ಪ್ರಾದೇಶಿಕ ಆಯುಕ್ತರಿಂದ ಡಿಸಿ ಕಚೇರಿಯಲ್ಲಿ ವಿಚಾರಣೆ
ಮಂಡ್ಯ, ಮೈಸೂರು

ಪ್ರಾದೇಶಿಕ ಆಯುಕ್ತರಿಂದ ಡಿಸಿ ಕಚೇರಿಯಲ್ಲಿ ವಿಚಾರಣೆ

April 1, 2019

ಪ್ರಾದೇಶಿಕ ಆಯುಕ್ತರಿಂದ ಡಿಸಿ ಕಚೇರಿಯಲ್ಲಿ ವಿಚಾರಣೆ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿನ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರವಾಗಿ ದೂರು ದಾಖಲಾಗಿದ್ದರಿಂದ ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮೈಸೂರು ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್‍ಕುಮಾರ್ ಅವರು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಭಾನುವಾರ ವಿಚಾರಣೆ ನಡೆಸಿದರು. ಪಕ್ಷೇತರ ಅಭ್ಯರ್ಥಿ ಎ.ಸುಮಲತಾ (ಅಂಬರೀಶ್ ಪತ್ನಿ) ಅವರ ಚುನಾವಣಾ ಏಜೆಂಟ್ ಮದನ್‍ಕುಮಾರ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಶನಿವಾರ ಮಂಡ್ಯ ಚುನಾವಣಾ ಶಾಖೆಗೆ ಭೇಟಿ ನೀಡಿ ಸಭೆ ನಡೆಸಿದ ರಾಜ್ಯದ ಮುಖ್ಯ ಚುನಾವಣಾ ಧಿಕಾರಿ ಸಂಜೀವ್ ಕುಮಾರ್ ಅವರಿಗೂ ಇದೇ ವಿಚಾರವಾಗಿ ದೂರು ಸಲ್ಲಿಸಿದ್ದರು.

3 ಗಂಟೆ ವಿಚಾರಣೆ: ಭಾನುವಾರ ಬೆಳಿಗ್ಗೆ ನಗರಕ್ಕೆ ಆಗಮಿಸಿದ ಮೈಸೂರು ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್ ಕುಮಾರ್, ಜಿಲ್ಲಾಧಿಕಾರಿ ಕಚೇರಿಯಲ್ಲೇ 3 ಗಂಟೆಗಳ ಕಾಲ ಸುಮಲತಾ ಪರ ಚುನಾವಣಾ ಏಜೆಂಟ್ ಮದನ್ ಅವರ ವಿಚಾರಣೆ ನಡೆಸಿದರು. ನಾಮಪತ್ರದ ಲೋಪ ಕುರಿತಂತೆ ಮದನ್ ಅವರಿಂದ ಸಾಕ್ಷಿ ಸಹಿತ ಹಲವು ಮಾಹಿತಿ ಪಡೆದುಕೊಂಡರು. ಅಲ್ಲದೆ ಚುನಾವಣೆಗೆ ನಿಯೋ ಜನೆಗೊಂಡಿರುವ ಅಧಿಕಾರಿಗಳಿಂದಲೂ ಮಾಹಿತಿ ಸಂಗ್ರಹಿಸಿದರು.

ಮಾಧ್ಯಮಗಳಿಗೆ ನಿರ್ಬಂಧ: ಪ್ರಾದೇಶಿಕ ಆಯುಕ್ತರ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿತ್ತು. ವಿಚಾರಣೆ ಮುಗಿಸಿ ಹೊರಬಂದ ಸುಮಲತಾ ಚುನಾವಣಾ ಏಜೆಂಟ್ ಮದನ್‍ಕುಮಾರ್ ಪ್ರಾದೇಶಿಕ ಆಯುಕ್ತರು ಸತತ 3 ಗಂಟೆಗಳ ಕಾಲ ನನ್ನ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಅವರ ನಡವಳಿಕೆ ವಿಚಾರ, ನಾಮಪತ್ರ ಲೋಪದ ಬಗ್ಗೆ ಸಾಕ್ಷ್ಯ ಸಮೇತ ಉತ್ತರ ನೀಡಿದ್ದೇನೆ. ಈ ಬಗ್ಗೆ ದೆಹಲಿಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ವರದಿ ನೀಡುವುದಾಗಿ

ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ. ನಮ್ಮ ದೂರಿನ ಮೇರೆಗೆ ಮಂಡ್ಯ ಡಿಸಿ ಮಂಜುಶ್ರೀ ಅವರನ್ನೂ ಪ್ರಾದೇಶಿಕ ಆಯುಕ್ತರು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಕಾದು ನೋಡುತ್ತೇವೆ. ನಮ್ಮ ಪರ ವರದಿ ನೀಡುವ ವಿಶ್ವಾಸವಿದೆ. ನ್ಯಾಯ ಸಿಗಲಿಲ್ಲ ಎಂದಾಗ ಕಾನೂನು ಕ್ರಮದ ಮೊರೆ ಹೋಗಲು ಚಿಂತನೆ ಇದೆ. ಸದ್ಯಕ್ಕೆ ಪ್ರಾದೇಶಿಕ ಆಯುಕ್ತರ ಬಳಿಯೇ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದರು.

Translate »