ಪತಿ ಪರ ಅರ್ಪಿತಾ ಪ್ರತಾಪಸಿಂಹ ಪ್ರಚಾರ
ಮೈಸೂರು

ಪತಿ ಪರ ಅರ್ಪಿತಾ ಪ್ರತಾಪಸಿಂಹ ಪ್ರಚಾರ

April 13, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಬಿಜೆಪಿ ಮುಖಂಡರೊಂದಿಗೆ ಅರ್ಪಿತಾ ಪ್ರತಾಪ್ ಸಿಂಹ ಪ್ರಚಾರ ನಡೆಸಿದರು.

ಮೈಸೂರಿನ 23ನೇ ವಾರ್ಡ್ ವ್ಯಾಪ್ತಿಯ ಸುಬ್ಬರಾಯನ ಕೆರೆ ಸೋನಾ ಸ್ಟ್ರೀಟ್‍ನ ಮನೆ ಮನೆಗೆ ತೆರಳಿ ಮತಯಾಚಿಸಿದರು. ಈ ವೇಳೆ ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ಸಂಸದ ಪ್ರತಾಪ್ ಸಿಂಹ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಹಾಗೆಯೇ ಮತ್ತೆ ಮೋದಿಯವರನ್ನು ಪ್ರಧಾನಿಯನ್ನಾಗಿಸಲು ತಪ್ಪದೆ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಪರಮೇಶ್‍ಗೌಡ, ಭರತ್, ಪ್ರಮೋದ್, ಲಕ್ಷ್ಮಿ, ನಾಗೇಶ್, ಮಂಜುನಾಥ್, ಚರಣ್, ಜ್ಯೋತಿ, ಕೀರ್ತಿ, ಆನಂದ್ ಮತ್ತಿತರರು ಉಪಸ್ಥಿತರಿದ್ದರು.

Translate »