ಪರಿಸರ ಸ್ನೇಹಿ ವಾತಾವರಣವುಳ್ಳ ಶಾಲೆಗಳಿಗೆ ‘ಪರಿಸರ ಮಿತ್ರ ಶಾಲೆ’ ಪುರಸ್ಕಾರ ಪ್ರದಾನ
ಮೈಸೂರು

ಪರಿಸರ ಸ್ನೇಹಿ ವಾತಾವರಣವುಳ್ಳ ಶಾಲೆಗಳಿಗೆ ‘ಪರಿಸರ ಮಿತ್ರ ಶಾಲೆ’ ಪುರಸ್ಕಾರ ಪ್ರದಾನ

March 17, 2019

ಮೈಸೂರು: ಸ್ವಚ್ಛ, ಸುಂದರ ಹಾಗೂ ಪರಿಸರ ಸ್ನೇಹಿ ವಾತಾ ವರಣ ಹೊಂದಿರುವ ಶಾಲೆಗಳಿಗೆ ಕರ್ನಾ ಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನೀಡುವ ಜಿಲ್ಲಾ ಮಟ್ಟದ `ಪರಿಸರ ಮಿತ್ರ ಶಾಲೆ’ ಪುರಸ್ಕಾರ ಹುಣಸೂರು ತಾಲೂಕಿನ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲಭಿಸಿದೆ.

ಮೈಸೂರಿನ ಪುರಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಾಂಡುರಂಗ, ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆರ್.ರಾಜೇಶ್, ಸಹ ಶಿಕ್ಷಕಿ ಶಶಿಕಲಾ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ದರು. ಇದರೊಂದಿಗೆ ತಲಾ 10 ಶಾಲೆ ಗಳಿಗೆ ಹಸಿರು ಮತ್ತು ಹಳದಿ ಪ್ರಶಸ್ತಿ ನೀಡಲಾಯಿತು. ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪಡೆದುಕೊಂಡ ಶಾಲೆಗೆ 30 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡ ಲಾಯಿತು. ಹಸಿರು ಶಾಲೆ ಪ್ರಶಸ್ತಿಗೆ 20 ಸಾವಿರ ನಗದು, ಹಳದಿ ಶಾಲೆಗೆ 10 ಸಾವಿರ ನಗದು, ಪ್ರಶಸ್ತಿ, ಫÀಲಕ ಮತ್ತು ಪ್ರಮಾಣ ಪತ್ರ ನೀಡಲಾಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂ ತ್ರಣ ಮಂಡಳಿ ಹಿರಿಯ ಪರಿಸರ ಅಧಿ ಕಾರಿ ಎ.ಉದಯ್ ಕುಮಾರ್ ಮಾತ ನಾಡಿ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿ ಸುವ ಉz್ದÉೀಶದಿಂದ ಕಳೆದ ಎಂಟು ವರ್ಷ ಗಳಿಂದ ಪರಿಸರ ಮಿತ್ರ ಶಾಲೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಮೂಲಕ ಮಕ್ಕಳಲ್ಲಿ ಪರಿಸರ ಜಾಗೃತಿ ಮತ್ತು ಮಾಲಿನ್ಯ ಮುಕ್ತ ಸಮಾಜ ನಿರ್ಮಾಣ ಮಾಡುವ ಉz್ದÉೀಶ ನಮ್ಮದಾಗಿದೆ. ಪರಿಸರ ಜಾಗೃತಿ ಮತ್ತು ಸ್ವಚ್ಛತೆ ಕೇವಲ ಪ್ರಶಸ್ತಿಗೆ ಸೀಮಿತವಾಗ ಬಾರದು. ಪರಿಸರ ದಾಸೋಹ ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

ಪರಿಸರ ಮಿತ್ರ ಶಾಲೆ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿ ದ್ದಾರೆ. ಶಾಲೆಯ ಬಿಸಿಯೂಟ ತಯಾರಿ ಕೆಗೆ ತಾವೇ ಸೊಪ್ಪು ತರಕಾರಿ ಬೆಳೆಯು ತ್ತಾರೆ. ಶಾಲಾ ಆವರಣದಲ್ಲಿ ಉತ್ಪತ್ತಿಯಾ ಗುವ ಒಣ ಕಸದಿಂದ ಗೊಬ್ಬರ ತಯಾರು ಮಾಡುತ್ತಾರೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿಗಳಾದ ಬಿ.ಎಂ.ಪ್ರಕಾಶ್, ಎಂ.ಜಿ. ಯತೀಶ್, ಜನ ಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ವಿ.ಎನ್.ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

ಪರಿಸರ ಮಿತ್ರ ಶಾಲೆ: 2018-19ನೇ ಸಾಲಿನ ಜಿಲ್ಲಾ ಮಟ್ಟದ `ಪರಿಸರ ಮಿತ್ರ ಶಾಲೆ’ ಪ್ರಶಸ್ತಿಗೆ ದೇವಗಳ್ಳಿ ಶಾಲೆಗೆ ನೀಡ ಲಾಗಿದೆ. ಶಾಲಾ ಆವರಣದಲ್ಲಿ ಬಿಸಿ ಯೂಟಕ್ಕೆ ಅಗತ್ಯವಿರುವ ತರಕಾರಿ ಮತ್ತು ಸೊಪ್ಪುಗಳನ್ನು ಮಕ್ಕಳೇ ಬೆಳೆಯುತ್ತಾರೆ. ಟಮೋಟ, ಬದನೆಕಾಯಿ, ಮೂಲಂಗಿ, ಪರಂಗಿ, ಕೊತ್ತಂಬರಿ ಸೊಪ್ಪು, ಕರಿಬೇವು, ನೊಗ್ಗೆ ಸೊಪ್ಪು, ಪುದೀನಾಸೊಪ್ಪು ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಇದ ರೊಂದಿಗೆ ಔಷಧಿ ಗುಣವುಳ್ಳ ಸಸ್ಯಗಳನ್ನು ಬೆಳೆಯಲಾಗುತ್ತಿದೆ. ಶಾಲಾ ಆವರಣದಲ್ಲಿ ಉತ್ಪಾದನೆಯಾಗುವ ಕಸವನ್ನು ಒಣ ಮತ್ತು ಹಸಿ ಕಸವನ್ನಾಗಿ ಬೇರ್ಪಡಿಸಿ ಕಾಂಪೆÇೀಸ್ಟ್ ಮಾಡಲಾಗುತ್ತದೆ. ತಾವು ತಯಾರಿಸಿದ ಸಾವಯವ ಗೊಬ್ಬರವನ್ನು ಸೊಪ್ಪು ತರಕಾರಿ ಬೆಳೆಯಲು ಬಳಕೆ ಮಾಡಿ ಕೊಳ್ಳುತ್ತಾರೆ. ಮಳೆ ನೀರಿನ ಕೊಯ್ಲು ಅಳವಡಿಸಲಾಗಿದೆ. ಗ್ರಾಮದಲ್ಲಿ ಅಂತ ರ್ಜಲ ವೃದ್ಧಿಗಾಗಿ ಶಾಲಾ ಸುತ್ತಮುತ್ತ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿ ದ್ದಾರೆ. ಜತೆಗೆ ನೀರು ಪೋಲಾಗದಂತೆ ನೋಡಿಕೊಳ್ಳುತ್ತಾರೆ. ಬೆಳಗಿನ ಜಾವ, ಮಧ್ಯಾಹ್ನ ಮತ್ತು ತರಗತಿ ಬಿಟ್ಟ ನಂತರ ಶಾಲಾ ಆವರಣದಲ್ಲಿ ಪರಿಸರ ಸೇವೆ ಯಲ್ಲಿ ತಲ್ಲೀನರಾಗುತ್ತಾರೆ. ಮೈಸೂರಿನ ನಿಸರ್ಗ ಸಂಸ್ಥೆಯ ಸಹಾಯದೊಂದಿಗೆ ಮಕ್ಕಳು ಗ್ರಾಮಸ್ಥರಲ್ಲಿ ದೇಶಿ ಭತ್ತದ ಜಾಗೃತಿ ಮೂಡಿಸುತ್ತಾರೆ. ಕಪ್ಪು ಅಕ್ಕಿ, ರಾಜಮುಡಿ ಸೇರಿದಂತೆ ವಿವಿಧ ಭತ್ತದ ಪೈರುಗಳ ರೈತರಿಗೆ ಪರಿಚಯ ಮಾಡಿದ್ದಾರೆ.

ಹಸಿರು ಶಾಲೆ ಪ್ರಶಸ್ತಿ: ತಿ.ನರಸೀಪುರದ ಅಂಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ, ಹುಣಸೂರಿನ ಚಿಲ್ಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂಜನಗೂಡಿನ ಚಿಲಕಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೈಸೂರಿನ ಕಿರಾಳುವಿನ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ, ಹೆಚ್.ಡಿ.ಕೋಟೆಯ ಹಳೇ ಯೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕರ ಹಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಇಟ್ನಣಾ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿರಿಯಾ ಪಟ್ಟಣದ ಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ, ಕೆ.ಆರ್.ನಗರದ ಅಂಕನ ಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆಗೆ ಹಸಿರು ಶಾಲೆ ಪ್ರಶಸ್ತಿಗೆ ವಿತರಿಸಲಾಯಿತು.

ಹಳದಿ ಶಾಲೆ ಪ್ರಶಸ್ತಿ: ಕೆ.ಆರ್.ನಗರದ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆ, ಬಸ ವನಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹುಣಸೂರು ಕೆರಗಲ ಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಿರಿಯಾಪಟ್ಟಣದ ಬೆಕ್ಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಚ್.ಡಿ. ಕೋಟೆಯ ಅಣ್ಣೂರು ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸೊಳ್ಳೇಪುರ ಹಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬನ್ನವಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೈಸೂ ರಿನ ದೊಡ್ಡಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೇರ್ಗಳ್ಳಿಯ ಕಸ್ತೂರ ಬಾ ಗಾಂಧಿ ಬಾಳಿಕ ವಿದ್ಯಾಲಯ, ಹೆಚ್.ಡಿ.ಕೋಟೆಯ ಸರ್ಕಾರಿ ಪ್ರೌಢ ಶಾಲೆಗೆ ಹಳದಿ ಪ್ರಶಸ್ತಿ ನೀಡಲಾಯಿತು.

Translate »