ಮೈಸೂರು ಮೆಡಿಕಲ್ ಕಾಲೇಜು ಕಚೇರಿಯ ಆರು ತಿಂಗಳ ಸಿಸಿ ಕ್ಯಾಮರಾ ಫುಟೇಜ್  ಹಾಜರುಪಡಿಸಲು ಮಾಹಿತಿ ಆಯೋಗ ಸೂಚನೆ
ಮೈಸೂರು

ಮೈಸೂರು ಮೆಡಿಕಲ್ ಕಾಲೇಜು ಕಚೇರಿಯ ಆರು ತಿಂಗಳ ಸಿಸಿ ಕ್ಯಾಮರಾ ಫುಟೇಜ್ ಹಾಜರುಪಡಿಸಲು ಮಾಹಿತಿ ಆಯೋಗ ಸೂಚನೆ

March 17, 2019

ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆಯಲ್ಲಿ (ಎಂಎಂಸಿಆರ್‍ಐ) ಅಳವಡಿಸಿರುವ ಸಿಸಿ ಕ್ಯಾಮರಾದ ಹಿಂದಿನ 6 ತಿಂಗಳ ಫುಟೇಜ್‍ಗಳನ್ನು ಹಾಜರು ಪಡಿಸಬೇಕು ಹಾಗೂ ಸಿಸಿ ಕ್ಯಾಮರಾ ದಲ್ಲಿ ದಾಖಲಾಗುವ ಫುಟೇಜ್‍ಗಳನ್ನು ಕನಿಷ್ಠ 1 ವರ್ಷದವರೆಗೆ ಶೇಖರಣೆ ಮಾಡಲು ಕ್ರಮ ಕೈಗೊಳ್ಳ ಬೇಕು ಎಂದು ಕರ್ನಾಟಕ ಮಾಹಿತಿ ಆಯೋಗವು (ಎಂಎಂಸಿಆರ್‍ಐ) ಡೀನ್ ಡಾ.ಸಿ.ಪಿ. ನಂಜರಾಜ್ ಅವರಿಗೆ ಆದೇಶಿಸಿದೆ.

ಮೈಸೂರಿನ ಶ್ರೀಮತಿ ಎಸ್. ಕೋಮಲಾ ದೇವಿ ಎಂಬುವರು ಮಾಹಿತಿ ಹಕ್ಕು ಕಾಯಿದೆಯಡಿ ಎರಡು ದಿನಗಳ ಸಿಸಿ ಕ್ಯಾಮರಾ ಫುಟೇಜ್‍ಗಳನ್ನು ಕೇಳಿದ್ದು, ಅದನ್ನು ನೀಡದೇ ಇರುವುದು ಅನು ಮಾನಾಸ್ಪದವಾಗಿದೆ ಎಂದು ಆದೇಶ ದಲ್ಲಿ ತಿಳಿಸಿರುವ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತ ಎಸ್.ಪಿ.ರಮೇಶ್ ಅವರು ಸದರಿ ಎರಡು ದಿನಗಳ ಫುಟೇಜ್‍ಗಳು ಮಾತ್ರ ಮಾಯವಾಗಿ ರುವುದರ ಬಗ್ಗೆ ವಿವರಣೆಯನ್ನು ನೀಡ ಬೇಕೆಂದು ಆದೇಶಿಸಿದ್ದು, ಪ್ರಕರಣವನ್ನು ಏ.5ಕ್ಕೆ ಮುಂದೂಡಿದ್ದಾರೆ.

ಹಿನ್ನೆಲೆ: ಆರ್ಥಿಕ ಸಲಹೆಗಾರರಾದ ಶ್ರೀಮತಿ ಎಸ್.ಮಂಜುಳಾ ಅವರನ್ನು ಎಂಎಂಸಿಆರ್‍ಐ ಮುಖ್ಯ ಆಡಳಿತಾಧಿ ಕಾರಿಗಳಾಗಿ ಪ್ರಭಾರ ವಹಿಸಿಕೊಳ್ಳುವಂತೆ ಡೀನ್ ಅವರು ಆದೇಶಿಸಿದ್ದರು. ಆದರೆ ಶ್ರೀಮತಿ ಮಂಜುಳಾ ಅವರು ಡೀನ್ ಅವ ರಿಗೆ ಬರೆದ ಪತ್ರದಲ್ಲಿ `ನನಗೆ ಮುಖ್ಯ ಆಡಳಿತಾಧಿಕಾರಿಗಳ ಪ್ರಭಾರ ವಹಿಸಲು ಆದೇಶಿಸಿರುತ್ತೀರಿ. ಆದರೆ ನಾಗರಿಕರು ಪಾವತಿಸುವ ತೆರಿಗೆ ಹಣದಿಂದ ಸರ ಕಾರವು ಈ ಸಂಸ್ಥೆಗೆ ಅನುದಾನ ನೀಡು ತ್ತಿದ್ದು, ಈ ಅನುದಾನದಿಂದ ವೇತನ ಪಡೆ ಯುತ್ತಿರುವ ನಾವು ಸರ್ಕಾರ ಹೊರಡಿ ಸುವ ಆದೇಶ ಮತ್ತು ಕಾಯಿದೆಗಳನ್ನು ಪಾಲಿಸುವುದೇ ದೊಡ್ಡ ಅಪರಾಧವೆಂದು ಕಾಣುತ್ತಿರುವ ತಮ್ಮಗಳ ಮಧ್ಯೆ ಇಲ್ಲಿ ನನಗೆ ಯಾವುದೇ ರೀತಿಯ ಸುರಕ್ಷತೆ ಮತ್ತು ಭದ್ರತೆ ಇರುವುದಿಲ್ಲವೆಂದು ದಿನಾಂಕ 4-6-2018ರಂದು ಈ ಸಂಸ್ಥೆ ಯಲ್ಲಿ ನಡೆದಿರುವ ಘಟನೆಯೇ ಸಾಕ್ಷಿ ಯಾಗಿರುತ್ತದೆ’ ಎಂದು ಉಲ್ಲೇಖಿಸಿದ್ದರು.

ಈ ಘಟನೆ ಹಿನ್ನೆಲೆಯಲ್ಲಿ ಮೈಸೂರಿನ ಶ್ರೀಮತಿ ಕೋಮಲಾದೇವಿ ಎಂಬುವರು 2018ರ ಫೆ.23 ಮತ್ತು ಜೂನ್ 4ರ ಡೀನ್ ಛೇಂಬರ್ ಮತ್ತು ಕಾರಿಡಾರ್ ನಲ್ಲಿ ಅಳವಡಿಸಿರುವ ಸಿಸಿ ಟಿವಿ ಫುಟೇಜ್ ಗಳನ್ನು ನೀಡುವಂತೆ ಮಾಹಿತಿ ಹಕ್ಕು ಕಾಯಿದೆಯಡಿ ಎಂಎಂಸಿಆರ್‍ಐಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸದರಿ ಎರಡು ದಿನಗಳ ಫುಟೇಜ್ ಲಭ್ಯವಿಲ್ಲ ಎಂದು ಅವರಿಗೆ ಸಾರ್ವಜನಿಕ ಮಾಹಿತಿ ಅಧಿ ಕಾರಿಯೂ ಆದ ಡೀನ್ ಡಾ. ಸಿ.ಪಿ. ನಂಜರಾಜ್ ಅವರು ಹಿಂಬರಹ ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಕೋಮಲಾ ದೇವಿ ರಾಜ್ಯ ಮಾಹಿತಿ ಹಕ್ಕು ಆಯೋ ಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತರು ಶ್ರೀಮತಿ ಮಂಜುಳಾ ಅವರ ಪತ್ರದ ಸಾರಾಂಶ ವನ್ನು ತಮ್ಮ ಆದೇಶದಲ್ಲಿ ಉಲ್ಲೇಖಿಸಿ ರುವುದಲ್ಲದೇ ಆ ದಿನಗಳ ಫುಟೇಜ್ ಮಾತ್ರ ಮಾಯವಾಗಿರುವುದು ಅತ್ಯಂತ ಅನುಮಾನಾಸ್ಪದವಾಗಿ ಕಂಡು ಬಂದಿ ರುತ್ತದೆ ಎಂದು ಹೇಳಿರುವುದಲ್ಲದೇ, ಹಿಂದಿನ ಆರು ತಿಂಗಳ ಫುಟೇಜ್ ಗಳನ್ನು ಆಯೋಗಕ್ಕೆ ಹಾಜರುಪಡಿಸ ಬೇಕು ಎಂದು ಆದೇಶಿಸಿದ್ದರು.

Translate »