ಪೌರತ್ವ ತಿದ್ದುಪಡಿ ಕಾಯ್ದೆ ನಿರಾಶ್ರಿತರಿಗೆ ವರದಾನ
ಮೈಸೂರು

ಪೌರತ್ವ ತಿದ್ದುಪಡಿ ಕಾಯ್ದೆ ನಿರಾಶ್ರಿತರಿಗೆ ವರದಾನ

December 23, 2019

ನವÀದೆಹಲಿ,ಡಿ.22- ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯು ಭಾರತದ ಆಶ್ರಯ ಅರಸಿ ಬಂದಿರುವ ಶೋಷಿತರನ್ನು ದೇಶದ ನಾಗರಿಕ ರೊಂದಿಗೆ ಒಳಗೊಳ್ಳುವಂತೆ ಮಾಡುವುದಾಗಿ ದೆಯೇ ಹೊರತು, ದೇಶದ ಯಾವೊಬ್ಬ ಪ್ರಜೆ ಯನ್ನೂ ಹೊರದೂಡುವುದಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ಇಡೀ ದಿನ ನಡೆದ `ಧನ್ಯವಾದ ಬೃಹತ್ ಸಮಾವೇಶ’ದಲ್ಲಿ ಒಂದೂವರೆ ತಾಸಿಗೂ ಅಧಿಕ ಸಮಯ ಭಾಷಣ ಮಾಡಿದ ಅವರು, ಎರಡು ದಿನಗಳ ಹಿಂದೆಯಷ್ಟೇ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಸಾಮಾನ್ಯರಲ್ಲಿರುವ ಗೊಂದಲ ಗಳನ್ನು ಹೋಗಲಾಡಿಸಲು ಸಾಕಷ್ಟು ಸಮಯವನ್ನು ಮೀಸಲಿಟ್ಟರು. ವಿರೋಧ ಪಕ್ಷಗಳು ನೂತನ ಕಾಯ್ದೆಯ ಬಗ್ಗೆ ಜನರಲ್ಲಿ ಭ್ರಮೆ ಉಂಟು ಮಾಡಿವೆ ಎಂದು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ಸೇರಿದಂತೆ ವಿವಿಧ ಪಕ್ಷಗಳ ವಿರುದ್ಧ ಕಿಡಿಕಾರಿದರು.

ನೆರೆಯ ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನ ದಲ್ಲಿ ಅಲ್ಪಸಂಖ್ಯಾತರಾಗಿದ್ದು, ಸತತ ಶೋಷಣೆ ಗೊಳಗಾಗಿರುವ, ಆಶ್ರಯ ಅರಸಿ ವರ್ಷ ಗಳ ಹಿಂದೆಯೇ ಭಾರತಕ್ಕೆ ಬಂದಿರುವ ಹಿಂದೂ, ಜೈನ, ಸಿಖ್, ಬೌದ್ಧ, ಕ್ರೈಸ್ತ, ಪಾರ್ಸಿ ಸಮುದಾಯದವರಿಗೆ ಗೌರವದ ಬದುಕು ಕಲ್ಪಿಸಿಕೊಡಲಿದೆ. ಆ ನಿರಾಶ್ರಿತರಲ್ಲಿನ ದೀನ ದಲಿತರು, ಬಡವರ್ಗದವರ ಉದ್ಧಾರವಾಗ ಲಿದೆ. ಆದರೆ ಕೆಲವು ರಾಜಕೀಯ ಪಕ್ಷಗಳು ಇಂಥ ಮಾನವೀಯ ಕಾಯ್ದೆ ಬಗೆಗೇ ವದಂತಿಗಳನ್ನು ಹಬ್ಬಿಸುತ್ತಿವೆ ಎಂದು ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದರು.

ಕಳೆದ ಸಂಸತ್ತಿನ ಚಳಿಗಾಲ ಅಧಿವೇಶನ ದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅನು ಮೋದಿಸಲಾಗಿದೆ. ಸಂಸತ್ತಿನ ಎರಡೂ ಸದನ ಗಳಲ್ಲಿ ಅನುಮೋದನೆಯಾಗಿ ಕಾಯ್ದೆಯಾಗಿ ಜಾರಿಗೆ ಬಂದಿದ್ದು, ಜನರ ತೀರ್ಪನ್ನು ಮತ್ತು ಸಂಸತ್ತನ್ನು ಎಲ್ಲರೂ ಗೌರವಿಸಬೇಕು ಎಂದರು.

ಭಾಷಣದ ಆರಂಭದಲ್ಲಿಯೇ `ವಿವಿಧತೆ ಯಲ್ಲಿ ಏಕತೆ; ಭಾರತದ ವಿಶೇಷತೆ’ ಎಂಬ ಘೋಷಣೆಯನ್ನು
ಮೊಳಗಿಸಿದ ಪ್ರಧಾನಿ ಮೋದಿ, ಸಭಿಕರಿಂದಲೂ ಹಲವು ಬಾರಿ ಪುನರುಚ್ಚಾರಗೊಳಿಸಿ ದರು. ಆ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವವರಿಗೆ ಚಾಟಿ ಬೀಸಿದರು. ಬ್ರಿಟಿಷರು ಭಾರತವನ್ನು ಒಡೆದರು. ಇದೀಗ ಕಾಂಗ್ರೆಸ್ ಹಿಂದೂ ಮುಸ್ಲಿಂ ಸಮುದಾಯವನ್ನು ಒಡೆಯುತ್ತಿದೆ ಎಂದು ಟೀಕಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನೊಂದ ಜನರ ಒಳಿತಿಗಾಗಿ ಮಾಡಲಾಗಿದೆಯೇ ಹೊರತು, ಯಾರಿಗೂ ತೊಂದರೆ ಮಾಡುವುದಕ್ಕಲ್ಲ ಎಂದು ಸ್ಪಷ್ಟಪಡಿಸಿದ ಪ್ರಧಾನಿ, ಕಾಯ್ದೆಯನ್ನು ವಿರೋಧಿಸುವ ಭರದಲ್ಲಿ ಜನರನ್ನು ಪ್ರಚೋದಿಸಲಾಗುತ್ತಿದೆ. ಜವಾಬ್ದಾರಿ ಯುತ ಸ್ಥಾನದಲ್ಲಿರುವವರು ನಕಲಿ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳತ್ತ ಕಿಡಿಕಾರಿದರು. 1947ರಲ್ಲಿ ದೇಶ ವಿಭಜನೆಯಾದಾಗ ಪಾಕಿಸ್ತಾನದಲ್ಲಿ ರುವ ಹಿಂದೂ, ಸಿಖ್ಖರು ಭಾರತಕ್ಕೆ ಬರಬಹುದು ಎಂದು ಮಹಾತ್ಮಗಾಂಧಿಯೇ ಹೇಳಿದ್ದರು. ಅವರ ಮಾತನ್ನೇ ನಾವು ಈಗ ಜಾರಿಗೊಳಿಸಿದ್ದೇವೆ ಎಂದರು.

ಕೆಲವು ರಾಜಕೀಯ ಪಕ್ಷಗಳು ಕಾಯ್ದೆ ಕುರಿತು ವದಂತಿಗಳನ್ನು ಹರಡುತ್ತಾ ಜನರನ್ನು ದಾರಿ ತಪ್ಪಿಸುತ್ತಿವೆ. ದೇಶದಲ್ಲಿ ಭೀತಿಯ ಮತ್ತು ಅವ್ಯವಸ್ಥೆಯ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿವೆ. ಅಲ್ಲದೇ, ವಿದೇಶದಲ್ಲೂ ಭಾರತದ ಹೆಸರನ್ನು ಹಾಳುಗೆಡವುವ ಯತ್ನವನ್ನು ನಡೆಸಿವೆ ಎಂದು ಕಾಂಗ್ರೆಸ್‍ನತ್ತ ಬೆಟ್ಟು ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಧರ್ಮದ ಹೆಸರಿನಲ್ಲಿ ದೇಶವನ್ನು ಆಳುತ್ತಿಲ್ಲ. ಯೋಜನೆಗಳನ್ನು ಅನುಷ್ಠಾನ ಗೊಳಿಸುವಾಗ ಧರ್ಮದ ಆಧಾರದಲ್ಲಿ ಜಾರಿಗೊಳಿಸುವುದಿಲ್ಲ. ಆದರೆ ಕೆಲವು ರಾಜಕೀಯ ಪಕ್ಷಗಳ ಮುಖಂಡರು ಸುಳ್ಳು ಹೇಳುತ್ತಾ ಜನರ, ಅದರಲ್ಲೂ ಮುಸ್ಲಿಮರ ದಾರಿ ತಪ್ಪಿಸುತ್ತಿದ್ದಾರೆ ಎಂದರು. ವಿಶ್ವದ ಮುಸ್ಲಿಂ ರಾಷ್ಟ್ರಗಳು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಆ ದೇಶಗಳೊಂದಿಗೆ ಭಾರತದ ಸಂಬಂಧ ಗಟ್ಟಿಗೊಳ್ಳುತ್ತಿದೆ. ಅಲ್ಲಿನ ಮುಸ್ಲಿಂ ಜನತೆ ಭಾರತವನ್ನು ಮತ್ತು ನನ್ನನ್ನು ಪ್ರೀತಿಸುತ್ತಾರೆ. ಇದು ಇಲ್ಲಿನ ದೇಶವಿರೋಧಿ ಶಕ್ತಿಗಳ ಕಣ್ಣು ಕೆಂಪಾಗಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶಾದ್ಯಂತ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ, ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಮಿತಿ ಮೀರಿದ ಹಿಂಸಾಚಾರ ಹತ್ತಿಕ್ಕಲು ಪ್ರತಿಭಟನಕಾರರ ಮೇಲೆ ಪೆÇಲೀಸರು ಅನಿವಾರ್ಯವಾಗಿ ಲಾಠಿ ಚಾರ್ಜ್ ಹಾಗೂ ಬಲಪ್ರಯೋಗ ನಡೆಸಿದ್ದನ್ನು ಸಮರ್ಥಿಸಿಕೊಂಡರು.

ಪೌರತ್ವ ತಿದ್ದುಪಡಿ ಮಸೂದೆಗೆ ಅಭೂತಪೂರ್ವ ಬೆಂಬಲ
ನವದೆಹಲಿ, ಡಿ.22-ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶದ ಜನರು ಬೆಂಬ ಲಿಸಿದ್ದಾರೆ. ಸಿ-ವೋಟರ್ ಮತ್ತು ಐಎಎನ್‍ಎಸ್ ನಡೆಸಿದ ಸಮೀಕ್ಷೆಯಲ್ಲಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ದಲ್ಲಿ ಗೊಂದಲವೇರ್ಪಟ್ಟು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಈ ವೇಳೆಯಲ್ಲಿ ಡಿ.17-19ರ ಅವಧಿಯಲ್ಲಿ ಸಿ-ವೋಟರ್ಸ್ ಮತ್ತು ಐಎಎನ್‍ಎಸ್ ಜಂಟಿಯಾಗಿ ವಿವಿಧ ಪ್ರಶ್ನೆಗಳನ್ನು ಹೊಂದಿದ್ದು, ಅಸ್ಸಾಂ, ಈಶಾನ್ಯ ರಾಜ್ಯ ಗಳು ಒಳಗೊಂಡಂತೆ ಮುಸ್ಲಿಂ ಸಮು ದಾಯದವರೂ ಸೇರಿದಂತೆ ಜನಾಭಿ ಪ್ರಾಯವನ್ನು ಸಂಗ್ರಹಿಸುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸಮೀಕ್ಷೆ ನಡೆಸಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲವಿದೆ ಎಂದು ಶೇ.65ರಷ್ಟು ಜನ ತಿಳಿಸಿದ್ದರೆ, ಬೆಂಬಲವಿಲ್ಲ ಎಂದು ಶೇ.28 ರಷ್ಟು ಹಾಗೂ ಪ್ರತಿಕ್ರಿಯಿಸುವುದಿಲ್ಲ ಎಂದು ಶೇ.7ರಷ್ಟು ಜನ ತಿಳಿಸಿದ್ದಾರೆ. ಕಾಯ್ದೆ ಬಗ್ಗೆ ಗೊಂದಲ ಉಂಟು ಮಾಡಿರುವವರು ಯಾರು? ಎಂಬ ಪ್ರಶ್ನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿರೋಧ ಪಕ್ಷಗಳು ಎಂದು ಶೇ.29ರಷ್ಟು, ಮಾಧ್ಯಮಗಳು ಎಂದು ಶೇ.20ರಷ್ಟು, ಸರ್ಕಾರ ಎಂದು ಶೇ.37ರಷ್ಟು, ಹೇಳಲು ಕಷ್ಟ ಎಂದು ಶೇ.10ರಷ್ಟು, ಎಲ್ಲರೂ ಎಂದು ಶೇ.3ರಷ್ಟು, ಯಾರೂ ಇಲ್ಲ ಎಂದು ಶೇ.1ರಷ್ಟು ಜನ ತಿಳಿಸಿದ್ದಾರೆ.

ಕಾಯ್ದೆಯು ಮುಸ್ಲಿಮರ ವಿರುದ್ಧವಾಗಿ ಇಲ್ಲ ಎಂದು ಶೇ.56ರಷ್ಟು, ಮುಸ್ಲಿಮರ ವಿರುದ್ಧ ಎಂದು ಶೇ.32ರಷ್ಟು, ಮಾಹಿತಿ ಇಲ್ಲ ಶೇ.8ರಷ್ಟು, ಎಲ್ಲಾ ಜನರ ವಿರುದ್ಧ ಶೇ.4ರಷ್ಟು ಜನರು ಪ್ರತಿಕ್ರಿಯಿಸಿದ್ದಾರೆ.

Translate »