ಸುಮಲತಾ ವಾಹನ ಒಂದೇ ದಿನದಲ್ಲಿ 4 ಬಾರಿ ತಪಾಸಣೆ
ಮಂಡ್ಯ, ಮೈಸೂರು

ಸುಮಲತಾ ವಾಹನ ಒಂದೇ ದಿನದಲ್ಲಿ 4 ಬಾರಿ ತಪಾಸಣೆ

April 1, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಾಹನ ವನ್ನು ಪ್ರಚಾರದ ವೇಳೆ ಚುನಾವಣಾ ಧಿಕಾರಿಗಳು ಪದೇ ಪದೆ ತಪಾಸಣೆ ನಡೆಸಿದ ಘಟನೆ ಮೇಲುಕೋಟೆ ಕ್ಷೇತ್ರದ ಬಳಿ ಭಾನುವಾರ ನಡೆದಿದೆ. ಮೇಲು ಕೋಟೆ ಕ್ಷೇತ್ರದ ದುದ್ದ, ಶಿವಳ್ಳಿ, ಬೇವು ಕಲ್ಲು ಸೇರಿದಂತೆ ಮೇಲುಕೋಟೆ ಮಾರ್ಗದ ವಿವಿಧ ಗ್ರಾಮಗಳಲ್ಲಿ ಇಂದು ಪ್ರಚಾರ ನಡೆಸುತ್ತಿದ್ದ ಸುಮಲತಾ ಅವ ರಿದ್ದ ವಾಹನವನ್ನು ಒಂದೇ ದಿನ 4 ಬಾರಿ ತಪಾಸಣೆ ನಡೆಸಿದರು ಎನ್ನಲಾ ಗಿದೆ. ಪಾಂಡವಪುರ ಉಪ ವಿಭಾಗಾ ಧಿಕಾರಿ ಶೈಲಜಾ ನೇತೃತ್ವದ ಅಧಿಕಾರಿ ಗಳ ತಂಡ ಸುಮಲತಾ ಅವರಿದ್ದ ವಾಹನ ವನ್ನು 4 ಬಾರಿ ತಡೆದು ಲೈಸನ್ಸ್ ಪರಿಶೀಲಿ ಸಿದರು, ಕಾರಿನಲ್ಲಿದ್ದ ವಸ್ತುಗಳನ್ನು ಪರಿ ಶೀಲಿಸಿದರು ಎಂದು ತಿಳಿದುಬಂದಿದೆ.

ಬೆಂಬಲಿಗರ ಆಕ್ರೋಶ: ಸುಮಲತಾ ಅವರ ವಾಹನವನ್ನು ಉದ್ದೇಶಪೂರ್ವಕ ವಾಗಿಯೇ ಪದೇ ಪದೆ ತಪಾಸಣೆ ಮಾಡಲಾಗುತ್ತಿದೆ. ಪ್ರಚಾರದ ವೇಳೆ ಸುಮಲತಾಗೆ ಟಾರ್ಚರ್ ನೀಡುವುದು ಅಧಿಕಾರಿಗಳ ಉದ್ದೇಶವಾಗಿದೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

Translate »