Tag: Sayyaji Rao Road

ಅಪಾಯದ ಅಂಚಿನಲ್ಲಿ ಪಾದಚಾರಿ ಸುರಂಗ ಮಾರ್ಗ
ಮೈಸೂರು

ಅಪಾಯದ ಅಂಚಿನಲ್ಲಿ ಪಾದಚಾರಿ ಸುರಂಗ ಮಾರ್ಗ

July 2, 2018

ಮೈಸೂರು:  ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಪಾದಚಾರಿ ಸುರಂಗ ಮಾರ್ಗ ಅಪಾಯದ ಅಂಚಿನಲ್ಲಿದೆ. ಧನ್ವಂತರಿ ರಸ್ತೆ ಕೂಡುವ ಸ್ಥಳದಲ್ಲಿ ಸಯ್ಯಾಜಿರಾವ್ ರಸ್ತೆಯ ಎರಡೂ ಬದಿಗಳಿಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಸುರಂಗ ಮಾರ್ಗ ಸದ್ಯ ಬಳಕೆಯಲ್ಲಿಲ್ಲ. ಆರೇಳು ತಿಂಗಳಿನಿಂದ ಗೇಟ್‍ಗೆ ಬೀಗ ಹಾಕಿ, ಬಂದ್ ಮಾಡಲಾಗಿದೆ. ಹೀಗಾಗಿ ಪಾದಚಾರಿಗಳು ರಸ್ತೆ ಮಧ್ಯೆ ಅಳವಡಿಸಿ ರುವ ಬ್ಯಾರಿಕೇಡ್‍ಗಳ ಸಂದುಗಳಲ್ಲಿ ನುಸುಳಿ, ವಾಹನ ದಟ್ಟಣೆ ನಡುವೆಯೇ ರಸ್ತೆ ದಾಟುವಂತಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾಗಿರುವ ಪಾದಚಾರಿ ಸುರಂಗ ಮಾರ್ಗ, ಇದೀಗ ಅನುಪಯುಕ್ತವಾಗಿದೆ….

ಮೈಸೂರು ಸಯ್ಯಾಜಿರಾವ್ ರಸ್ತೆಯಲ್ಲಿ  ವಾಹನ ಸಂಚಾರಕ್ಕೆ `ಅಡ್ಡ’ ದಾರಿ
ಮೈಸೂರು

ಮೈಸೂರು ಸಯ್ಯಾಜಿರಾವ್ ರಸ್ತೆಯಲ್ಲಿ  ವಾಹನ ಸಂಚಾರಕ್ಕೆ `ಅಡ್ಡ’ ದಾರಿ

June 26, 2018

ಮೈಸೂರು:  ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಸಂಚಾರಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕೃಷ್ಣರಾಜ ವೃತ್ತದಿಂದ ಸರ್ಕಾರಿ ಆಯುರ್ವೇದ ವೃತ್ತದವರೆಗೆ ಅಳವಡಿಸಿ ರುವ ಬ್ಯಾರಿಕೇಡ್‍ಗಳು ಅಸ್ತವ್ಯಸ್ತವಾಗಿದ್ದು, ಅಲ್ಲಲ್ಲಿ ಬ್ಯಾರಿಕೇಡ್‍ಗಳನ್ನು ಸರಿಸಿ, ಅಡ್ಡಾ ದಿಡ್ಡಿ ವಾಹನ ಚಾಲಿಸುವ ಪರಿಪಾಟ ಇಂದಿಗೂ ಮುಂದುವರಿದಿದೆ. ಪರಿಣಾಮ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ, ಸಾರ್ವಜನಿಕರು ತೊಂದರೆ ಅನುಭವಿ ಸುವಂತಾಗಿದೆ. ದಸರಾ ಜಂಬೂ ಸವಾರಿ ಇದೇ ಮಾರ್ಗವಾಗಿ ಸಾಗುವು ದರಿಂದ ಶಾಶ್ವತ ರಸ್ತೆ ವಿಭಜಕವನ್ನು ಅಳವಡಿಸದೆ, ಬ್ಯಾರಿಕೇಡ್‍ಗಳನ್ನು ಜೋಡಿಸಿ, ತಾತ್ಕಾಲಿಕ ವಿಭಜಕವನ್ನು ನಿರ್ಮಿಸಲಾಗಿದೆ. ಬ್ಯಾರಿಕೇಡ್‍ಗಳನ್ನು…

ಮೈಸೂರಿನಲ್ಲಿ ಸುಗಮ ಸಂಚಾರಕ್ಕೆ ಹಾಕಿದ ಬ್ಯಾರಿಕೇಡ್‍ಗಳಿಂದಲೇ ಅಪಾಯ ಬಂದೊದಗಿದೆ!
ಮೈಸೂರು

ಮೈಸೂರಿನಲ್ಲಿ ಸುಗಮ ಸಂಚಾರಕ್ಕೆ ಹಾಕಿದ ಬ್ಯಾರಿಕೇಡ್‍ಗಳಿಂದಲೇ ಅಪಾಯ ಬಂದೊದಗಿದೆ!

June 12, 2018

ಮೈಸೂರು:  ಸುಗಮ ಸಂಚಾರಕ್ಕೆ ಅನುಕೂಲವಾಗಲೆಂದು ಹಾಗೂ ಅನಾಹುತಕ್ಕೆ ಆಸ್ಪದ ನೀಡ ಬಾರದೆಂದು ಹಾಕಿರುವ ಬ್ಯಾರಿಕೇಡ್ ಗಳನ್ನೇ ಭೇದಿಸಿ ಸಂದುಗೊಂದುಗಳಲ್ಲಿ ಬಹುಪಾಲು ಪಾದಚಾರಿಗಳು ರಸ್ತೆ ದಾಟು ವುದು ಒಂದೆಡೆಯಾದರೆ, ಪಾದಚಾರಿಗಳ ಗಣನೆಗೆ ತೆಗೆದುಕೊಳ್ಳದೆ ಮುನ್ನುಗ್ಗುವ ವಾಹನ ಸವಾರರು ಮತ್ತೊಂದೆಡೆ. ಈ ರೀತಿಯ ಸನ್ನಿವೇಶ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಕೆಆರ್ ವೃತ್ತ ದಿಂದ ಆಯುರ್ವೇದ ಕಾಲೇಜು ವೃತ್ತದ Àವರೆಗೆ ಸಾಮಾನ್ಯ ಸಂಗತಿಯಾಗಿದೆ. ಇಲ್ಲಿ ರಸ್ತೆ ವಿಭಜಕಕ್ಕೆ ಪರ್ಯಾಯವಾಗಿ ಬ್ಯಾರಿಕೇಡ್‍ಗಳನ್ನು ಒಂದಕ್ಕೊಂದು ಸೇರಿ ಕಟ್ಟುವ ಮೂಲಕ ಸುಗಮ ಸಂಚಾರ ವ್ಯವಸ್ಥೆ ಮಾಡಲಾಗಿದೆ….

Translate »