ಅಪಾಯದ ಅಂಚಿನಲ್ಲಿ ಪಾದಚಾರಿ ಸುರಂಗ ಮಾರ್ಗ
ಮೈಸೂರು

ಅಪಾಯದ ಅಂಚಿನಲ್ಲಿ ಪಾದಚಾರಿ ಸುರಂಗ ಮಾರ್ಗ

July 2, 2018

ಮೈಸೂರು:  ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಪಾದಚಾರಿ ಸುರಂಗ ಮಾರ್ಗ ಅಪಾಯದ ಅಂಚಿನಲ್ಲಿದೆ.

ಧನ್ವಂತರಿ ರಸ್ತೆ ಕೂಡುವ ಸ್ಥಳದಲ್ಲಿ ಸಯ್ಯಾಜಿರಾವ್ ರಸ್ತೆಯ ಎರಡೂ ಬದಿಗಳಿಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಸುರಂಗ ಮಾರ್ಗ ಸದ್ಯ ಬಳಕೆಯಲ್ಲಿಲ್ಲ. ಆರೇಳು ತಿಂಗಳಿನಿಂದ ಗೇಟ್‍ಗೆ ಬೀಗ ಹಾಕಿ, ಬಂದ್ ಮಾಡಲಾಗಿದೆ. ಹೀಗಾಗಿ ಪಾದಚಾರಿಗಳು ರಸ್ತೆ ಮಧ್ಯೆ ಅಳವಡಿಸಿ ರುವ ಬ್ಯಾರಿಕೇಡ್‍ಗಳ ಸಂದುಗಳಲ್ಲಿ ನುಸುಳಿ, ವಾಹನ ದಟ್ಟಣೆ ನಡುವೆಯೇ ರಸ್ತೆ ದಾಟುವಂತಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾಗಿರುವ ಪಾದಚಾರಿ ಸುರಂಗ ಮಾರ್ಗ, ಇದೀಗ ಅನುಪಯುಕ್ತವಾಗಿದೆ. ಅಲ್ಲದೆ ನಗರ ಪಾಲಿಕೆಯ ನಿರ್ಲಕ್ಷ್ಯತೆಯಿಂದಾಗಿ ಅಪಾಯದ ಅಂಚಿಗೂ ತಲುಪಿದೆ.

ಸುರಂಗ ಪಾದಚಾರಿ ಮಾರ್ಗದಲ್ಲಿ ಮಂಡಿ ಯುದ್ದ ಕೊಳಚೆ ನೀರು ತುಂಬಿದೆ. ನೀರಿನಲ್ಲಿ ಮುಳುಗಿರುವ ತ್ಯಾಜ್ಯ ಕರಗಿ ದುರ್ವಾಸನೆ ಬೀರುವ ಹಂತ ತಲುಪಿದೆ. ಧನ್ವಂತರಿ ರಸ್ತೆಯ ಮಳೆ ನೀರು ಚರಂಡಿಯಲ್ಲಿ ತುಂಬಿ, ರಸ್ತೆಗೆ ಹರಿಯುತ್ತಿರುವ ಕೊಳಚೆ ನೀರು, ಅದ್ಯಾವ ಮಾರ್ಗ ದಿಂದಲೋ ಪಾದಚಾರಿ ಸುರಂಗ ಮಾರ್ಗದ ಮಾಳಿಗೆ ಯಿಂದ ತೊಟ್ಟಿಕ್ಕುತ್ತಿದೆ. ಪರಿಣಾಮ ಯಾವಾಗ ಮಾಳಿಗೆ ಕುಸಿದು ಬಿದ್ದು, ಅನಾ ಹುತ ಸಂಭವಿಸುವುದೋ ಗೊತ್ತಿಲ್ಲ. ಮಾಳಿಗೆ ಯಿಂದ ಸೋರುತ್ತಿರುವ ನೀರಿನಿಂದ ಪಾದಚಾರಿ ಮಾರ್ಗ ತುಂಬಿಹೋಗಿದೆ. ಇಲ್ಲಿ ತುಂಬಿರುವ ನೀರು ಯಾವ ಮೂಲ ದಲ್ಲಿ ಹರಿದು ಚರಂಡಿ ಸೇರುತ್ತದೆ ಎಂಬು ದನ್ನು ಪಾಲಿಕೆಯ ಅಧಿಕಾರಿಗಳೇ ತೋರ ಬೇಕಿದೆ. ಇಂತಹ ದುಸ್ಥಿತಿಯಲ್ಲಿ ರುವ ಪಾದಚಾರಿ ಸುರಂಗ ಮಾರ್ಗ ಬಂದ್ ಆಗಿ ಆರೇಳು ತಿಂಗಳೇ ಉರುಳಿವೆಯಾ ದರೂ, ಯಾವುದೇ ಕ್ರಮ ಕೈಗೊಂಡಿಲ್ಲ.

ಹಿಂದೆ ಈ ಸುರಂಗ ಮಾರ್ಗದಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದ ಪಾದ ಚಾರಿಗಳು, ಇದೀಗ ಅತ್ತ ಸುಳಿಯುವುದಕ್ಕೂ ಭಯಪಡುತ್ತಿದ್ದಾರೆ. ಮಾಳಿಗೆಯಿಂದ ನೀರು ಸೋರುತ್ತಿರುವುದರಿಂದ ಕುಸಿದು ಬೀಳಬಹುದೆಂಬ ಆತಂಕವೂ ಸೃಷ್ಟಿ ಯಾಗಿದೆ. ಇದರ ನಡುವೆಯೂ ಅನೈತಿಕ ಚಟುವಟಿಕೆಗಾಗಿ ಒಂದು ಭಾಗದ ಬೀಗ ವನ್ನೂ ಮುರಿಯಲಾಗಿದೆ. ಆರೇಳು ತಿಂಗಳಿನಿಂದ ಇದೇ ದುಸ್ಥಿತಿಯಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ಕಿಂಚಿತ್ತೂ ತಲೆಕೆಡಿ ಸಿಕೊಂಡಿಲ್ಲ. ಸುರಂಗದ ಮಾಳಿಗೆಯಿಂದ ಸೋರುತ್ತಿರುವ ನೀರು ಎಲ್ಲಿಂದ ಬರುತ್ತಿದೆ? ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ. ಧನ್ವಂತರಿ ರಸ್ತೆಯ ಚರಂಡಿಯಿಂದ ನೀರು ರಸ್ತೆಗೆ ಹರಿಯುತ್ತಿರುವ ಬಗ್ಗೆ ಪಾಲಿಕೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಸಾಂಸ್ಕೃತಿಕ ನಗರದ ಹೃದಯ ಭಾಗ ದಲ್ಲಿರುವ ಈ ಪಾದಚಾರಿ ಸುರಂಗ ಮಾರ್ಗದ ದುಸ್ಥಿತಿ, ಸ್ವಚ್ಛ ನಗರಿ ಗರಿಯನ್ನು ಮಣ್ಣುಪಾಲು ಮಾಡುವಂತಿದೆ. ಸದಾ ವಾಹನ ದಟ್ಟಣೆ ಇರುವ ಈ ಸ್ಥಳದಲ್ಲಿ ಸುರಂಗ ಪಾದಚಾರಿ ಮಾರ್ಗ ನಿರ್ಮಿಸಿದ ಉದ್ದೇಶ ನಿಷ್ಫಲವಾಗಿದೆ. ಅವೈಜ್ಞಾನಿಕ ಕಾಮಗಾರಿ ಮೂಲಕ ಜನರ ಹಣವನ್ನು ಪೋಲು ಮಾಡುವುದಷ್ಟೇ ಅಲ್ಲದೆ, ಅವರ ಜೀವಕ್ಕೂ ಸಂಚಕಾರ ತಂದೊಡ್ಡುವ ಪರಿಪಾಠ ಮುಂದುವರಿದಿರುವುದಕ್ಕೆ ಇದು ಸಾಕ್ಷಿಯಾಗಿದೆ. ದುಸ್ಥಿತಿಯಲ್ಲಿರುವ ಪಾದಚಾರಿ ಸುರಂಗ ಮಾರ್ಗ ಕುಸಿದು ಬೀಳುವ ಮುನ್ನ ಕ್ರಮ ಕೈಗೊಳ್ಳದಿದ್ದರೆ, ಅನಾಹುತ ಕಟ್ಟಿಟ್ಟ ಬುತ್ತಿ.

ಮೇಯರ್ ಬಿ.ಭಾಗ್ಯವತಿ ಅವರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸ ಬೇಕು. ಪಾಲಿಕೆ ಕಮೀಷ್ನರ್ ಜಗದೀಶ್ ಅವರೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Translate »