ಕೆ.ಆರ್.ಆಸ್ಪತ್ರೆಯಲ್ಲಿ ಇನ್ನು ಮುಂದೆ ಕಾಸುಕೊಟ್ಟರೆ ಚಿಕಿತ್ಸೆ
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಇನ್ನು ಮುಂದೆ ಕಾಸುಕೊಟ್ಟರೆ ಚಿಕಿತ್ಸೆ

March 17, 2019

ಮೈಸೂರು: ಬಡವರು, ಮಧ್ಯಮ ವರ್ಗದವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಮಹಾರಾಜರು ಸ್ಥಾಪಿಸಿದ ಮೈಸೂರಿನ ದೊಡ್ಡಾಸ್ಪತ್ರೆಯ ಲ್ಲೀಗ ಉಚಿತ ಚಿಕಿತ್ಸೆ ಮರೀಚಿಕೆಯಾಗಿದೆ.

ಶತಮಾನದಷ್ಟು ಹಳೆಯದಾದ ಮೈಸೂರಿನ ಹೃದಯ ಭಾಗದ ಕೃಷ್ಣ ರಾಜೇಂದ್ರ ಆಸ್ಪತ್ರೆಯ ಎಲ್ಲಾ ಬಗೆಯ ವೈದ್ಯಕೀಯ ಸೇವೆಗಳಿಗೂ ಶುಲ್ಕ ವಿಧಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳು ಲಿಖಿತ ಆದೇಶ ಹೊರಡಿಸಿರುವುದ ರಿಂದ ಮಾರ್ಚ್ 1ರಿಂದ ಕೆ.ಆರ್ ಆಸ್ಪತ್ರೆಯಲ್ಲಿ ಕಾಸು ಕೊಟ್ಟರೆ ಮಾತ್ರ ಚಿಕಿತ್ಸೆ.

ಎಸ್ಸಿ, ಎಸ್ಟಿ, ಅನಾಥರು ಹಾಗೂ ಜೈಲು ವಾರ್ಡ್‍ಗಳ ರೋಗಿಗಳನ್ನು ಹೊರತು ಪಡಿಸಿ ಉಳಿದಂತೆ ಬರುವ ಬಿಪಿಎಲ್, ಎಪಿಎಲ್ ಕಾರ್ಡುದಾರರನ್ನೊಳಗೊಂಡ ಎಲ್ಲಾ ಬಗೆಯ ಜನರಿಗೂ ಚಿಕಿತ್ಸೆಗೆ ಕೆ.ಆರ್.ಆಸ್ಪತ್ರೆಯಲ್ಲಿ ದರ ನಿಗದಿಗೊಳಿಸಿ ಹಣ ವಸೂಲು ಮಾಡಲಾಗುತ್ತಿದೆ.

ಸರ್ಕಾರದ ಈ ಹೊಸ ನೀತಿಯಿಂದಾಗಿ ಚಿಕಿತ್ಸೆಗೆಂದು ಕೆ.ಆರ್.ಆಸ್ಪತ್ರೆಗೆ ಬರುವ ರೋಗಿಗಳು ದಿಗ್ಬ್ರಾಂತರಾಗಿದ್ದು, ಹಣ ಕಟ್ಟ ಲಾಗದೆ ಕಂಗಾಲಾಗಿದ್ದಾರೆ. ಮೈಸೂರು ಜಿಲ್ಲೆಯ ದೂರದ ಊರುಗಳು, ಸುತ್ತಲಿನ ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳ ಆಸ್ಪತ್ರೆಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ರೆಫರ್ ಆಗಿ ಬರುವ ರೋಗಿ ಗಳಂತೂ ಸರ್ಕಾರದ ಹೊಸ ಆದೇಶ ದಿಂದ ಪರಿತಪಿಸುವಂತಾಗಿದೆ.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (MMC& RI) ಅಧೀನದಲ್ಲಿರುವ ಬೋಧನಾ ಆಸ್ಪತ್ರೆ ಗಳಾದ ಕೃಷ್ಣರಾಜೇಂದ್ರ, ಚೆಲುವಾಂಬ ಹಾಗೂ ಪಿಕೆಟಿಬಿ ಆಸ್ಪತ್ರೆಗಳಲ್ಲೂ ಸರ್ಕಾ ರದ ಆದೇಶದಂತೆ ಹೊರ, ಒಳ ರೋಗಿ ಗಳ ಚಿಕಿತ್ಸಾ ವೆಚ್ಚ, ಪ್ರಯೋಗಾಲಯ, ಎಕ್ಸ್‍ರೇ, ಸ್ಕ್ಯಾನಿಂಗ್, ಎಂಆರ್‍ಐ ಸೇರಿ ದಂತೆ ಎಲ್ಲಾ ಬಗೆಯ ಪರೀಕ್ಷೆಗಳಿಗೂ ಶುಲ್ಕ ವಸೂಲಿ ಮಾಡಲಾಗುತ್ತಿದೆ.

ಆಸ್ಪತ್ರೆಯ ದಿನನಿತ್ಯದ ನಿರ್ವಹಣೆಗಾಗಿ ನೀಡುತ್ತಿದ್ದ ಅನುದಾನ ಕಡಿತ ಮಾಡಿರು ವುದರಿಂದ ಹಾಗೂ `ಆರೋಗ್ಯ ಕರ್ನಾ ಟಕ’ `ಆಯುಷ್ಮಾನ್ ಭಾರತ’ `ವಾಜಪೇಯಿ ಆರೋಗ್ಯ ಯೋಜನೆ’ಗಳಂತಹ ಸರ್ಕಾರಿ ಯೋಜನೆಗಳಿರುವುದರಿಂದ ಇನ್ನು ಮುಂದೆ ಎಪಿಎಲ್, ಬಿಪಿಎಲ್ ಕಾರ್ಡು ಹೊಂದಿರುವ ವರಿಂದಲೂ ವೈದ್ಯಕೀಯ ಸೇವಾ ಶುಲ್ಕ ಪಡೆಯಬೇಕೆಂದು ಸರ್ಕಾರದ ಪ್ರಧಾನ ಕಾರ್ಯ ದರ್ಶಿಗಳು ಆದೇಶದಲ್ಲಿ ಸೂಚಿಸಿದ್ದಾರೆ.

ಚಂಡೀಗಡದ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ಪೋಸ್ಟ್ ಗ್ರಾಜುಯೇಟ್ ಇನ್‍ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರೀಸರ್ಚ್ ಸಂಸ್ಥೆಯು ತನ್ನ ಅಧೀನ ಆಸ್ಪತ್ರೆಗಳಲ್ಲಿ ಉಪಭೋಗ ಶುಲ್ಕ(user charges) ಪಡೆದು ಆಸ್ಪತ್ರೆ ಮತ್ತು ಕಾಲೇಜನ್ನು ಸುವ್ಯವಸ್ಥೆಯಿಂದ ನಿರ್ವಹಿಸುತ್ತಿರುವುದರಿಂದ ಕರ್ನಾಟಕ ರಾಜ್ಯ ಸರ್ಕಾರವು ಸೆಪ್ಟೆಂಬರ್‍ನಲ್ಲೇ ಶುಲ್ಕ ವಿಧಿಸುವಂತೆ ಆದೇಶ ನೀಡಿತ್ತು.

ಆದರೆ ಏಕಾಏಕಿ ಬಿಪಿಎಲ್ ಕಾರ್ಡು ದಾರರಿಗೆ ಚಿಕಿತ್ಸಾ ಶುಲ್ಕ ವಿಧಿಸಿದರೆ ಜನರಿಂದ ಪ್ರತಿರೋಧ ವ್ಯಕ್ತವಾಗುತ್ತದೆಂಬ ಕಾರಣಕ್ಕೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಕೆ.ಆರ್.ಆಸ್ಪತ್ರೆ ಅಧಿಕಾರಿಗಳು ಹಳೇ ವ್ಯವಸ್ಥೆ ಯಲ್ಲೇ ಸೇವೆ ಮುಂದುವರೆಸುತ್ತಿದ್ದರು.

ಆದರೆ, ಫೆಬ್ರವರಿ 2ನೇ ವಾರದಲ್ಲಿ ಪತ್ರ ಬರೆದು ಆದೇಶ ಅನುಷ್ಠಾನಗೊಳಿಸದಿ ದ್ದರೆ ಸಂಬಂಧಪಟ್ಟ ಮೆಡಿಕಲ್ ಸೂಪರಿಂ ಟೆಂಡೆÀಂಟ್ ಹಾಗೂ ಸ್ಥಾನಿಕ ವೈದ್ಯಾಧಿಕಾರಿ ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗು ವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯು ಎಚ್ಚರಿಕೆ ನೀಡಿದ್ದರಿಂದಾಗಿ ನಿಗದಿತ ಚಿಕಿತ್ಸಾ ದರವನ್ನು `ಇ-ಆಸ್ಪತ್ರೆ’ ಸಿಸ್ಟಂಗೆ ಅಳವಡಿಸಿರುವ ಕೆ.ಆರ್., ಚೆಲುವಾಂಬ ಹಾಗೂ ಪಿಕೆಟಿಬಿ ಆಸ್ಪತ್ರೆಗಳಲ್ಲಿ ಮಾರ್ಚ್ 1 ರಿಂದ ಸದ್ದಿಲ್ಲದೇ ಹೊಸ ಶುಲ್ಕ ನೀತಿ ಯನ್ನು ಅನುಷ್ಠಾನಗೊಳಿಸಲಾಗಿದೆ.

ಹೊಸ ಚಿಕಿತ್ಸಾ ದರ
ಹೊರರೋಗಿಗಳ ನೋಂದಣಿಗೆ 10ರೂ. ಹಾಗೂ ಒಳರೋಗಿ
ನೋಂದಣಿಗೆ 25 ರೂ. ಶುಲ್ಕದಲ್ಲಿ ಮಾತ್ರ ಬದಲಾವಣೆ ಇಲ್ಲ.

ಉಳಿದಂತೆ ಒಳರೋಗಿಗಳ ದಿನದ ಹಾಸಿಗೆ ಶುಲ್ಕ 25 ರೂ., ವಿಶೇಷ
ವಾರ್ಡ್ ಶುಲ್ಕ 750 ರೂ, ವಿಐಪಿ ಸೂಟ್ಸ್ ವಾರ್ಡ್‍ಗಳಿಗೆ 3,000
ರೂ. ಶುಲ್ಕ ನಿಗದಿಗೊಳಿಸಲಾಗಿದೆ.

ಐಸಿಯುನಲ್ಲಿ ದಿನಕ್ಕೆ 2000ರೂ., ಹೈಡಿಪಿಂಡೆನ್ಸಿ ಘಟಕ(ಊಆUS)ಕ್ಕೆ
1,500 ರೂ, ಪೋಸ್ಟ್ ಆಪರೇಟಿವ್ ವಾರ್ಡ್‍ಗೆ 500 ರೂ. ಶಸ್ತ್ರ
ಚಿಕಿತ್ಸೆಗೆ ಮೊದಲ ಒಂದು ಗಂಟೆ ಅವಧಿಗೆ 750 ರೂ. ಮತ್ತು ನಂತರದ
ಅವಧಿಗೆ ಪ್ರತೀ 1 ಗಂಟೆಗೆ 400 ರೂ. ಶುಲ್ಕವನ್ನು ರೋಗಿಗಳು
ಪಾವತಿಸಬೇಕಾಗಿದೆ.

ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಗಳು ಶೇ.35 ರಷ್ಟು ಹಣವನ್ನು
ಮುಂಗಡವಾಗಿ ಅನಸ್ತೇಷಿಯಾ ಯೂಸರ್ ಚಾರ್ಜ್ ಅನ್ನು
ಪಾವತಿಸಬೇಕು. ಆದರೆ ಒಳರೋಗಿಗಳು ಔಷಧ ಮತ್ತು ಪ್ರಯೋಗಾಲಯ
ಶುಲ್ಕವನ್ನು ಪ್ರತ್ಯೇಕವಾಗಿ ಕಟ್ಟಬೇಕು. ಹೆಚ್1 ಎನ್1 ರೋಗಿಗಳಿಗೆ
ಉಚಿತ ಚಿಕಿತ್ಸೆ ನೀಡಬೇಕೆಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಇನ್ನಿತರ ಸೇವೆಗಳ ದರ
ಕರೋನರಿ ಆಂಜಿಯಾಗ್ರಾಂಗೆ 7.000 ರೂ., ಕ್ಯಾಥ ಸ್ಟಡೀಸ್‍ಗೆ 5,500 ರೂ., ಕರೋನರಿ ಆಂಜಿಯೋಪ್ಲಾಸ್ಟಿಗೆ 45,000 ರೂ, 2 ಸ್ಟಂಟ್‍ಗೆ 50,000 ರೂ., ಆಯ್ದ 1 ಡ್ರಗ್ ಎಲ್ಯೂಟಿಂಗ್ ಸ್ಟೆಂಟ್‍ಗೆ 55,000 ರೂ. ಹಾಗೂ 2 ಡ್ರಗ್ ಎಲ್ಯೂಟಿಂಗ್ ಸ್ಟೆಂಟ್ಸ್‍ಗಳಿಗೆ 75,000 ರೂ. ದರ ನಿಗದಿಪಡಿಸಲಾಗಿದೆ.

ಪೆರಿಪೆರಲ್ ಆಂಜಿಯೋ ಪ್ಲಾಸ್ಟಿಗೆ 50,000 ರೂ. ವರ್ಟಿಬ್ರಲ್ ಆಂಜಿಯೋಪ್ಲಾಸ್ಟಿಗೆ 50,000 ರೂ. ಪರ್ಮನೆಂಟ್ ಪೇಸ್‍ಮೇಕರ್ ಇಂಪ್ಲಂಟೇಷನ್‍ಗೆ 25000 ರೂ.ಗಳಂತೆ ಬಯೋಕೆಮಿಸ್ಟ್ರಿ, ಕಾರ್ಡಿಯಾಲಜಿ, ಡರ್ಮಟಾಲಜಿ, ಇಎನ್‍ಟಿ, ಫೊರೆನ್ಸಿಕ್ ಮೆಡಿಸಿನ್, ಜನರಲ್ ಮೆಡಿಸಿನ್ ಸರ್ಜರಿ, ನ್ಯೂರಾಲಜಿ, ಪೀಡಿಯಾಟ್ರಿಕ್ಸ್, ರೇಡಿಯಾಲಜಿ ಮತ್ತು ಗೈನಕಾಲಜಿ ವಿಭಾಗಗಳ ಚಿಕಿತ್ಸೆಗೆ ವಿವಿಧ ಪ್ರಮಾಣದ ದರ ನಿಗದಿಗೊಳಿಸಲಾಗಿದೆ.

Translate »