ಪೆನ್ಸಿಲ್ ಗ್ರಾಫೈಟ್‍ನ ತುದಿಯಲ್ಲಿ  ಅರಳಿದ ಪ್ರಧಾನಿ ಮೋದಿ ಮುಖ
ಮೈಸೂರು

ಪೆನ್ಸಿಲ್ ಗ್ರಾಫೈಟ್‍ನ ತುದಿಯಲ್ಲಿ ಅರಳಿದ ಪ್ರಧಾನಿ ಮೋದಿ ಮುಖ

April 9, 2019

ಮೈಸೂರು,: ಪೆನ್ಸಿಲ್ ಗ್ರಾಫೈಟ್ (ಲೆಡ್)ನಲ್ಲಿ ಸೂಕ್ಷ್ಮ ನರೇಂದ್ರ ಮೋದಿ ಅವರ ಮುಖವನ್ನು ರೂಪಿಸಿದ್ದು, ಮಂಗಳವಾರ ಮೈಸೂರಿಗೆ ಆಗಮಿಸಲಿ ರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲು ಆಶಿಸಿದ್ದಾರೆ.

ಮೈಸೂರಿನ ಮೈಕ್ರೋ ಆರ್ಟ್ (ಸೂಕ್ಷ್ಮ ಕಲೆ) ಕಲಾವಿದ ನಂಜುಂಡ ಸ್ವಾಮಿ 6 ಇಂಚಿನ ಪೆನ್ಸಿಲ್‍ನಲ್ಲಿ ಮೋದಿ ಮುಖ ರೂಪಿಸಿದ್ದಾರೆ. ಪೆನ್ಸಿಲ್‍ನ ತುದಿಯಲ್ಲಿ ಸ್ಪಷ್ಟವಾಗಿ ನರೇಂದ್ರ ಮೋದಿಯವರ ಮುಖ ರಚಿಸಿದ್ದಾರೆ.

ಇದನ್ನು ಮೋದಿಯ ವರಿಗೆ ನೀಡಲು ಶಾಸಕ ಎಸ್.ಎ.ರಾಮ ದಾಸ್ ಅವರ ಮೂಲಕ ಪೊಲೀಸರ ಅನು ಮತಿ ಕೋರಿದ್ದಾರೆ. ಕೇವಲ 2.5 ಗಂಟೆಯ ಅವಧಿಯಲ್ಲಿ ಇದನ್ನು ರಚಿಸಿದ್ದು, ಇದರಲ್ಲಿ ಮೋದಿಯವರ ಮುಖದ ಜೊತೆಗೆ ನರೇಂದ್ರ ಮೋದಿ ಎಂದು ಕನ್ನಡದಲ್ಲಿ ಅವರ ಹೆಸ ರನ್ನು ಸಹ ರಚಿಸಿದ್ದಾರೆ. ತಮ್ಮ ಕಲಾ ಪ್ರೌಢಿಮೆ ಮೂಲಕ 20.12.2015ರಲ್ಲಿಯೇ ಇದನ್ನು ರಚಿಸಿ ಇಟ್ಟುಕೊಂಡಿದ್ದ ಅವರು ಮೋದಿಯವರಿಗೆ ನೀಡಬೇಕೆಂಬ ಆಶಯ ದೊಂದಿಗೆ ಕಳೆದ ಬಾರಿ ಮೋದಿಯವರು ಮೈಸೂರಿಗೆ ಬಂದಿದ್ದಾಗ ನೀಡಲು ಪ್ರಯ ತ್ನಿಸಿದರಾದರೂ ಭದ್ರತೆ ದೃಷ್ಟಿಯಿಂದ ಅದು ಸಾಧ್ಯವಾಗಿರಲಿಲ್ಲ. ಟ್ವಿಟರ್ ಮೂಲ ಕವೂ ಮೋದಿಯವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನವೂ ವಿಫಲವಾಗಿತ್ತು.

ಹೀಗಾಗಿ ಮೋದಿ ಮಂಗಳವಾರ ಮೈಸೂ ರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹೇಗಾದರೂ ಮೋದಿಯವರಿಗೆ ತಮ್ಮ ಮಹತ್ವಾಕಾಂಕ್ಷಿ ಕಲಾ ಕೌಶಲ್ಯವನ್ನು ನೀಡಲೇ ಬೇಕು ಎಂಬ ಉದ್ದೇಶದಿಂದ ಅವರು ಶಾಸಕ ರಾಮದಾಸ್ ಅವರನ್ನು ಸಂಪ ರ್ಕಿಸಿದರು. ನರೇಂದ್ರ ಮೋದಿಯವರಿಗೆ ಭದ್ರತೆ ಇರುವ ಹಿನ್ನೆಲೆಯಲ್ಲಿ ಅದನ್ನು ಅವರಿಗೆ ತಲುಪಿಸಲು ಪೊಲೀಸರ ಅನು ಮತಿ ಅಗತ್ಯವಿದ್ದು, ದೊರೆಯುವ ಸಾಧ್ಯತೆ ಇದೆ ಎಂದು ನಂಜುಂಡಸ್ವಾಮಿ ಭರವಸೆ ಹೊಂದಿದ್ದಾರೆ.

Translate »