ ಮೂಲಕ ಮರೆಯ ಬಾರದ ಪಾಠ ಕಲಿಸಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಜಗಳವೇ ಮುಗಿಯುತ್ತಿಲ್ಲ ಎಂದು ಟೀಕಿ ಸಿದ ಸ್ಮ್ರಿತಿ ಇರಾನಿ, ಭ್ರಷ್ಟ ಕಂಟ್ರಾಕ್ಟರ್‍ಗಳ ಮನೆ ಮೇಲೆ ಐಟಿ ದಾಳಿಯಾದರೆ ಕರ್ನಾಟಕದ ಮುಖ್ಯ ಮಂತ್ರಿ ಗೋಳಿಡುತ್ತಿದ್ದಾರೆ. ಇದೆಂಥಾ ಸರ್ಕಾರ ಎಂದು ಲೇವಡಿ ಮಾಡಿದರು.

ಐದು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಬಗ್ಗೆ ಮಾಹಿತಿ ನೀಡಿದ ಸ್ಮ್ರಿತಿ ಇರಾನಿ, ಬ್ಯಾಂಕ್‍ನಲ್ಲಿ ಖಾತೆಯೇ ಇಲ್ಲದಿದ್ದ ಭಾರತೀಯರಿಗೆ ಬ್ಯಾಂಕ್ ಖಾತೆ ತೆರೆಯಲು ಮೋದಿ ಕಾರಣರಾಗಿದ್ದು, ಜನ್ ಧನ್ ಯೋಜನೆಯಡಿ 30 ಕೋಟಿ ನಾಗರಿಕರಿಗೆ ಮೊದಲ ಬಾರಿಗೆ ಬ್ಯಾಂಕ್ ಖಾತೆ ದೊರಕಿದೆ. ಕರ್ನಾಟಕದಲ್ಲಿ 1.74 ಕೋಟಿ ಗ್ರಾಹಕರು ಮೊದಲ ಬಾರಿಗೆ ಬ್ಯಾಂಕ್ ಖಾತೆ ತೆರೆಯುವಂತಾಗಿದೆ. 8 ಕೋಟಿ ನಕಲಿ ಖಾತೆಗಳ ಮೂಲಕ ಸರ್ಕಾರದ ಆರ್ಥಿಕ ನೆರವು ಪಡೆಯುತ್ತಿದ್ದ ಖದೀಮರ ಖಾತೆಗಳನ್ನು ಮೋದಿ ಸರ್ಕಾರ ಮುಟ್ಟುಗೋಲು ಹಾಕಿದೆ ಎಂದು ಹೇಳಿದರು.

5 ವರ್ಷಗಳ ಹಿಂದಿನವರೆಗೂ ಭಾರತವನ್ನು ಆಳಿದ ಒಂದೇ ಕುಟುಂಬದ ರಾಜ ಕಾರಣಿಗಳು ಭಾರತದ ಪ್ರಗತಿಯೊಂದಿಗೆ ಬಡ ಭಾರತೀಯರನ್ನೂ ನಿರ್ಲಕ್ಷಿಸಿದ್ದರು. ಆದರೆ, 5 ವರ್ಷಗಳ ಹಿಂದೆ ಓರ್ವ ಚಹಾವಾಲನಿಗೆ ದೇಶದ ಅಧಿಕಾರ ನೀಡುವ ಮೂಲಕ ದೇಶದ ಪ್ರಗತಿಯ ಹರಿಕಾರರಾದರು ಎಂದೂ ಸ್ಮ್ರಿತಿ ಇರಾನಿ ಸ್ಮರಿಸಿದರು. ಈ ಚುನಾವಣೆ ಕೇವಲ ಮೋದಿಯವರ ಚುನಾವಣೆಯಲ್ಲ. ಇದು ಪ್ರತಿಯೋರ್ವ ಭಾರತೀಯರ ಗೌರವ, ಸಮ್ಮಾನದ ಚುನಾವಣೆ. ಪ್ರತೀ ಮಹಿಳೆಯರಿಗೆ ಗೌರವ ತರಬೇಕಾದ ಚುನಾವಣೆಯಾಗಿದೆ ಎಂದೂ ಸ್ಮ್ರಿತಿ ಇರಾನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ ಮತ್ತೊಮ್ಮೆ ಈ ಚುನಾವಣೆ ಮೂಲಕ ಕಾಮ್ ಧಾರ್‍ಗಳು ಗೆಲ್ಲಬೇಕು. ನಾಮ್‍ಧಾರ್‍ಗಳು ಸೋಲುವಂತಾಗಬೇಕು ಎಂದೂ ಅವರು ಆಶಿಸಿದರು.

ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರನ್ನು ಶ್ಲಾಘಿಸಿದ ಸ್ಮ್ರಿತಿ ಇರಾನಿ, ಪ್ರತಾಪ್ ಈ ಚುನಾವಣೆಯಲ್ಲಿ ಪ್ರತಾಪ ತೋರುತ್ತಾರೆ ಎಂದು ಹಾರೈಸಿದರು. ಕೊಡಗಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ರಂಥ ವೀರಸೇನಾನಿಗಳು ಆದರ್ಶಪ್ರಾಯರಾಗಿದ್ದು, ಇಂಥವರ ನಾಡಿನಲ್ಲಿ ಮತದಾರರ ಮುಂದೆ ಮಾತನಾಡಲು ಹೆಮ್ಮೆಯಾಗುತ್ತಿದೆ ಎಂದೂ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಹ್ಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ವಿರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ಕೊಡಗು ಮಹಿಳಾ ಬಿಜೆಪಿ ಅಧ್ಯಕ್ಷ ಜಮುನಾ ಚಂಗಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಬಿಜೆಪಿ ಉಸ್ತುವಾರಿ ಫಣೀಂದ್ರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಶಾಲಪ್ಪ, ಸುಜಾ ಕುಶಾಲಪ್ಪ ಹಾಜರಿದ್ದರು. ಕೇಂದ್ರ ಸಚಿವೆ ಸ್ಮ್ರಿತಿ ಇರಾನಿ 1.30 ಗಂಟೆ ತಡವಾಗಿ ಹೆಲಿಕಾಪ್ಟರ್‍ನಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‍ಗೆ ಬಂದಿಳಿದರು. ಈ ಸಂದರ್ಭ ಹಲವು ಬಿಜೆಪಿ ಪ್ರಮುಖರು ಸ್ಮ್ರಿತಿ ಇರಾನಿ ಅವರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.

Translate »