ಆರು ಕೋಟಿ ಅನ್ನದಾತರಿಗೆ 12 ಸಾವಿರ ಕೋಟಿ ಕೊಡುಗೆ
ಮೈಸೂರು

ಆರು ಕೋಟಿ ಅನ್ನದಾತರಿಗೆ 12 ಸಾವಿರ ಕೋಟಿ ಕೊಡುಗೆ

January 3, 2020

ತುಮಕೂರು, ಜ.2- ಸುಗ್ಗಿಯ ಸಂಭ್ರಮದಲ್ಲಿರುವ ರೈತ ಸಮುದಾಯಕ್ಕೆ ಪ್ರಧಾನಿ ನರೇಂದ್ರಮೋದಿ ಭರಪೂರ ಉಡುಗೊರೆ ನೀಡಿದ್ದು, ದೇಶದ 6 ಕೋಟಿ ಅನ್ನದಾತರ ಬ್ಯಾಂಕ್ ಖಾತೆಗಳಿಗೆ 12 ಸಾವಿರ ಕೋಟಿ ರೂ. ಜಮಾ ಮಾಡುವ ಯೋಜನೆಗೆ ಕಲ್ಪತರು ನಾಡು ತುಮಕೂರಿ ನಲ್ಲಿ ಚಾಲನೆ ನೀಡಿದರು.

ಸರ್ಕಾರಿ ಜೂನಿಯರ್ ಕಾಲೇಜು ಮೈದಾ ನದ ಬೃಹತ್ ವೇದಿಕೆಯಲ್ಲಿ ಬಟನ್ ಒತ್ತುವ ಮೂಲಕ ಏಕಕಾಲಕ್ಕೆ 6 ಕೋಟಿ ರೈತರ ಖಾತೆಗಳಿಗೆ ನೇರ ನಗದು ವರ್ಗಾ ವಣೆಗೆ ಚಾಲನೆ ನೀಡುತ್ತಿದ್ದಂತೆ ರೈತರ ಮುಖದಲ್ಲಿ ಮಂದಹಾಸ ಮೂಡಿ ಕರ ತಾಡನ ಮುಗಿಲು ಮುಟ್ಟಿತು.

ದೇಶದ ವಿವಿಧ ಭಾಗಗಳ ರೈತರಿಗೆ ನೇರ ಹಣ ವರ್ಗಾವಣೆ ಮಾಡುವ ಈ ಕ್ಷಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಹ್ಲಾದ್ ಜೋಷಿ, ನರೇಂದ್ರಸಿಂಗ್ ತೋಮರ್, ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳು ಸಾಕ್ಷಿಯಾದರು.

ದೇಶದ ಬೆನ್ನೆಲುಬು ರೈತರ ಆದಾಯ ಹೆಚ್ಚಿಸಿ ಅವರ ಬದುಕು ಸುಧಾರಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ, ಪ್ರತಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡುವ ಕೃಷಿ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಡಿ ಗರಿಷ್ಠ 5 ಎಕರೆ ಜಮೀನು ಹೊಂದಿರುವ ರೈತರಿಗೆ 6 ಸಾವಿರ ಹಣ ನೀಡಲಾಗುತ್ತಿತ್ತು. ನಂತರ ಈ ಯೋಜನೆಯನ್ನು ಜಮೀನು ಹೊಂದಿರುವ ಎಲ್ಲ ರೈತರಿಗೂ ವಿಸ್ತರಿಸ ಲಾಗಿತ್ತು. ಅದರಂತೆ ಪ್ರಧಾನಿ ಮೋದಿ ಅವರು 2ನೇ ಹಂತದ ಈ ಯೋಜನೆಗೆ ಚಾಲನೆ ನೀಡಿ 6 ಕೋಟಿ ರೈತರಿಗೆ ಈ ಯೋಜನೆಯ ಮೊದಲ ಕಂತಿನ 2 ಸಾವಿರ ಕೋಟಿ ರೂ.ಗಳನ್ನು ಜಮಾ ಮಾಡಿದ್ದಾರೆ.

ಈ ಯೋಜನೆಗೆ 2019 ಫೆ.24ರಂದು ಉತ್ತರಪ್ರದೇಶದ ಗೋರಕ್‍ಪುರದಲ್ಲಿ ಚಾಲನೆ ನೀಡಿ ಮೊದಲನೇ ಕಂತಿನ 2 ಸಾವಿರ ರೂ. ಗಳನ್ನು 1.10 ಕೋಟಿ ರೈತರ ಖಾತೆಗೆ ನೇರ ಜಮಾವಣೆ ಮಾಡಲಾಗಿತ್ತು. ನಂತರ 2ನೇ ಹಂತದ ಕಂತಾಗಿ 2 ಸಾವಿರ ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸಿದ ಕೇಂದ್ರ ಸರ್ಕಾರ, ಇಂದು ಈ ಆರ್ಥಿಕ ವರ್ಷದಲ್ಲಿ ಕೊನೆಯ ಕಂತಾಗಿ 6 ಕೋಟಿ ರೈತರಿಗೆ ಈ 2 ಸಾವಿರ ರೂ.ಗಳನ್ನು ವರ್ಗಾ ಯಿಸುವ ಮೂಲಕ ಈ ಆರ್ಥಿಕ ವರ್ಷ ದಲ್ಲಿ ಒಟ್ಟು 6 ಸಾವಿರ ರೂ.ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ. ಸುಗ್ಗಿ ಸಂಭ್ರ ಮದಲ್ಲಿರುವ ರೈತರಿಗೆ ಕೇಂದ್ರ ಭರಪೂರ ಉಡುಗೊರೆ ನೀಡಿದ್ದು, ಜನವರಿಯಲ್ಲಿ ಸುಗ್ಗಿ ಹಬ್ಬವನ್ನು ಮಕರ ಸಂಕ್ರಾಂತಿ, ಲೌರಿ, ಬಿಹು ಮತ್ತು ಪೆÇಂಗಲ್ ಹೀಗೆ ನಾನಾ ಹೆಸ ರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ರೈತರು ಆಚರಿಸಿ ಸಂಭ್ರಮಿಸುತ್ತಾರೆ. ಕೇಂದ್ರದ ಉಡು ಗೊರೆ ರೈತರ ಸುಗ್ಗಿ

ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಅಭೂತಪೂರ್ವ ಕ್ಷಣಕ್ಕೆ ಹಾಗೂ ಬೃಹತ್ ರೈತ ಸಮಾವೇಶಕ್ಕೆ ಸಾಕ್ಷಿಯಾಗಲು ರಾಜ್ಯದ ಗುಲ್ಬರ್ಗಾ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಹಾವೇರಿ, ಯಾದಗಿರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಮಂಡ್ಯ, ಹಾಸನ, ಕೋಲಾರ, ಚಿತ್ರುದುರ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬೆಳಿಗ್ಗೆಯಿಂದಲೇ ಸಾಗರೋಪಾದಿಯಲ್ಲಿ ರೈತರು ನಗರಕ್ಕೆ ಆಗಮಿಸಿದ್ದರು. ಕೇಂದ್ರ ಕೃಷಿ ಇಲಾಖೆಯ ಕಾರ್ಯಕ್ರಮ ಇದಾಗಿರುವುದರಿಂದ ರಾಜ್ಯದಾದ್ಯಂತ ರೈತರನ್ನು ಸಮಾರಂಭಕ್ಕೆ ಕರೆತರಲು ಸುಮಾರು 1 ಸಾವಿರಕ್ಕೂ ಅಧಿಕ ರಾಜ್ಯ ರಸ್ತೆ ಸಾರಿಗೆ ಬಸ್‍ಗಳನ್ನು ನಿಯೋಜನೆ ಮಾಡಲಾಗಿತ್ತು.

Translate »