ಮದುವೆ ಊಟ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಮೈಸೂರು

ಮದುವೆ ಊಟ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

April 1, 2019

ಕೆ.ಆರ್.ನಗರ: ಮದುವೆ ಊಟ ಸೇವಿಸಿ ಮಹಿಳೆಯರು, ಮಕ್ಕಳು ಸೇರಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಭೇರ್ಯದಲ್ಲಿ ಇಂದು ನಡೆದಿದೆ. ಭೇರ್ಯದ ಎಎಲ್‍ಎಲ್ ಕಲ್ಯಾಣ ಮಂಟಪದಲ್ಲಿ ಭೇರ್ಯದ ವಧು ಸವಿತಾ, ಹಾಡಿ ಮೇರಲೂರಿನ ವರ ಪ್ರೇಮ್‍ಕುಮಾರ್ ಅವರ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಆಗಮಿಸಿ ವಧು-ವರರನ್ನು ಹರಸಿ ಮಧ್ಯಾಹ್ನದ ಭೂರಿ ಭೋಜನ ಸವಿದು ಹೋದ ಸಂಬಂಧಿಕರು, ಸ್ಥಳೀಯರು ಮನೆ ತಲುಪುವಷ್ಟರಲ್ಲೇ ವಾಂತಿ, ಭೇದಿ, ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದಾರೆ.

ಮಕ್ಕಳು ಮತ್ತು ಮಹಿಳಾ ಆಸ್ಪತ್ರೆಯಲ್ಲಿ ಯೋಗೀಶ(6), ಇಂದು(2), ಪ್ರಶಾಂತ್(3), ಸ್ಪಂದÀನ(7), ಸಾಗರ್(12),
ಮೋಹಿತ್(2), ರವೀಶ್(16), ರಚನಾ(3), ರುಚಿತಾ(3), ಋತುಶ್ರೀ(6), ಸ್ಮಿತಾ(14), ಸೃಜನಾ(4), ತನುಶ್ರೀ(2), ಪೂಜಾ(2), ಧÀನುಷ್(2), ಪಾವನಿ(2), ಅಮೃತ(4), ಸೃಷ್ಟಿ(3), ಧ್ರುವ(3), ಪವಿತ್ರ(2), ಮಾನ್ಯ(13), ನಿಶಾಂತ್(8)ರನ್ನು ಚಿಕಿತ್ಸೆಗೆ ದಾಖಲಿ ಸಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರುಕ್ಮಿಣಿ(30), ದೇವೀರಮ್ಮ(61), ಪ್ರಕಾಶ್ (68), ಗೌರಮ್ಮ(60), ಚೇತನ್((17), ಗೌತಮ್(17), ಬಸವರಾಜು(36), ಸುಪ್ರಿತ್ (17), ಶಿವಣ್ಣ(29), ಮಹದೇವು(45), ಜವರಣ್ಣ(60), ಅಶ್ವಿನಿ(18), ಗೌರಮ್ಮ(16), ದಿವ್ಯಾ (14), ಸೋಮ(28), ಪಾರ್ವತಿ(18), ಮಂಜುಳಾ(36), ಪದ್ಮ(35), ಸಿದ್ದಯ್ಯ(68) ಚಿಕಿತ್ಸೆ ಪಡೆಯುತ್ತಿದ್ದಾರೆ. ಭೇರ್ಯ, ಪಿರಿಯಾಪಟ್ಟಣದ ಕೆಲವರು ಸಹ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಕಾರ್ಯಪ್ರವೃತ್ತರಾದ ಟಿಹೆಚ್‍ಓ ಡಾ.ಮಹೇಂದ್ರಪ್ಪ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಿವಪ್ರಸಾದ್ ತುರ್ತಾಗಿ ಕ್ರಮ ಕೈಗೊಂಡು, ಚಿಕಿತ್ಸೆ ಆರಂಭಿಸಿದರು. ಕರ್ತವ್ಯ ಮುಗಿಸಿ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡು ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಆಹಾರ ವ್ಯತ್ಯಾಸದಿಂದಾಗಿ ಘಟನೆ ಸಂಭವಿಸಿದ್ದು, ಆತಂಕ ಪಡುವ ಅಗತ್ಯ ಇಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಟಿಹೆಚ್‍ಓ ಡಾ.ಮಹೇಂದ್ರಪ್ಪ ಖಚಿತಪಡಿಸಿದ್ದಾರೆ. ವಿಷಯ ತಿಳಿದು ಡಿಹೆಚ್‍ಓ ವೆಂಕಟೇಶ್ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೆ, ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಅಲ್ಲದೆ ಸಚಿವ ಸಾರಾ ಮಹೇಶ್ ಅವರ ಆಪ್ತ ಕಾರ್ಯದರ್ಶಿ ಅರುಣ್ ಸಹ ಭೇಟಿ ಮಾಹಿತಿ ಪಡೆದರು.

Translate »