ಮೈಸೂರಿನಲ್ಲಿ ಸುಗಮ ಸಂಚಾರಕ್ಕೆ ಹಾಕಿದ ಬ್ಯಾರಿಕೇಡ್‍ಗಳಿಂದಲೇ ಅಪಾಯ ಬಂದೊದಗಿದೆ!
ಮೈಸೂರು

ಮೈಸೂರಿನಲ್ಲಿ ಸುಗಮ ಸಂಚಾರಕ್ಕೆ ಹಾಕಿದ ಬ್ಯಾರಿಕೇಡ್‍ಗಳಿಂದಲೇ ಅಪಾಯ ಬಂದೊದಗಿದೆ!

June 12, 2018

ಮೈಸೂರು:  ಸುಗಮ ಸಂಚಾರಕ್ಕೆ ಅನುಕೂಲವಾಗಲೆಂದು ಹಾಗೂ ಅನಾಹುತಕ್ಕೆ ಆಸ್ಪದ ನೀಡ ಬಾರದೆಂದು ಹಾಕಿರುವ ಬ್ಯಾರಿಕೇಡ್ ಗಳನ್ನೇ ಭೇದಿಸಿ ಸಂದುಗೊಂದುಗಳಲ್ಲಿ ಬಹುಪಾಲು ಪಾದಚಾರಿಗಳು ರಸ್ತೆ ದಾಟು ವುದು ಒಂದೆಡೆಯಾದರೆ, ಪಾದಚಾರಿಗಳ ಗಣನೆಗೆ ತೆಗೆದುಕೊಳ್ಳದೆ ಮುನ್ನುಗ್ಗುವ ವಾಹನ ಸವಾರರು ಮತ್ತೊಂದೆಡೆ.

ಈ ರೀತಿಯ ಸನ್ನಿವೇಶ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಕೆಆರ್ ವೃತ್ತ ದಿಂದ ಆಯುರ್ವೇದ ಕಾಲೇಜು ವೃತ್ತದ Àವರೆಗೆ ಸಾಮಾನ್ಯ ಸಂಗತಿಯಾಗಿದೆ. ಇಲ್ಲಿ ರಸ್ತೆ ವಿಭಜಕಕ್ಕೆ ಪರ್ಯಾಯವಾಗಿ ಬ್ಯಾರಿಕೇಡ್‍ಗಳನ್ನು ಒಂದಕ್ಕೊಂದು ಸೇರಿ ಕಟ್ಟುವ ಮೂಲಕ ಸುಗಮ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಕಿಡಿಗೇಡಿಗಳು ಬ್ಯಾರಿಕೇಡ್‍ಗಳನ್ನು ಅಲ್ಲಲ್ಲಿ ಬೇರ್ಪಡಿಸಿರುವ ಅಡ್ಡದಾರಿಗಳೇ ಸಹಜ ವಾಗಿ ಎಲ್ಲಾ ಸಾರ್ವಜನಿಕರಿಗೆ ರಸ್ತೆ ದಾಟುವ ಮಾರ್ಗಗಳಾಗಿ ಪರಿಣಮಿಸಿವೆ. ಈ ರೀತಿಯ ಅಡ್ಡ ದಾರಿಯ ಸಂದುಗಳಲ್ಲಿ ರಸ್ತೆ ದಾಟುವ ಅನೇಕರು ತಮ್ಮ ಎಡಭಾಗ ದಿಂದ ಬರುವ ವಾಹನಗಳ ಪರಿವೇ ಇಲ್ಲದೆ ಮುಂದೆ ಸಾಗುತ್ತಿದ್ದರೆ, ಇದ್ದಕ್ಕಿದ್ದಂತೆ ಎದು ರಾಗುವ ಪಾದಚಾರಿಗಳನ್ನು ಕಂಡು ಸವಾ ರರು ವಾಹನದ ವೇಗಕ್ಕೆ ಹಿಡಿತ ಹಾಕಲು ಹರಸಾಹಸಪಡುತ್ತಿದ್ದಾರೆ. ದೇವರಾಜ ಮಾರುಕಟ್ಟೆ, ಕೆಆರ್ ಆಸ್ಪತ್ರೆ ಸೇರಿದಂತೆ ಅಂಗಡಿ-ಮುಂಗಟ್ಟುಗಳಿಗೆ ಬರುವ ಸಾರ್ವ ಜನಿಕರು ಬ್ಯಾರಿಕೇಡ್‍ಗಳನ್ನು ಬೇರ್ಪಟ್ಟಿ ರುವ ಸಂದುಗಳಲ್ಲೇ ರಸ್ತೆ ದಾಟುತ್ತಿದ್ದಾರೆ. ಬೇರ್ಪಡುವ ಬ್ಯಾರಿಕೇಡ್‍ಗಳನ್ನು ಸಂಚಾರ ಪೊಲೀಸರು ಮತ್ತೆ ಜೋಡಿಸಿ ಕಟ್ಟಿದರೆ, ಪುನಃ ಅವುಗಳನ್ನು ಬೇರ್ಪಡಿಸುವ ಕಿಡಿ ಗೇಡಿಗಳು ಅಡ್ಡದಾರಿಗಳನ್ನು ಮಾಡಿಟ್ಟು ಸಂಚಾರಕ್ಕೆ ಸಮಸ್ಯೆ ತಂದಿಡುತ್ತಿದ್ದಾರೆ. ಮತ್ತೊಂದೆಡೆ ವಾಹನ ಸವಾರರು ಸಂಚಾರ ನಿಮಯಗಳನ್ನು ಗಾಳಿಗೆ ತೋರಿ ತಾ ಮುಂದು, ನಾ ಮುಂದು ಎಂದು ಅತಿ ವೇಗದಲ್ಲಿ ಮುನ್ನುಗ್ಗುತ್ತಿದ್ದು, ಆ ಮೂಲಕ ಅನಾಹುತಕ್ಕೆ ಎಡೆ ಮಾಡಿಕೊಡುತ್ತಿದ್ದಾರೆ.

ಸಂಚಾರ ಪೊಲೀಸರ ಹೆಲ್ಮೆಟ್ ತಪಾ ಸಣೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅನೇಕ ದ್ವಿಚಕ್ರ ವಾಹನ ಸವಾರರು ಅಡ್ಡ ದಿಡ್ಡಿಯಾಗಿಯೂ ನುಗ್ಗುತ್ತಿರುವುದು ಆಗಾಗ್ಗೆ ಇಲ್ಲಿ ಕಂಡು ಬರುತ್ತಿರುತ್ತಿದ್ದು, ಇಲ್ಲಿನ ಸಂದುಗಳಲ್ಲಿ ರಸ್ತೆ ದಾಟಲು ಬರುವವರಿಗೆ ಇದರಿಂದ ಸಮಸ್ಯೆ ಆಗುವ ಸಾಧ್ಯತೆಯೂ ಹೆಚ್ಚಿದೆ. ಈ ಹಿಂದೆ ಬ್ಯಾರಿಕೇಡ್ ಬೇರ್ಪ ಡಿಸಿದ್ದ ಸಂದುಗಳಲ್ಲಿ ವಾಹನ ಸವಾರರು ದಿಢೀರನೆ ಸಾಗುತ್ತಿದ್ದರು. ಸದ್ಯ ಬ್ಯಾರಿ ಕೇಡ್ ಜರುಗಿಸಿದ್ದ ಜಾಗಗಳಲ್ಲಿ ವಾಹನ ಗಳ ಚಕ್ರವು ಸಾಗಲು ಸಾಧ್ಯವಾಗದಂತೆ ಮರಗಳು, ಕಬ್ಬಿಣದ ಕಂಬಿಗಳನ್ನು ಬ್ಯಾರಿ ಕೇಡ್‍ಗೆ ಅಳವಡಿಸಿ ಭದ್ರವಾಗಿ ಕಟ್ಟಲಾ ಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರ ದುಸ್ಸಾಹಸಕ್ಕೆ ಕಡಿವಾಣ ಬಿದ್ದಿದೆ.

ಜೀಬ್ರಾ ಕ್ರಾಸ್: ಇಲ್ಲಿ ರಸ್ತೆ ದಾಟಲು ಮೂರ್ನಾಲ್ಕು ಕಡೆಗಳಲ್ಲಿ ಬ್ಯಾರಿಕೇಡ್‍ಗಳನ್ನು ತೆರವು ಮಾಡಿ ಜೀಬ್ರಾ ಕ್ರಾಸ್ ಗುರುತು ಹಾಕಿ ದರೆ, ಪಾದಚಾರಿಗಳಿಗೆ ಅನುಕೂಲವಾಗ ಲಿದೆ ಎಂದು ಅನೇಕ ನಾಗರಿಕರು ಅಭಿ ಪ್ರಾಯಪಟ್ಟಿದ್ದಾರೆ. ಜೀಬ್ರಾ ಕ್ರಾಸ್‍ನೊಂ ದಿಗೆ ಸಂಚಾರ ಪೊಲೀಸರನ್ನು ನಿಯೋ ಜಿಸಿ ಆಗಾಗ್ಗೆ ವಾಹನಗಳನ್ನು ನಿಲ್ಲಿಸಲು ಪಾದಚಾರಿಗಳು ರಸ್ತೆ ದಾಟಲು ಅನು ಕೂಲ ಮಾಡಿಕೊಡಬೇಕು. ಈಗಾಗಲೇ ರಸ್ತೆ ದಾಟಲು ಇರುವ ಸುರಂಗ ಮಾರ್ಗ ಸಮರ್ಪಕ ಬಳಕೆಯಾಗುತ್ತಿಲ್ಲ. ಅಲ್ಲಿ ಶುಚಿತ್ವವೂ ಇಲ್ಲವಾಗಿದೆ. ಇದನ್ನು ಸರಿ ಪಡಿಸಿದರೆ, ಪಾದಚಾರಿಗಳಿಗೆ ಅನುಕೂಲ ವಾಗಲಿದೆ. ಜೊತೆಗೆ ಸಯ್ಯಾಜಿರಾವ್ ರಸ್ತೆಯಲ್ಲಿ ಚಿಕ್ಕಗಡಿಯಾರ ಎದುರು ಪಾದ ಚಾರಿಗಳು ರಸ್ತೆ ದಾಟುವ ಮೇಲ್ಸೆತುವೆ ನಿರ್ಮಿಸಿದರೆ, ರಸ್ತೆ ದಾಟುವ ಪಾದ ಚಾರಿಗಳಿಂದಾಗುವ ಒತ್ತಡ ರಸ್ತೆಗೆ ಇಲ್ಲ ವಾಗಲಿದೆ ಎಂದಿದ್ದಾರೆ.

Translate »