ಗೌರಿ ಲಂಕೇಶ್ ಹತ್ಯೆ: ಆರೋಪಿ ನವೀನ್ ಕುಮಾರ್ ಪೊಲೀಸರು ಕಸ್ಟಡಿ 14 ದಿನ ವಿಸ್ತರಣೆ
ಮೈಸೂರು

ಗೌರಿ ಲಂಕೇಶ್ ಹತ್ಯೆ: ಆರೋಪಿ ನವೀನ್ ಕುಮಾರ್ ಪೊಲೀಸರು ಕಸ್ಟಡಿ 14 ದಿನ ವಿಸ್ತರಣೆ

June 12, 2018

ಬೆಂಗಳೂರು: ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕೆ.ಟಿ. ನವೀನ್ ಕುಮಾರ್‍ನ ಪೊಲೀಸ್ ಕಸ್ಟಡಿ ಅವಧಿಯನ್ನು 14 ದಿನಗಳವರೆಗೆ ವಿಸ್ತರಿಸಲಾಗಿದೆ.

ಗೌರಿ ಲಂಕೇಶ್ ಹತ್ಯೆ ಕೇಸಿನ ವಿಚಾ ರಣೆಯಲ್ಲಿ ಆರೋಪಿ ನವೀನ್ ಕುಮಾರ್ ನಿಂದ ಮಹತ್ವದ ವಿಚಾರಗಳು ಬೆಳಕಿಗೆ ಬರುತ್ತಿದ್ದು, ಆತನನ್ನು ಇನ್ನಷ್ಟು ವಿಚಾರಣೆ ಗೊಳಪಡಿಸಲು ಕಾಲಾವಕಾಶ ಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೂ 14 ದಿನಗಳ ಕಾಲ ಆತ ಪೊಲೀಸರ ವಶದಲ್ಲಿರಲಿದ್ದಾನೆ. ಗೌರಿ ಲಂಕೇಶ್ ಹತ್ಯೆ ಸಂಬಂಧ ಎಸ್‍ಐಟಿ ಅಧಿಕಾರಿ ಗಳು ವಶಕ್ಕೆ ಪಡೆದಿದ್ದ ಮದ್ದೂರಿನ ಕೆ.ಟಿ. ನವೀನ್‍ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಹತ್ಯೆಗೆ ಒಳಸಂಚು ರೂಪಿ ಸಿದ್ದ ಆರೋಪದಡಿ ಬಂಧಿಸಿದ್ದರು. ಆತನನ್ನು ಕಳೆದ ಫೆ.16ರಂದು ಬೆಂಗ ಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ನಾಡ ಪಿಸ್ತೂಲ್, ಪಾಯಿಂಟ್ 32 ರಿವಾಲ್ವರ್ ಐದು ಗುಂಡುಗಳನ್ನು ಜಪ್ತಿ ಮಾಡಿದ್ದರು.

Translate »