ಮೈಸೂರು

ಗೃಹಿಣಿಯ ಮಾಂಗಲ್ಯ ಸರ ಅಪಹರಣ

February 7, 2021

ಮೈಸೂರು,ಫೆ.6(ಎಸ್‍ಪಿಎನ್)-ಬೇಕರಿಯಲ್ಲಿ ತಿನಿಸು ಖರೀದಿಸಿ ಮನೆಗೆ ತೆರಳುತ್ತಿದ್ದ ಗೃಹಿಣಿಯ ಮಾಂಗಲ್ಯ ಸರ ಅಪಹರಿ ಸಿದ ಘಟನೆ ಮೈಸೂರಿನ ಚಾಮುಂಡಿ ಪುರಂ ಸರ್ಕಲ್ ಬಳಿ ಶನಿವಾರ ರಾತ್ರಿ 8 ಗಂಟೆಯಲ್ಲಿ ನಡೆದಿದೆ. ವಿದ್ಯಾರಣ್ಯ ಪುರಂನ 2ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆಯ ನಿವಾಸಿ, ಸಿವಿಲ್ ಇಂಜಿನಿಯರ್ ವಿಜಯರಾಯ ಅವರ ಪತ್ನಿ ಶ್ರದ್ದಾ(40) ಅವರು ಮನೆಯ ಸಮೀಪವಿರುವ ಬೇಕರಿಗೆ ರಾತ್ರಿ 8 ಗಂಟೆ ಸುಮಾರಿನಲ್ಲಿ ಹೋಗಿ ಹಿಂತಿರುಗುವ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಡಿಸಿಪಿ ಡಾ.ಸಿ.ಎನ್. ಪ್ರಕಾಶ್‍ಗೌಡ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಘಟನಾ ಸ್ಥಳಕ್ಕೆ ವಿದ್ಯಾರಣ್ಯಪುರಂ ಠಾಣೆಯ ಇನ್ಸ್‍ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »