ಕಾನೂನು ಪಾಲನೆಯಿಂದ ಅಪರಾಧ ಕ್ಷೀಣ
ಕೊಡಗು

ಕಾನೂನು ಪಾಲನೆಯಿಂದ ಅಪರಾಧ ಕ್ಷೀಣ

July 2, 2018

ವಿರಾಜಪೇಟೆ:  ನಾಗರಿಕ ಸಮಾಜ ದಲ್ಲಿ ಕಾನೂನಿನ ಅರಿವು ಅಗತ್ಯ. ಕಾನೂ ನನ್ನು ಪಾಲಿಸಿದಾಗ ಪ್ರಕರಣಗಳು ಕಡಿಮೆ ಯಾಗುತ್ತವೆ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಪೊಲೀಸ್ ಇಲಾಖೆ, ಲಯನ್ಸ್ ಕ್ಲಬ್ ವಿರಾಜಪೇಟೆ ಹಾಗೂ ಪಟ್ಟಣ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪುರಭವನದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಮಾ ಅವರು, ಮಗು ಹುಟ್ಟಿದ ದಿನಾಂಕ ದಿಂದ ಮನುಷ್ಯನ ಕೊನೆಯವರೆಗೂ ಕಾನೂನಿನ ಅಗತ್ಯವಿದೆ. ಜನರಿಗೆ ಸಮಸ್ಯೆ ಗಳಾದ ಕಾನೂನು ಹುಡುಕುವುದಕಿಂತ ಮೊದಲೇ ಕಾನೂನಿನ ಅರಿವು ಪಡೆದು ಕೊಂಡು ಘಟನೆಗಳು ನಡೆಯದಂತೆ ಎಚ್ಚರ ವಹಿಸಿ ಪ್ರತಿಯೊಬ್ಬರು ಉತ್ತಮ ಜೀವನ ನಡೆಸುವಂತಾಗಬೇಕು ಎಂದರು.
ಪೊಲೀಸ್ ಸರ್ಕಲ್ ಇನ್ಸ್‍ಪ್ಯೆಕ್ಟರ್ ಕುಮಾರ್ ಆರಾಧ್ಯ ಮಾತನಾಡಿ, ಕಾನೂನು ಅರಿಯ ದವನು ಶಿಕ್ಷೆಗೆ ಗುರಿಯಾಗುತ್ತಾನೆ.

ಕಾನೂನು ತಿಳಿದುಕೊಂಡಲ್ಲಿ ದೌರ್ಜನ್ಯಗಳು ಕಡಿಮೆ ಯಾಗುತ್ತವೆ. ಸಾರ್ವಜನಿಕ ಜಾಗದಲ್ಲಿ ಧೂಮ ಪಾನ ಮಾಡಬಾರದು, ಕಸ ಹಾಕಬಾ ರದು, ಸ್ವಚ್ಚತೆಯನ್ನು ಕಾಪಾಡಬೇಕೆಂದು ಸಂಘ ಸಂಸ್ಥೆಗಳು ಪ್ರಚಾರ ಮಾಡಿದರೂ ಕೆಲವರು ಅದನ್ನು ತಿಳಿದುಕೊಳ್ಳುತ್ತಿಲ್ಲ. ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಹೋಗಬಾರದೆಂದು ಎಚ್ಚರಿಕೆ ನೀಡಿದರೂ ಅರ್ಥಮಾಡಿಕೊಳ್ಳದವರು ಶಿಕ್ಷೆ ಅನುಭವಿ ಸುತ್ತಾರೆ. ಅದರಿಂದ ಕಾನೂನು ಏನು ಹೇಳುತ್ತದೆ ಎಂಬುದನ್ನು ಅರಿತುಕೊಂಡು ದೇಶದ ಅಭಿವೃದ್ಧಿ ಕಡೆಗೆ ಗಮನ ಹರಿ ಸುವುದು ಉತ್ತಮ ಎಂದರು.

ವಕೀಲರಾದ ಸಿಂಧೂರ ಎನ್.ಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತ ನಾಡಿ, ಎಲ್ಲಾ ದೇಶಗಳಿಗಿಂತ ಭಾರತ ದೇಶದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ರುವುದರಿಂದ ಎಲ್ಲಾ ಭಾಷೆಯ ಜನರನ್ನು ಒಂದುಗೂಡಿಸುವಂತ ಕಾನೂನು ಅಗತ್ಯ. ಪ್ರತಿಯೊಬ್ಬರು ಪುಸ್ತಕಗಳನ್ನು ಓದುವುದ ರಿಂದ ಮಾನವನ ಜ್ಞಾನ ಶಕ್ತಿ ಹೆಚ್ಚುವುದ ರೊಂದಿಗೆ ಜೀವನದ ಬದುಕು ಬದಲಾಗು ತ್ತದೆ. ಸ್ವಚ್ಚತೆ ಎಂಬುದು ಪ್ರಚಾರ ಮಾಡಿ ದರೆ ಸಾಲದು ಪ್ರತಿಯೊಬ್ಬರ ಮನದಲ್ಲಿ ಸ್ವಚ್ಚತೆ ಕಾಪಾಡುವ ಭಾವನೆ ಬರಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಎಂ.ಎಂ.ಜಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ತ್ರಿಶು ಗಣಪತಿ, ಕಾರ್ಯದರ್ಶಿ ಪ್ರಧಾನ್ ತಮ್ಮಯ್ಯ, ವಕೀಲರುಗಳು, ಪಟ್ಟಣ ಪಂಚಾಯಿತಿಯ ಪೌರ ನೌಕರರು, ಸಾರ್ವ ಜನಿಕರು ಉಪಸ್ಥಿತರಿದ್ದರು.

Translate »