ಮಂಡ್ಯದಲ್ಲಿ ನ್ಯಾಯ ಸಮ್ಮತ, ಮುಕ್ತ ಚುನಾವಣೆ ಅನುಮಾನ: ಸುಮಲತಾ
ಮಂಡ್ಯ, ಮೈಸೂರು

ಮಂಡ್ಯದಲ್ಲಿ ನ್ಯಾಯ ಸಮ್ಮತ, ಮುಕ್ತ ಚುನಾವಣೆ ಅನುಮಾನ: ಸುಮಲತಾ

April 1, 2019

ಮಂಡ್ಯ: ನಾನು ಕಣಕ್ಕಿಳಿದ ಮೊದಲ ದಿನದಿಂದಲೂ ನನಗೆ ಅನ್ಯಾಯವಾಗು ತ್ತಲೇ ಇದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವೇ ಆಗುತ್ತಿಲ್ಲ. ನನಗೆ ನ್ಯಾಯ ಸಿಗುತ್ತಲೇ ಇಲ್ಲ. ಈ ಚುನಾವಣೆ ನ್ಯಾಯಸಮ್ಮತ ಹಾಗೂ ಮುಕ್ತ ರೀತಿಯಲ್ಲಿ ನಡೆಯುವುದೇ ಅನುಮಾನ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದರು.

ನಗರದಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಚುನಾವಣೆ ನಡೆಸಲು ಇದೆಯೋ ಅಥವಾ ಮುಖ್ಯಮಂತ್ರಿಗಳ ಮಗನನ್ನು ಗೆಲ್ಲಿಸಲು ಇದೆಯೋ ಎಂಬುದು ಗೊತ್ತಾಗುತ್ತಿಲ್ಲ? ಮಂಡ್ಯ ಜಿಲ್ಲಾಧಿಕಾರಿ ಕಚೇರಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರೇ ನಿರ್ವಹಿಸುತ್ತಿದ್ದಾರೆ ಎನ್ನುವುದಕ್ಕೆ ಹಲವು ನಿದರ್ಶನಗಳು ಸಾರ್ವಜನಿಕವಾಗಿಯೇ ಗೋಚರಿಸುತ್ತಿವೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರಿಗೆ ಒತ್ತಡ ಏನಾದರೂ ಇದ್ದರೆ ಅಥವಾ ಚುನಾವಣಾ ಪ್ರಕ್ರಿಯೆ ಯನ್ನು ಸರಿಯಾಗಿ ನಿಭಾಯಿಸಲು ಆಗದೇ ಇದ್ದಲ್ಲಿ ಸ್ವತಃ ಅವರೇ ಗೌರವಯುತವಾಗಿ ನಿರ್ಗಮಿಸಲಿ. ಸಮರ್ಥರು ಆ ಜಾಗಕ್ಕೆ ಬರಲು ಅನುವು ಮಾಡಿಕೊಡುವುದು ಸೂಕ್ತ ಎಂದು ಹೇಳಿದರು. ನಾನು ನಾಮಪತ್ರ ಸಲ್ಲಿಸಿದ ದಿನದಿಂದ ಹಿಡಿದು ಇಲ್ಲಿಯವರೆವಿಗೂ ನನಗೆ ಆಯೋಗದಿಂದ ನ್ಯಾಯ ಸಿಗುತ್ತಿಲ್ಲ. ನಾಮಪತ್ರ ಸಲ್ಲಿಕೆ ದಿನ ವಿದ್ಯುತ್ ಪೂರೈಕೆ ಮತ್ತು ಕೇಬಲ್ ಟಿವಿ ಪ್ರಸಾರ ಸ್ಥಗಿತಗೊಳಿಸಿದರು. ಆದರೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾ.25 ರಂದು ನಾಮಪತ್ರ ಸಲ್ಲಿಸುವ ದಿನ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರೇ ಸೆಸ್ಕ್ ಅಧಿಕಾರಿಗಳಿಗೆ ಪತ್ರ ಬರೆದು ವಿದ್ಯುತ್ ಸರಬರಾಜು ಸ್ಥಗಿತಗೊಳಿಸದಂತೆ ಸೂಚಿಸಿದ್ದರು. ಇದು ಆಡಳಿತ ಯಂತ್ರದ ದುರುಪಯೋಗವಲ್ಲವೇ? ಎಂದು ಪ್ರಶ್ನಿಸಿದರು.

ಈ ಎಲ್ಲಾ ಘಟನಾವಳಿಗಳ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ಮಾಹಿತಿ ತಿಳಿಸಿz್ದÉೀವೆ. ಮಾಹಿತಿ ಸಂಗ್ರಹಿಸಿದ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರು ಸೆಸ್ಕ್ ಅಧಿಕಾರಿಗಳಿಗೆ ಪತ್ರ ಬರೆದು ವಿದ್ಯುತ್ ಸ್ಥಗಿತಗೊಳಿ ಸದಂತೆ ಸೂಚಿಸಿರುವುದು ತಪ್ಪು. ಇದು ಸಹ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸುವುದಾಗಿ ಹೇಳಿ ದ್ದಾರೆ ಎಂದು ಸುಮಲತಾ ವಿವರಿಸಿದರು.

ಮೈತ್ರಿ ಅಭ್ಯರ್ಥಿ ನಿಖಿಲ್ ಅವರ ಅಫಿಡವಿಟ್‍ನಲ್ಲಿದ್ದ ದೋಷಗಳನ್ನು ಜಿಲ್ಲಾಧಿಕಾರಿಗಳೇ ಮರೆಮಾಚಿದ್ದಾರೆ. ಬಿಗಿಭದ್ರತೆ ಮಧ್ಯೆ ಚುನಾವಣಾ ಪ್ರಕ್ರಿಯೆ ನಡೆಯುತ್ತದೆ. ಜಿಲ್ಲೆಯ ಯಾವುದೇ ಮೂಲೆಯಲ್ಲಿ ನಾವು ಪ್ರಚಾರ ಮಾಡಿ ದರೂ ಚುನಾವಣಾಧಿಕಾರಿಗಳು ಪ್ರತಿಯೊಂದನ್ನು ವಿಡಿಯೋ ಮಾಡಿಸುತ್ತಾರೆ. ಆದರೆ, ಡಿಸಿ ಕಚೇರಿಯಲ್ಲಿ ನಾಮಪತ್ರ ಪರಿಶೀಲನೆ ಸಂದÀರ್ಭದ ವಿಡಿಯೋವನ್ನು ಮಾತ್ರ ನಮಗೆ ಸಕಾಲಕ್ಕೆ ನೀಡದೆ ಸತಾಯಿಸುತ್ತಾರೆ. ಕ್ಯಾಮೆರಾವನ್ನು ಮದುವೆ ವಿಡಿಯೋ ಚಿತ್ರೀಕರಣಕ್ಕೆ ಕಳುಹಿಸಲಾಗಿದೆ ಎಂದು ಸಬೂಬು ಹೇಳುತ್ತಾರೆ. ಇದು ಎಷ್ಟು ಸರಿ? ಬಹಳ ಒತ್ತಾಯ ಪಡಿಸಿದಾಗ ಕೊನೆಗೆ ನಾಮಪತ್ರ ಪರಿಶೀಲನೆ ವೇಳೆಯÀ ಪೂರ್ಣ ದೃಶ್ಯಾವಳಿ ನೀಡದೆ ಅರೆಬರೆ ವಿಡಿಯೋ ನೀಡಿದ್ದಾರೆ. ನಿಖಿಲ್ ನಾಮಪತ್ರ ಪರಿಶೀಲನೆ ಸಂದÀರ್ಭ ನಾವು ಆಕ್ಷೇಪ ಸಲ್ಲಿಸಿದ ಸಮಯದ ವಿಡಿಯೋವನ್ನು ಕಟ್ ಮಾಡಿ ಕೊಡಲಾಗಿದೆ. ಕಾರಣ ಕೇಳಿದರೆ, `ವಿಡಿಯೋಗ್ರಾಫರ್ ವಿಡಿಯೊ ತಿರುಚಿದ್ದಾನೆ. ಅದಕ್ಕಾಗಿ ಆತನ ಮೇಲೆ ಪ್ರಕರಣ ದಾಖಲಿಸುತ್ತೇವೆ’ ಎಂದು ವಿಡಿಯೋಗ್ರಾಫರ್ ಮೇಲೆ ಹೊಣೆ ಹಾಕಿ ನುಣುಚಿಕೊಳ್ಳಲು ಚುನಾವಣಾಧಿಕಾರಿ ಹೊರಟಿದ್ದಾರೆ. ಪ್ರಜಾಪ್ರಭುತ್ವದ ಅತಿ ಮುಖ್ಯ ಪ್ರಕ್ರಿಯೆಯನ್ನು ಚಿತ್ರೀಕರಿಸಿರುವ ಕ್ಯಾಮೆರಾ ಚುನಾವಣೆ ಆಯೋಗದ ವಶದಲ್ಲಿರಬೇಕು. ಅದನ್ನು ಯಾರದ್ದೊ ಮದುವೆ ಚಿತ್ರೀಕರಣ ಮಾಡಲು ಕಳುಹಿಸಿದ್ದೇವೆ ಎಂದು ಉಡಾಫೆ ಉತ್ತರ ನೀಡುವ ಜಿಲ್ಲಾಧಿಕಾರಿ, ಮಂಡ್ಯ ಲೋಕಸಭಾ ಕ್ಷೇತ್ರದ 2047 ಬೂತ್‍ಗಳ ಇವಿಎಂ ಬಗೆಗೂ ಇಂತಹುದೇ ಮಾತುಗಳನ್ನಾ ಡಿದರೂ ಅಶ್ಚರ್ಯವಿಲ್ಲ ಎಂದು ಅವರು ಅಸಮಾಧನ ವ್ಯಕ್ತಪಡಿಸಿದರು.

ಜೆಡಿಎಸ್ ಅಭ್ಯರ್ಥಿ ನಿಖಿಲ್ ಕ್ರಮಸಂಖ್ಯೆಯನ್ನು ಆಯೋಗ ಅಧಿಕೃತವಾಗಿ ಪ್ರಕಟಿಸುವ ಮುನ್ನವೇ ಸಿಎಂ ಕುಮಾರಸ್ವಾಮಿ ಘೋಷಿಸಿದರು. ಇದು ಹೇಗೆ ಅವರಿಗೆ ಗೊತ್ತಾ ಯಿತು? ಎಲ್ಲವೂ ತಂತ್ರದ ಭಾಗದಂತೆಯೇ ನಡೆಯುತ್ತಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಆರೋಪಿಸಿದರು. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ? ನನಗೆ 20ನೇ ಕ್ರಮ ಸಂಖ್ಯೆ ನೀಡಿದ್ದಾರೆ. ನನ್ನ ಹೆಸರಿನ ಹಿಂದೆ-ಮುಂದೆ ಸುಮಲತಾ ಹೆಸರಿನ 3 ಅಭ್ಯರ್ಥಿಗಳ ಹೆಸರು ಹಾಕಲಾಗಿದೆ. ಮತದಾರರಲ್ಲಿ ಗೊಂದಲ ಮೂಡಿಸಲೆಂದೇ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2047 ಮತಗಟ್ಟೆಗಳಿದ್ದು, ಎಲ್ಲ ಮತಗಟ್ಟೆಗೂ ಚುನಾವಣಾ ಆಯೋಗ ಬಿಗಿ ಭದ್ರತೆ ಒದಗಿಸಬೇಕು. ಮಂಡ್ಯ ಲೋಕಸಭಾ ಕ್ಷೇತ್ರವನ್ನು `ಅತೀ ಸೂಕ್ಷ್ಮ’ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ ಅವರು, ಈವರೆಗೆ ನಮಗೆ ಆಗಿರುವ ಎಲ್ಲಾ ಅನ್ಯಾಯ ಗಳ ಸಂಬಂಧ ನ್ಯಾಯಾಲಯದ ಮೊರೆ ಹೋಗುತ್ತೇವೆ. ಸದ್ಯಕ್ಕೆ ಚುನಾವಣೆಯ ಮುಂದಿನ ಹೋರಾಟದ ಕ್ರಮಗಳತ್ತ ಗಮನ ಹರಿಸುತ್ತೇವೆ ಎಂದು ಅವರು ಹೇಳಿದರು. ಚುನಾವಣಾ ಏಜೆಂಟ್ ಮದನ್ ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »