ನೆರೆ ಪರಿಹಾರಕ್ಕೆ ಮುಖ್ಯಮಂತ್ರಿ ಮೊರೆ ಮೋದಿ ಮೌನ
ಮೈಸೂರು

ನೆರೆ ಪರಿಹಾರಕ್ಕೆ ಮುಖ್ಯಮಂತ್ರಿ ಮೊರೆ ಮೋದಿ ಮೌನ

January 3, 2020

ತುಮಕೂರು,ಜ.2-ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 115 ವರ್ಷಗಳಲ್ಲಿ ಕಾಣದಂತಹ ಬರ ಮತ್ತು ನೆರೆ ಪರಿಸ್ಥಿತಿ ಉಂಟಾಗಿದ್ದು, ಅದರ ಪರಿಹಾರವಾಗಿ 50 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೇದಿಕೆಯಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಮಾಡಿದರು. ಆದರೆ ಸಿಎಂ ಮನವಿಗೆ ಸ್ಪಂದಿಸದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಯಾವುದೇ ಭರವಸೆ ನೀಡಲಿಲ್ಲ.

ತುಮಕೂರಿನಲ್ಲಿ ನಡೆದ ರೈತ ಸಮಾವೇಶದಲ್ಲಿ ಪಾಲ್ಗೊಂ ಡಿದ್ದ ಯಡಿಯೂರಪ್ಪ, ತೀವ್ರ ಮಳೆ ಮತ್ತು ನೆರೆ ಹಾವಳಿ ಯಿಂದ 600ರಿಂದ 700 ಗ್ರಾಮಗಳು ಜಲಾವೃತಗೊಂಡು 3 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಒಟ್ಟಾರೆ ಸುಮಾರು 30 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ಇದನ್ನು ಸರಿಪಡಿ ಸಲು ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಬೇಕೆಂದು ಈ ಹಿಂದೆಯೇ ಮನವಿ ಮಾಡಿದ್ದರೂ ಅದಕ್ಕೆ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಶೀಘ್ರ ಅನುದಾನ ಬಿಡುಗಡೆಗೊಳಿಸ ಬೇಕು ಎಂದು ಇಂದು ಮತ್ತೊಮ್ಮೆ ಮನವಿ ಮಾಡಿದರು. ರಾಜ್ಯದಲ್ಲಿ 1960ರಲ್ಲಿ ಆರಂಭಗೊಂಡ ನೀರಾವರಿ ಯೋಜನೆ ಗಳು ಅಪೂರ್ಣಗೊಂಡಿದ್ದು. ಅವುಗಳನ್ನು ಮುಂದಿನ 3 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು. ಕಿಸಾನ್ ಸಮ್ಮಾನ್ ಯೋಜನೆಯ 3ನೇ ಕಂತಿನ ಚಾಲನೆಗೆ ಮೋದಿ ಅವರು ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದು ನಮಗೆ ಹೆಮ್ಮೆ ತಂದಿದೆ. ಅವರು 2023ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ಸಂಕಲ್ಪ ವನ್ನು ಮಾಡಿದ್ದಾರೆ. ರೈತರಿಗೆ ಪೆÇ್ರೀತ್ಸಾಹ ಬೆಲೆ, ವೈಜ್ಞಾನಿಕ ಬೆಲೆ, ನೀರಾವರಿಗೆ ಆದ್ಯತೆ ನೀಡಿದರೆ ಮಾತ್ರ ಅದು ಸಾಧ್ಯ. ಕೇಂದ್ರ ಸರ್ಕಾರ ನದಿ ಜೋಡಣೆಗೂ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಬಿಎಸ್‍ವೈಗೆ ಮತ್ತೆ ನಿರಾಸೆ: ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ವಿವರಿಸಿ, ಬಗೆಹರಿಸುವಂತೆ ಮನವಿ ಮಾಡಲು ರಾಜ ಭವನಕ್ಕೆ ರಾತ್ರಿ ತೆರಳಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ಆಗಿದೆ. ಪ್ರಧಾನಿ ಮೋದಿ ಭೇಟಿಗೆ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ರಾಜಭವನಕ್ಕೆ ತೆರಳಿದ್ದರು. ಆದರೆ, ಸಿಎಂ ಬಿಎಸ್‍ವೈ ನೇತೃತ್ವದ ನಿಯೋಗ ಭೇಟಿಗೆ ಪ್ರಧಾನಿ ಮೋದಿ ಅವಕಾಶ ವನ್ನೇ ನೀಡಲಿಲ್ಲ. ನಿಯೋಗ ಬರುವ ಮುನ್ನವೇ ಮೋದಿ ಅವರು ವಿಶ್ರಾಂತಿಗೆ ತೆರಳಿದ್ದರು. ಹೀಗಾಗಿ ಪ್ರಧಾನಿ ಭೇಟಿಗೆ ಭದ್ರತಾ ಸಿಬ್ಬಂದಿ ಬಿಡಲಿಲ್ಲ. ಆದ್ದರಿಂದ ಬಿಎಸ್‍ವೈ ನಿಯೋಗ ರಾಜಭವನದಿಂದ ವಾಪಸ್ಸಾಯಿತು. ಮಹದಾಯಿ ವಿವಾದ ವಿಚಾರ, ಮೇಕೆದಾಟು ವಿಚಾರ, ಕಾವೇರಿ ನದಿ ನೀರು ಹಂಚಿಕೆ ವಿಚಾರ, ಅತಿವೃಷ್ಟಿಯಿಂದಾದ ಹಾನಿ ಪರಿಹಾರಕ್ಕೆ ಹೆಚ್ಚಿನ ವಿಶೇಷ ಅನುದಾನ ಬಿಡುಗಡೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲು ಸಿಎಂ ಬಿಎಸ್‍ವೈ ನಿರ್ಧರಿಸಿದ್ದರು. ಅದಕ್ಕಾಗಿ 10 ದಿನಗಳ ಹಿಂದೆಯೇ ಪಿಎಂ ಭೇಟಿ ವೇಳೆ ಚರ್ಚಿಸಬೇಕಾದ ವಿಚಾರಗಳ ಮಾಹಿತಿಯನ್ನು ಸಿಎಂ ಬಿಎಸ್‍ವೈ ಸಿದ್ದಪಡಿಸಿಕೊಂಡು, ಇಂದು ವರದಿಯೊಂದಿಗೆ ತೆರಳಿದ್ದರು. ಆದರೆ, ಭೇಟಿಗೆ ಪ್ರಧಾನಿ ಅವರೇ ಸಿಗಲಿಲ್ಲ. ಡಿಆರ್‍ಡಿಒ ಕಾರ್ಯಕ್ರಮ ಮುಗಿಸಿ ಪ್ರಧಾನಿ ಅವರ ಕಾರಿನಲ್ಲಿ ಬಿಎಸ್‍ವೈ ಒಟ್ಟಿಗೆ ಆಗಮಿಸಿದ್ದರು. ಬಳಿಕ ರಾಜಭವನಕ್ಕೆ ಬರುತ್ತಿದ್ದಂತೆ ರಾಜ್ಯಪಾಲರು ಪ್ರಧಾನಿಯನ್ನು ಸ್ವಾಗತಿಸಿದರು. ನಂತರ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರು ಕೆಲಕಾಲ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದರು. ಈ ವೇಳೆ ಸಿಎಂ ಬಿಎಸ್‍ವೈ ಬೇರೊಂದು ಕೊಠಡಿಯಲ್ಲಿ ಕಾದು ಕುಳಿತಿದ್ದರು. ನಂತರ ಪಿಎಂ ಭೇಟಿಗೆ ಅವಕಾಶ ಸಾಧ್ಯವಿಲ್ಲ ಎಂದು ಎಸ್‍ಪಿಜಿ ಸಿಬ್ಬಂದಿ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ. 20 ನಿಮಿಷ ಕಾದು ನಂತರ ಸಿಎಂ ತಮ್ಮ ಮನೆಗೆ ವಾಪಸ್ಸಾದರು.

Translate »