ಮೋದಿ ಜೊತೆ ಸೆಲ್ಫಿಗೆ ವ್ಯವಸ್ಥೆ
ಮೈಸೂರು

ಮೋದಿ ಜೊತೆ ಸೆಲ್ಫಿಗೆ ವ್ಯವಸ್ಥೆ

April 9, 2019

ಮೈಸೂರು: ಮಂಗಳವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಪ್ರಚಾರ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆಯ ಸಿದ್ಧತೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇದಿಕೆಯ ಬಲಭಾಗದಲ್ಲಿ ಒಂದು ಪ್ರತ್ಯೇಕ ಸೆಲ್ಫಿ ಜೋನ್ ಮಾಡಿ, ಅಲ್ಲಿ ಅಭಿಮಾನಿಗಳು ಮೋದಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅನುಕೂಲ ಮಾಡಿಕೊಡಲು ಚಿಂತನೆ ಮಾಡಲಾಗಿದ್ದು, ಇದು ವಿಶೇಷ ಆಕರ್ಷಣೆಯಾಗಿದೆ ಎಂದರು.

ಕೇಂದ್ರ ಸರ್ಕಾರದ ವಿಶೇಷ ಯೋಜನೆಗಳ ಫಲಾನುಭವಿಗಳು ರ್ಯಾಲಿಯಲ್ಲಿ ಭಾಗವಹಿಸಲಿದ್ದು, ಅವರಿಗೆ ಪ್ರತ್ಯೇಕ ಎನ್‍ಕ್ಲೋಸರ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರಧಾನಮಂತ್ರಿಗಳ ಸ್ವಚ್ಛ ಭಾರತ್ ಯೋಜನೆಯಲ್ಲಿ ಭಾಗಿಗಳಾಗಿ ರುವ ಪೌರಕಾರ್ಮಿಕರು, ಉಜ್ವಲ, ಪ್ರಧಾನಮಂತ್ರಿಗಳ ಆವಾಸ್, ಜನೌಷಧ್, ಆಯುಷ್ಮಾನ್ ಭಾರತ್, ತ್ರಿಬಲ್ ತಲಾಖ್, ಕಿಸಾನ್ ಸಮ್ಮಾನ್ ಯೋಜನೆಗಳ ಫಲಾನುಭವಿಗಳು, ಅಸಂಘ ಟಿತ ಕಾರ್ಮಿಕರು ಹಾಗೂ ಮೊದಲ ಸಲ ಮತದಾನ ಮಾಡುತ್ತಿರುವ ಯುವ ಮತದಾ ರರು ಸಾವಿರಾರು ಸಂಖ್ಯೆಯಲ್ಲಿ ಮೋದಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಪ್ರತಾಪ್ ಸಿಂಹ ಮಾತನಾಡಿ, 5 ವರ್ಷ ದಲ್ಲಿ ಮೈಸೂರು ಭಾಗಕ್ಕೆ ನೀಡಿರುವ ಹಲವು ಅಭಿವೃದ್ಧಿ ಯೋಜನೆ, ಮುಂದೆ ಮಾಡಲು ದ್ದೇಶಿಸಿರುವ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿಗಳು ರ್ಯಾಲಿಯಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯನ್ನು ಸಹಿಸಲಾರದ ಕಾಂಗ್ರೆಸ್‍ನವರು ಭಯದಿಂದ ಅನಗತ್ಯ ಹೇಳಿಕೆ ನೀಡಿ ಪುಕ್ಕಲುತನ ಪ್ರದರ್ಶಿಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿಜೆಪಿ ಮುಖಂಡ ಡಾ. ವಾಮನಾಚಾರ್ಯ ಮಾತನಾಡಿ, ಮೋದಿ ಅವರು ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಮಮಂದಿರ ನಿರ್ಮಾಣ, ಕಾಶ್ಮೀರದಲ್ಲಿ 370ನೇ ವಿಧಿ ರದ್ದು, 35ಎ ಕಾಯ್ದೆ ಮೂಲಕ ಆಸ್ತಿ ಖರೀದಿ ತೊಂದರೆ ನಿವಾರಣೆ, ಹೊಸ ನೀರಾವರಿ ಯೋಜನೆಗಳಿಗೆ ಅನುದಾನ, ಪ್ರತೀ ಮನೆಗೂ ವಿದ್ಯುತ್, ನೀರು, ಎಲ್‍ಪಿಜಿ ಅನಿಲ, ಎಲ್ಲರಿಗೂ ಬ್ಯಾಂಕ್ ಖಾತೆ, ಎಲ್ಲಾ ರೈಲುಗಳ ಎಲೆಕ್ಟ್ರಿಫಿಕೇಷನ್ ಸೇರಿದಂತೆ ಮುಂದೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ ಎಂದರು. ಹೆಚ್.ವಿ.ರಾಜೀವ್, ಜಯಪ್ರಕಾಶ್, ಪ್ರಭಾಕರ್ ಸಿಂಧ್ಯಾ ಸೇರಿದಂತೆ ಹಲವು ಬಿಜೆಪಿ ಮುಖಂಡರು ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿ ರ್ಯಾಲಿಯ ‘ಅಭಿವೃದ್ಧಿ ವೇದಿಕೆ’ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು.

Translate »