ನನ್ನ ಗೆಲುವಿಗೆ ಸಹಕರಿಸಿ: ಪ್ರತಾಪ್ ಸಿಂಹ
ಮೈಸೂರು

ನನ್ನ ಗೆಲುವಿಗೆ ಸಹಕರಿಸಿ: ಪ್ರತಾಪ್ ಸಿಂಹ

April 9, 2019

ಮೈಸೂರು: ಕಳೆದ ಬಾರಿ ಯಂತೆ ಈ ಸಲವೂ ಬೆಂಬಲ ನೀಡಿ ನನ್ನ ಗೆಲುವಿಗೆ ಸಹಕರಿಸಿ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ನಾಯಕ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಮುಖಂಡರಿಗೆ ಮನವಿ ಮಾಡಿದ್ದಾರೆ.

ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ನೂತನ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಳವಾರ ಮತ್ತು ಉಪ್ಪಾರ ಸಮುದಾಯಗಳನ್ನು ಎಸ್ಟಿಗೆ ಸೇರಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಬಗ್ಗೆ ನಾನು ಸಂಸತ್ತಿನಲ್ಲಿ ಧನಿ ಎತ್ತಿ ಒಪ್ಪಿಗೆ ಸೂಚಿಸಲು ಶ್ರಮಿಸಿದ್ದೇನೆ ಎಂದರು.

ಮತ್ತೆ ಗೆದ್ದು ಬಂದಲ್ಲಿ ಸಂಸತ್ತಿನ ಮೊದಲ ಅಧಿವೇಶನದಲ್ಲೇ ಈ ಬೇಡಿಕೆ ಗೆಜೆಟ್ ಆಗಿ ಹೊರಬರಲು ಶತ ಪ್ರಯತ್ನ ಮಾಡು ತ್ತೇನೆ ಎಂದ ಪ್ರತಾಪ್ ಸಿಂಹ, ಕಳೆದ ಬಾರಿ ತಾವು ನನ್ನ ಬೆನ್ನಿಗೆ ನಿಂತು ಸಹ ಕರಿಸಿದ್ದರಿಂದ ಈ ಕೆಲಸ ಮಾಡಲು ಸಾಧ್ಯ ವಾಯಿತು ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೀನ ದಲಿತರು, ಹಿಂದು ಳಿದ ವರ್ಗ ಮತ್ತು ಅಲ್ಪ ಸಂಖ್ಯಾತರಿಗಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ನೀಡಿದೆ. ಬಾಕಿ ಉಳಿದಿರುವ ಕೆಲಸವನ್ನೂ ಪೂರ್ಣಗೊಳಿಸಬೇಕಾಗಿರುವುದರಿಂದ ನಿಮ್ಮ ಸಹಕಾರ ಅಗತ್ಯ ಎಂದು ಅವರು ಮನವಿ ಮಾಡಿದರು. ಕಳೆದ ಚುನಾವಣೆ ಯಲ್ಲಿ ನಾನು ಮೈಸೂರಿನ ಅಭ್ಯರ್ಥಿ ಯಾದಾಗ ಹೆಚ್ಚು ಸಹಕಾರ ನೀಡಿ ಗೆಲು ವಿಗೆ ಕಾರಣವಾಗಿದ್ದು ಹಿಂದುಳಿದ ವರ್ಗ. ನರೇಂದ್ರ ಮೋದಿ ಸಹ ಹಿಂದುಳಿದ ಸಮುದಾಯದಿಂದ ಬಂದವರು. ಅವರ ವಿದೇಶಾಂಗ ನೀತಿ, ರೈತಪರ ಕೆಲಸ, ಯುವ ಸಮುದಾಯದ ವಿದ್ಯಾಭ್ಯಾಸಕ್ಕೆ ನೀಡಿದ ಕಾರ್ಯಕ್ರಮಗಳನ್ನು ಮನಗಂಡು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ತಮ್ಮ ಮತ ನೀಡಿ ಎಂದು ಪ್ರತಾಪ್ ಸಿಂಹ ಕೋರಿಕೊಂಡರು.

ಬಿಜೆಪಿ ಸಂಚಾಲಕ ಡಾ. ವಾಮನಾ ಚಾರ್ಯ, ಮಾಜಿ ಶಾಸಕ ಮಾರುತಿ ರಾವ್ ಪವಾರ್, ಮುಖಂಡರಾದ ಶಿವಕುಮಾರ್, ಚಿಕ್ಕಮ್ಮ ಬಸವರಾಜು, ಕಮಲಮ್ಮ ಭಾಸ್ಕರ್, ಜೋಗಿ ಮಂಜು, ರಮೇಶ್, ರಘು, ಬಿ.ಎಂ.ರವಿತೇಜ, ಪಾಪಣ್ಣ, ಶಾಂತಮ್ಮ ಸೇರಿದಂತೆ ಹಲ ವರು ಸಭೆಯಲ್ಲಿ ಭಾಗವಹಿಸಿದ್ದರು.

Translate »