Tag: K.R. Hospital

ಕೆ.ಆರ್.ಆಸ್ಪತ್ರೆ ಹಾಗೂ ಕ್ವಾರಂಟೇನ್ ಮನೆಗಳ ಸುತ್ತ ಪೆರಾಕ್ಸೈಡ್ , ಸಿಲ್ವರ್ ನೈಟ್ರೇಟ್ ದ್ರಾವಣ ಸಿಂಪಡಣೆ
ಮೈಸೂರು

ಕೆ.ಆರ್.ಆಸ್ಪತ್ರೆ ಹಾಗೂ ಕ್ವಾರಂಟೇನ್ ಮನೆಗಳ ಸುತ್ತ ಪೆರಾಕ್ಸೈಡ್ , ಸಿಲ್ವರ್ ನೈಟ್ರೇಟ್ ದ್ರಾವಣ ಸಿಂಪಡಣೆ

March 29, 2020

ಸೋಂಕಿತರು ಓಡಾಡಿರುವ ಸ್ಥಳಗಳಲ್ಲಿ ವೈರಾಣು ನಾಶಕ್ಕೆ ಕ್ರಮ ಹೋಮ್ ಕ್ವಾರಂಟೇನ್ ಇರುವ ಮನೆಗಳು, ಸರ್ಕಾರಿ ಕಚೇರಿ ಸಮುಚ್ಚಯಕ್ಕೂ ಸಿಂಪಡಣೆ ಮೈಸೂರು,ಮಾ.29(MTY)- ನೊವೆಲ್ ಕೊರೊನಾ ವೈರಸ್ ಮೈಸೂರಿನಲ್ಲಿ ಮೂರನೇ ಹಂತಕ್ಕೆ ವ್ಯಾಪಿಸಿದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಕೆ.ಆರ್.ಆಸ್ಪತ್ರೆ, ಸರ್ಕಾರಿ ಕಚೇರಿ ಹಾಗೂ ವಿವಿಧ ಬಡಾವಣೆಗಳಲಿರುವ ಹೋಮ್ ಕ್ವಾರಂಟೇನ್ ಮನೆಗಳಿಗೆ ವೈರಾಣು ನಾಶ ಮಾಡುವ ಜಲಜನಕದ ಪೆರಾಕ್ಸೈಡ್ ಹಾಗೂ ಸಿಲ್ವರ್ ನೈಟ್ರೇಟ್ ದ್ರಾವಣ ಸಿಂಪಡಿಸು ಕಾರ್ಯಾಚರಣೆ ಆರಂಭಿಸಿದೆ. ಕಳೆದ ಎರಡು ದಿನದಿಂದ ಮೈಸೂರು ನಗರ ಪಾಲಿಕೆಯ ಎಲ್ಲಾ 65 ವಾರ್ಡ್…

ಮದುವೆ ಊಟ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಮೈಸೂರು

ಮದುವೆ ಊಟ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

April 1, 2019

ಕೆ.ಆರ್.ನಗರ: ಮದುವೆ ಊಟ ಸೇವಿಸಿ ಮಹಿಳೆಯರು, ಮಕ್ಕಳು ಸೇರಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಭೇರ್ಯದಲ್ಲಿ ಇಂದು ನಡೆದಿದೆ. ಭೇರ್ಯದ ಎಎಲ್‍ಎಲ್ ಕಲ್ಯಾಣ ಮಂಟಪದಲ್ಲಿ ಭೇರ್ಯದ ವಧು ಸವಿತಾ, ಹಾಡಿ ಮೇರಲೂರಿನ ವರ ಪ್ರೇಮ್‍ಕುಮಾರ್ ಅವರ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಆಗಮಿಸಿ ವಧು-ವರರನ್ನು ಹರಸಿ ಮಧ್ಯಾಹ್ನದ ಭೂರಿ ಭೋಜನ ಸವಿದು ಹೋದ ಸಂಬಂಧಿಕರು, ಸ್ಥಳೀಯರು ಮನೆ ತಲುಪುವಷ್ಟರಲ್ಲೇ ವಾಂತಿ, ಭೇದಿ, ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದಾರೆ. ಮಕ್ಕಳು ಮತ್ತು ಮಹಿಳಾ ಆಸ್ಪತ್ರೆಯಲ್ಲಿ ಯೋಗೀಶ(6), ಇಂದು(2),…

ಡಾ.ನಂಜುಂಡಸ್ವಾಮಿ ಕೆಆರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ
ಮೈಸೂರು

ಡಾ.ನಂಜುಂಡಸ್ವಾಮಿ ಕೆಆರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ

April 1, 2019

ಮೈಸೂರು: ಮೈಸೂರಿನ ಕೆಆರ್ ಆಸ್ಪತ್ರೆ ಪ್ರಭಾರ ವೈದ್ಯಕೀಯ ಅಧೀಕ್ಷಕರಾಗಿ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ.ಎಂ. ನಂಜುಂಡಸ್ವಾಮಿ ಅವರನ್ನು ಸರ್ಕಾರ ನಿಯೋಜಿಸಿದೆ. ಆಸ್ಪತ್ರೆಯ ವೈದ್ಯಕೀಯ ಅಧೀ ಕ್ಷಕ ಡಾ.ಎಂ.ಶ್ರೀನಿವಾಸ್ ಅವರು ಶನಿವಾರ ಸೇವೆಯಿಂದ ನಿವೃತ್ತಿ ಹೊಂದಿರುವುದರಿಂದ ತೆರವಾದ ಸ್ಥಾನಕ್ಕೆ ಡಾ.ನಂಜುಂಡಸ್ವಾಮಿ ಅವರನ್ನು ಪ್ರಭಾರ ಹುದ್ದೆಗೆ ನಿಯೋ ಜನೆ ಮಾಡಿದ್ದು, ಅವರು ಇಂದು ಅಧಿಕಾರ ವಹಿಸಿಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ನಂಜುಂಡಸ್ವಾಮಿ ಅವರು, ಬಡವರು ಬರುವ ಕೆ.ಆರ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ, ಜೀವರಕ್ಷಕ ಔಷಧಗಳ ಪೂರೈಕೆ, ಸ್ವಚ್ಛತೆಗೆ ಪ್ರಾಧಾನ್ಯತೆ ನೀಡುವ…

ಕೆ.ಆರ್.ಆಸ್ಪತ್ರೆಯಲ್ಲಿ ಇನ್ನು ಮುಂದೆ ಕಾಸುಕೊಟ್ಟರೆ ಚಿಕಿತ್ಸೆ
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಇನ್ನು ಮುಂದೆ ಕಾಸುಕೊಟ್ಟರೆ ಚಿಕಿತ್ಸೆ

March 17, 2019

ಮೈಸೂರು: ಬಡವರು, ಮಧ್ಯಮ ವರ್ಗದವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಮಹಾರಾಜರು ಸ್ಥಾಪಿಸಿದ ಮೈಸೂರಿನ ದೊಡ್ಡಾಸ್ಪತ್ರೆಯ ಲ್ಲೀಗ ಉಚಿತ ಚಿಕಿತ್ಸೆ ಮರೀಚಿಕೆಯಾಗಿದೆ. ಶತಮಾನದಷ್ಟು ಹಳೆಯದಾದ ಮೈಸೂರಿನ ಹೃದಯ ಭಾಗದ ಕೃಷ್ಣ ರಾಜೇಂದ್ರ ಆಸ್ಪತ್ರೆಯ ಎಲ್ಲಾ ಬಗೆಯ ವೈದ್ಯಕೀಯ ಸೇವೆಗಳಿಗೂ ಶುಲ್ಕ ವಿಧಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳು ಲಿಖಿತ ಆದೇಶ ಹೊರಡಿಸಿರುವುದ ರಿಂದ ಮಾರ್ಚ್ 1ರಿಂದ ಕೆ.ಆರ್ ಆಸ್ಪತ್ರೆಯಲ್ಲಿ ಕಾಸು ಕೊಟ್ಟರೆ ಮಾತ್ರ ಚಿಕಿತ್ಸೆ. ಎಸ್ಸಿ, ಎಸ್ಟಿ, ಅನಾಥರು ಹಾಗೂ ಜೈಲು ವಾರ್ಡ್‍ಗಳ ರೋಗಿಗಳನ್ನು…

ಹೆಚ್ಚುತ್ತಿರುವ ವಾಹನ ಶಬ್ಧ ಮಾಲಿನ್ಯ, ಬೈಕ್ ಸವಾರರ ಅಡ್ಡ ದಾರಿ: ಆಸ್ಪತ್ರೆ ರೋಗಿಗಳಿಗೆ, ಸಾರ್ವಜನಿಕರಿಗೆ ಕಿರಿಕಿರಿ
ಮೈಸೂರು

ಹೆಚ್ಚುತ್ತಿರುವ ವಾಹನ ಶಬ್ಧ ಮಾಲಿನ್ಯ, ಬೈಕ್ ಸವಾರರ ಅಡ್ಡ ದಾರಿ: ಆಸ್ಪತ್ರೆ ರೋಗಿಗಳಿಗೆ, ಸಾರ್ವಜನಿಕರಿಗೆ ಕಿರಿಕಿರಿ

August 18, 2018

ಮೈಸೂರು:  ಮೈಸೂರಿನಲ್ಲಿ ಶಬ್ಧ ಮಾಲಿನ್ಯ ಹೆಚ್ಚುತ್ತಿದ್ದು, ಅದರಲ್ಲೂ ಆಸ್ಪತ್ರೆ, ಚಿಕಿತ್ಸಾಲಯಗಳ ಬಳಿಯೇ ಹೆಚ್ಚಾಗಿ ಶಬ್ಧ ಮಾಲಿನ್ಯ ಉಂಟಾಗುತ್ತಿದೆ. ವಾಹನಗಳ ಕರ್ಕಶ ಹಾರನ್‍ಗಳಿಂದ ಆಸ್ಪತ್ರೆ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿರುವ ಬಗ್ಗೆ ದೂರುಗಳಿವೆ. ಮೈಸೂರಿನ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ ವೃತ್ತದಲ್ಲಿ ಶಬ್ಧ ಮಾಲಿನ್ಯ ಹೆಚ್ಚಾಗಿದೆ. ಒಂದೆಡೆ ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ, ಇರ್ವಿನ್ ರಸ್ತೆಗಳ ಮಧ್ಯೆ ಇರುವ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಯ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಶಬ್ಧ ಮಾಲಿನ್ಯದಿಂದ ಹೆಚ್ಚು ತೊಂದರೆಯಾಗುತ್ತಿದೆ. ಆಯುರ್ವೇದ ವೃತ್ತದಲ್ಲಂತೂ ವಾಹನಗಳ…

ಸಭೆಯಲ್ಲಿ ಚೆಲುವಾಂಬ ಆಸ್ಪತ್ರೆ ಬೆಡ್ ಕೊರತೆ ಪ್ರಸ್ತಾಪ – ಪ್ರಸ್ತಾವನೆ ಸಲ್ಲಿಸಿದರೆ ಸಮಸ್ಯೆಗೆ ಶೀಘ್ರ ಪರಿಹಾರ: ಸಂಸದ
ಮೈಸೂರು

ಸಭೆಯಲ್ಲಿ ಚೆಲುವಾಂಬ ಆಸ್ಪತ್ರೆ ಬೆಡ್ ಕೊರತೆ ಪ್ರಸ್ತಾಪ – ಪ್ರಸ್ತಾವನೆ ಸಲ್ಲಿಸಿದರೆ ಸಮಸ್ಯೆಗೆ ಶೀಘ್ರ ಪರಿಹಾರ: ಸಂಸದ

June 30, 2018

ಮೈಸೂರು: ಮೈಸೂರಿನ ಪ್ರತಿಷ್ಠಿತ ಚೆಲುವಾಂಬ ಆಸ್ಪತ್ರೆಯಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಬೆಡ್‍ಗಳ ಕೊರತೆ ಇರುವ ವಿಚಾರ ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಯಿತು. ಗರ್ಭಿಣಿಯರು, ಮಕ್ಕಳು ಮತ್ತು ಬಾಣಂತಿಯರನ್ನು ನೆಲದ ಮೇಲೆ ಹಾಸಿಗೆ ಹಾಕಿ ಮಲಗಿಸಲಾಗುತ್ತಿರುವ ಬಗ್ಗೆ ಸಂಸದ ಆರ್.ಧ್ರುವನಾರಾಯಣ್ ಕೆ.ಆರ್.ಆಸ್ಪತ್ರೆ ಅಧೀಕ್ಷಕರನ್ನು ಪ್ರಶ್ನಿಸಿದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಈ ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಅವರಿಗೆ ನಿರ್ದೇಶನ ನೀಡಿದರು. ಅಲ್ಲದೆ ಕೆ.ಆರ್.ಆಸ್ಪತ್ರೆಯಲ್ಲಿ…

ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಬೆಡ್‍ಗಳ ಕೊರತೆ: ಗರ್ಭಿಣ ಯರಿಗೆ ನೆಲದ ಹಾಸಿಗೆಯೇ ಗತಿ ಕೆ.ಆರ್.ಆಸ್ಪತ್ರೆಯಲ್ಲೂ ಇದೇ ಪರಿಸ್ಥಿತಿ
ಮೈಸೂರು

ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಬೆಡ್‍ಗಳ ಕೊರತೆ: ಗರ್ಭಿಣ ಯರಿಗೆ ನೆಲದ ಹಾಸಿಗೆಯೇ ಗತಿ ಕೆ.ಆರ್.ಆಸ್ಪತ್ರೆಯಲ್ಲೂ ಇದೇ ಪರಿಸ್ಥಿತಿ

June 19, 2018

ಮೈಸೂರು: ಮೈಸೂರು ಮಹಾರಾಜರಿಂದ ಸ್ಥಾಪನೆಗೊಂಡ ರಾಜ್ಯದ ‘ದೊಡ್ಡಾಸ್ಪತ್ರೆ’ ಎನಿಸಿರುವ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ರೋಗಿಗಳು ಬರುತ್ತಿರುವುದರಿಂದ ಇಲ್ಲಿ ಹಾಸಿಗೆಗಳ ಕೊರತೆಯಿದೆ. ಇದೇ ಸ್ಥಿತಿ ಚೆಲುವಾಂಬ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೂ ಕಂಡು ಬಂದಿದೆ. ಇಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚಿನ ಮಹಿಳೆಯರು ಚಿಕಿತ್ಸೆಗೆ ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಇಲ್ಲಿ ಈಗ ಹಾಸಿಗೆಗಳ ತೀವ್ರ ಕೊರತೆ ಎದುರಾಗಿದೆ. ಈ ಕಾರಣಕ್ಕಾಗಿ ಹೆಚ್ಚುವರಿಯಾಗಿ ದಾಖಲಾಗುವ ಗರ್ಭಿಣಿಯರಿಗೆ ನೆಲದ ಮೇಲೆ ಹಾಸಿಗೆ ಹಾಕಿ ಅವಕಾಶ ಮಾಡಿಕೊಡಲಾಗಿದೆ. ಚೆಲುವಾಂಬ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ…

ಡಾ.ಎಂ.ಶೀನಿವಾಸ್ ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ
ಮೈಸೂರು

ಡಾ.ಎಂ.ಶೀನಿವಾಸ್ ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ

June 10, 2018

ಮೈಸೂರು: ಮೈಸೂರಿನ ಕೆಆರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರನ್ನಾಗಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎಂ.ಶ್ರೀನಿವಾಸ್ ಅವರನ್ನು ನೇಮಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವೈ.ಎಸ್.ದಳವಾಯಿ ಅವರು ಶುಕ್ರವಾರ ಡಾ.ಎಂ.ಶ್ರೀನಿವಾಸ್ ಅವರ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ. ಪ್ರಭಾರ ವೈದ್ಯಕೀಯ ಅಧೀಕ್ಷಕರಾದ ಡಾ.ಎಸ್.ಚಂದ್ರಶೇಖರ ಅವರಿಂದ ಶುಕ್ರವಾರ ಡಾ.ಶ್ರೀನಿವಾಸ್ ಅಧಿಕಾರ ವಹಿಸಿಕೊಂಡರು. ತೀವ್ರ ಸ್ಪರ್ಧೆ ಏರ್ಪಟ್ಟಿದ್ದ ಕಾರಣ ಸರ್ಕಾರದ ಮಟ್ಟದಲ್ಲಿ ವೈದ್ಯಕೀಯ ಅಧೀಕ್ಷಕರ ನೇಮಕ ಪ್ರಕ್ರಿಯೆ ನೆನೆಗುದಿಗೆ ಬಿದ್ದ ಕಾರಣ ಡಾ.ಚಂದ್ರಶೇಖರ್…

ಪಿಕ್‍ಪಾಕೆಟ್ ಮಾಡಲೆತ್ನಿಸಿದ್ದರಿಂದ ಹಲ್ಲೆ ಪೊಲೀಸರಿಗೆ ಬಂಧಿತ ಆರೋಪಿಗಳ ಹೇಳಿಕೆ
ಮೈಸೂರು

ಪಿಕ್‍ಪಾಕೆಟ್ ಮಾಡಲೆತ್ನಿಸಿದ್ದರಿಂದ ಹಲ್ಲೆ ಪೊಲೀಸರಿಗೆ ಬಂಧಿತ ಆರೋಪಿಗಳ ಹೇಳಿಕೆ

June 9, 2018

ಮೈಸೂರು: ಕೆ.ಆರ್.ಆಸ್ಪತ್ರೆ ಆವರಣದಲ್ಲಿ ರೋಗಿಗಳ ಕಡೆಯವರ ಜೇಬಿಗೆ ಕತ್ತರಿ ಹಾಕಲೆತ್ನಿಸಿದ್ದರಿಂದ ನಾವು ಆತನನ್ನು ಹಿಡಿದು ಹೊಡೆದೆವು ಎಂದು ಇರ್ಫಾನ್ ಸಾವಿಗೆ ಕಾರಣರೆಂದು ಬಂಧಿತರಾಗಿರುವ 6 ಮಂದಿ ಆರೋಪಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ನಮ್ಮ ಸಂಬಂಧಿಕರನ್ನು ಚೆಲುವಾಂಬ, ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರಿಂದ ನಾವು ಆಸ್ಪತ್ರೆ ಆವರಣದಲ್ಲಿದ್ದೆವು. ಮೇ 10ರಂದು ರಾತ್ರಿ ಆ ವ್ಯಕ್ತಿ, ರೋಗಿಯ ಕಡೆಯವರ ಬಳಿ ಪಿಕ್‍ಪಾಕೆಟ್ ಮಾಡಿದ್ದನ್ನು ನೋಡಿದ ನಾವು, ತಕ್ಷಣ ಆತನನ್ನು ಹಿಡಿದು ಹೊಡೆದೆವು ಎಂದು ಮಹದೇವ, ರಾಘವೇಂದ್ರ, ಶಶಿಕುಮಾರ್, ಪ್ರೇಮ್‍ಕುಮಾರ್, ಮದನ್ ಗೋಪಾಲ್ ಹಾಗೂ…

Translate »